ಟೈಟಲ್ ಲಾಂಚ್ಗೆ ಕಮಲ್ ಹಾಸನ್ ಎಂದು ಹಾಸನದಿಂದ ಕಮಲಾನ ಕರೆಸಿದ ನಿರ್ದೇಶಕರು; ಮುಂದೇನಾಯ್ತು?
ಈ ಚಿತ್ರದ ಟೈಟಲ್ ಲಾಂಚ್ಗೆ ಕಮಲ್ ಹಾಸನ್ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ನಿರ್ದೇಶಕ ಮಧುಚಂದ್ರ ಅವರು ತಂಡಕ್ಕೆ ಪ್ರಾಮಿಸ್ ಮಾಡಿದ್ದರು. ಅವರು ಕನ್ನಡ ಸಿನಿಮಾ ಟೈಟಲ್ ಲಾಂಚ್ ಮಾಡಲು ಬೆಂಗಳೂರಿಗೆ ಬರುತ್ತಾರೆ ಎಂದರೆ ಸಹಜವಾಗಿ ಖುಷಿ ಆಗಿಯೇ ಆಗುತ್ತದೆ. ಕಮಲ್ ಅವರಿಗಾಗಿ ಇಡೀ ತಂಡ ಕಾತುರದಿಂದ ಕಾಯುತ್ತಾ ಇತ್ತು. ಆದರೆ ಅಲ್ಲಾಗಿದ್ದೇ ಬೇರೆ.
ಸಿನಿಮಾ ಜನರಿಗೆ ಹೆಚ್ಚು ರೀಚ್ ಆಗಬೇಕು ಎಂದರೆ ಅದಕ್ಕೆ ಪ್ರಚಾರ ಅದ್ದೂರಿಯಾಗಿಯೇ ನೀಡಬೇಕು. ಇದರ ಜೊತೆಗೆ ಹೊಸ ರೀತಿಯಲ್ಲಿ ಬಂದರೆ ಬೇಗ ಜನರಿಗೆ ಕನೆಕ್ಟ್ ಆಗುತ್ತದೆ. ಈಗ ‘ವಾಸ್ಕೋಡಿಗಾಮಾ’ ಹಾಗೂ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಧುಚಂದ್ರ ಅವರು ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಚಿತ್ರಕ್ಕೆ ‘MR ರಾಣಿ’ (Mr. Rani) ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಟೈಟಲ್ ಲಾಂಚ್ಗೆ ಹೊಸ ರೀತಿಯ ಪ್ರಯೋಗ ಮಾಡಲಾಗಿದೆ.
ಈ ಚಿತ್ರದ ಟೈಟಲ್ ಲಾಂಚ್ಗೆ ಕಮಲ್ ಹಾಸನ್ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ನಿರ್ದೇಶಕ ಮಧುಚಂದ್ರ ಅವರು ತಂಡಕ್ಕೆ ಪ್ರಾಮಿಸ್ ಮಾಡಿದ್ದರು. ಕಮಲ್ ಹಾಸನ್ ಸಖತ್ ಬ್ಯುಸಿ. ಅವರು ಕನ್ನಡ ಸಿನಿಮಾ ಟೈಟಲ್ ಲಾಂಚ್ ಮಾಡಲು ಬೆಂಗಳೂರಿಗೆ ಬರುತ್ತಾರೆ ಎಂದರೆ ಸಹಜವಾಗಿ ಖುಷಿ ಆಗಿಯೇ ಆಗುತ್ತದೆ. ಕಮಲ್ ಅವರಿಗಾಗಿ ಇಡೀ ತಂಡ ಕಾತುರದಿಂದ ಕಾಯುತ್ತಾ ಇತ್ತು. ಆದರೆ ಅಲ್ಲಾಗಿದ್ದೇ ಬೇರೆ.
ಕಮಲ್ ಹಾಸನ್ ಬರಲಿಲ್ಲ. ಆದರೆ, ಹಾಸನದಿಂದ ಕಮಲಾ ಎಂಬುವವರನ್ನು ಕರೆದುಕೊಂಡು ಬಂದು ಚೀಟ್ ಮಾಡಿರುತ್ತಾರೆ ನಿರ್ದೇಶಕ ಮಧುಚಂದ್ರ. ಬಳಿಕ ನಿರ್ದೇಶಕರಿಗೆ ನಿರ್ಮಾಪಕರೆಲ್ಲರೂ ಸೇರಿ ಗೂಸಾ ಕೊಡುತ್ತಾರೆ. ಹೀಗೆ ತಮಾಷೆಯಾಗಿರುವ ವಿಡಿಯೋ ಮೂಲಕ ಚಿತ್ರದ ಶೀರ್ಷಿಕೆ ರಿವೀಲ್ ಮಾಡಲಾಗಿದೆ.
‘ಟೈಟಲ್ ಎಷ್ಟು ಕ್ರೇಜಿ ಆಗಿದೆಯೋ ಕಥೆ ಕೂಡ ಅಷ್ಟೇ ಕ್ರೇಜಿ ಆಗಿದೆ’ ಅನ್ನೋದು ನಿರ್ದೇಶಕ ಮಧುಚಂದ್ರ ಅವರ ಮಾತು. ಈ ಸಿನಿಮಾದಲ್ಲಿ ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ನಟಿಸಿದ್ದಾರೆ. ಇವರಿಗೆ ಪಾರ್ವತಿ ನಾಯರ್ ಜೊತೆಯಾಗಿದ್ದಾರೆ. ಶ್ರೀವಸ್ತ, ಲಕ್ಷ್ಮೀ ಕಾರಂತ್, ರೂಪ ಪ್ರಭಾಕರ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: ಹೂಡಿಕೆ 10 ಕೋಟಿ ಗಳಿಸಿದ್ದು 100 ಕೋಟಿ: ಸಿನಿಮಾ ನೋಡಿ ಭೇಷ್ ಎಂದ ಕಮಲ್ ಹಾಸನ್
ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಕ್ರೌಡ್ ಫಂಡಿಂಗ್ ಮಾಡಲಾಗಿದೆ. 100ಕ್ಕೂ ಹೆಚ್ಚು ಮಂದಿ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರವೀಂದ್ರನಾಥ್ ಟಿ ಕ್ಯಾಮೆರಾ ಹ್ಯಾಂಡಲ್ ಮಾಡಿದ್ದಾರೆ. ಮಧು ತುಂಬಕೆರೆ ಸಂಕಲನ ಚಿತ್ರಕ್ಕೆ ಇದೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಚಾಲ್ತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Sat, 16 March 24