ದೃಶ್ಯ ನಾಟಕೋತ್ಸವದಲ್ಲಿ ನಾಟಕ ಸ್ಪರ್ಧೆ ಜೊತೆಗೆ ಕೈಲಾಸಂ, ಷೇಕ್ಸ್ಫಿಯರ್ ನಾಟಕ
Drishya Rangothsava 2024: ದೃಶ್ಯ ರಂಗತಂಡ ಆಯೋಜಿಸಿರುವ ‘ದೃಶ್ಯ ನಾಟಕೋತ್ಸವ’ ಮಾರ್ಚ್ 10ರಂದು ನಡೆಯಲಿದ್ದು, ಎರಡು ನಾಟಕ ಪ್ರದರ್ಶನಗಳ ಜೊತೆಗೆ, ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೀದಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ.
ದೃಶ್ಯ ರಂಗತಂಡವು (Theater) ‘ದೃಶ್ಯ ನಾಟಕೋತ್ಸವ 2024’ ಆಯೋಜನೆ ಮಾಡಿದೆ. ಮಾರ್ಚ್ 10ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ದೃಶ್ಯ ನಾಟಕೋತ್ಸವ ಉದ್ಘಾಟನೆ ನಡೆಯಲಿದ್ದು, ನಾಟಕ ಪ್ರದರ್ಶನದ ಜೊತೆಗೆ ಬೆಂಗಳೂರಿನ ವಿವಿಧ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೀದಿ ನಾಟಕ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ. ನಾಟಕೋತ್ಸವದಲ್ಲಿ ಕಿಪಿ ಕೈಲಾಸಂ ರಚನೆಯ ‘ಪೋಲಿ ಕಿಟ್ಟಿ’ ಹಾಗೂ ವಿಲಿಯಮ್ಸ್ ಷೇಕ್ಸ್ಫಿಯರ್ ರಚನೆಯ ‘ಟ್ವೆಲ್ಫ್ತ್ ಲೈಫ್’ ನಾಟಕವನ್ನು ಸಹ ಪ್ರದರ್ಶಿಸಲಾಗುತ್ತಿದೆ.
ಮಾರ್ಚ್ 10ರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ವಿವಿಧ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೀದಿ ನಾಟಕ ಸ್ಪರ್ಧೆ ಆರಂಭವಾಗಲಿದೆ. ಬೆಳಿಗ್ಗೆ 11:30ಕ್ಕೆ ‘ಪೋಲಿ ಕಿಟ್ಟಿ’ ನಾಟಕ ಪ್ರದರ್ಶನ ನಡೆಯಲಿದೆ. ನಾಟಕವನ್ನು ದಾಕ್ಷಾಯಿಣಿ ಭಟ್ ಅವರು ನಿರ್ದೇಶನ ಮಾಡಿದ್ದಾರೆ. ಸಂಜೆ 6 ಗಂಟೆಗೆ ದೃಶ್ಯ ಯುವರಂಗ ಪುರಸ್ಕಾರ ನಡೆಯಲಿದೆ. ಬಿವಿ ಕಾರಂತ ಪ್ರಶಸ್ತಿ ಪುರಸ್ಕೃತರಿಗೆ ರಂಗಗೌರವ ಮಾಡಲಾಗುತ್ತದೆ. ಸಂಜೆ 7 ಕ್ಕೆ ವಿಲಿಯಂ ಷೇಕ್ಸ್ಫಿಯರ್ ರಚನೆಯ ‘ಟ್ವೆಲ್ಫ್ತ್ ಲೈಫ್’ ನಾಟಕ ಪ್ರದರ್ಶನ ನಡೆಯಲಿದ್ದು, ನಾಟಕವನ್ನು ಲಕ್ಷ್ಮಿನಾರಾಯಣ ಭಟ್ಟರು ಅನುವಾದ ಮಾಡಿದ್ದು, ನಾಟಕವನ್ನು ದಾಕ್ಷಾಯಿಣಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:‘ಹೊಟ್ಟೆ ಪಾಡಿಗೆ ಏನು ಮಾಡ್ತೀಯಾ ಕೇಳಿದ್ರು’; ರಂಗಭೂಮಿ ದಿನಗಳನ್ನು ನೆನಪಿಸಿಕೊಂಡ ಅನಂತ್ ನಾಗ್
ಪ್ರದರ್ಶನಗೊಳ್ಳಲಿರುವ ‘ಪೋಲೀ ಕಿಟ್ಟಿ’ ನಾಟಕವು ರೀತಿಯ ವಿನೋದಾತ್ಮಕ ವಿಡಂಬನಾ ನಾಟಕವಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಲೇವಡಿ ಮಾಡುವ ನಾಟಕವು ಇಂದಿಗೂ ಪ್ರಸ್ತುತವಾಗಿದೆ. ಜ್ಞಾನವೆಂಬುದು ಬರೀ ಪುಸ್ತಕದಲ್ಲಿ ಇರುವುದಲ್ಲ, ನಮ್ಮ ಸುತ್ತಮುತ್ತಲಿನ ವಾಸ್ತವ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕು ಅದೇ ನಿಜವಾದ ಶಿಕ್ಷಣ. ಶಿಸ್ತು ಒಳ್ಳೆಯದು, ಆದರೆ ಬಹಿರಂಗವಾದ ಹೇಳಿಕೆಗಳಿಂದ ಅದು ಬರುವುದಿಲ್ಲ, ಅದು ಅ೦ತರ೦ಗದಿಂದ ಒಡಮೂಡಬೇಕು ಎ೦ಬುದನ್ನು ಮನೋಜ್ಞವಾಗಿ ಈ ಪ್ರಯೋಗವು ನಮ್ಮೊಳಗಿನ ಸಾಮಾಜಿಕ ಕಳಕಳಿಯನ್ನು ಒರೆಗೆ ಹಚ್ಚುತ್ತದೆ.
‘ಟ್ವೆಲ್ಫ್ತ್ ನೈಟ್’ ನಾಟಯಕವು, ಅವಳಿ-ಜವಳಿಗಳು ಹಡಗಿನಲ್ಲಿ ಪ್ರಯಾಣಿಸುವಾಗ ಚಂಡಮಾರುತದಿಂದ ಬೇರೆಬೇರೆಯಾಗಿ, ಪುನಃ ಬದುಕನ್ನು ಕಟ್ಟಿಕೊಳ್ಳುವ ಕಥೆ ಇದು. ಒಳಿತಿನ ಕುರಿತಾದ ನಂಬಿಕೆ, ವಿಶ್ವ ಬದುಕಿನ ಬಗೆಗೆ ಇರುವ ಪ್ರಾಮಾಣಿಕ ವಿಶ್ವಾಸ ಬದುಕನ್ನು ಬದಲಾಯಿಸಬಲ್ಲದು ಎಂಬ ಆಶಯವನ್ನು ಈ ನಾಟಕ ಹೊಂದಿದೆ. ಕ್ರಿಸ್ಮಸ್ ಹಬ್ಬವಾದ ಹನ್ನೆರಡನೇ ದಿನದ ರಾತ್ರಿಯಂದು ಅಂದಿನ ಇಂಗ್ಲೆಂಡಿನಲ್ಲಿ “ಫೀಸ್ಟ್ ಆಫ್ ಎಪಿಫೆನಿ” ಎಂಬ ಕ್ಯಾಥೋಲಿಕ್ ಹಬ್ಬವನ್ನು ಆಚರಿಸುತ್ತಿದ್ದರು. ಆ ಹಬ್ಬದಂದು ಸೇವಕರು ತಮ್ಮ ಸ್ವಾಮಿಗಳಂತೆ, ಹೆಂಗಸರು ಗಂಡಸರಂತೆ ವೇಷ ಧರಿಸಿ ತರಲೆ ತಿಕ್ಕಾಟಗಳಲ್ಲಿ ಪಾಲ್ಗೊಳ್ಳುತ್ತ ಅದರಿಂದ ಉಂಟಾಗುತ್ತಿದ್ದ ಹಾಸ್ಯ ಹಾಗು ಗೊಂದಲಗಳಿಂದ ಸಂತಸಪಡುತ್ತಿದ್ದರು. ಈ ವಿಧಾನಗಳಿಂದ ಹುಟ್ಟುತ್ತಿದ್ದ ಲಿಂಗ ಆಧಾರಿತ ಗೊಂದಲಗಳೇ ಈ ನಾಟಕಕ್ಕೆ ಸ್ಫೂರ್ತಿ, ಆದ್ದರಿಂದ ಈ ನಾಟಕವನ್ನು “ಟ್ವಿಲ್ಫ್ ನೈಟ್/ ವಾಟ್ ಯೂ ಬಲ್” ಎಂದು ಹೆಸರಿಸಲಾಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ