ಹೂಡಿಕೆ 10 ಕೋಟಿ ಗಳಿಸಿದ್ದು 100 ಕೋಟಿ: ಸಿನಿಮಾ ನೋಡಿ ಭೇಷ್ ಎಂದ ಕಮಲ್ ಹಾಸನ್

Manjummel Boys: ಕೇವಲ 10 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಮಲಯಾಳಂ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಂದಹಾಗೆ ಕಮಲ್ ಹಾಸನ್​ ಸಹ ಸಿನಿಮಾ ವೀಕ್ಷಿಸಿದ್ದು, ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದು ಈ ಸಿನಿಮಾ?

ಹೂಡಿಕೆ 10 ಕೋಟಿ ಗಳಿಸಿದ್ದು 100 ಕೋಟಿ: ಸಿನಿಮಾ ನೋಡಿ ಭೇಷ್ ಎಂದ ಕಮಲ್ ಹಾಸನ್
ಮಂಜುಮೆಲ್ ಬಾಯ್ಸ್
Follow us
ಮಂಜುನಾಥ ಸಿ.
|

Updated on:Mar 05, 2024 | 2:06 PM

ಭಾರಿ ಬಜೆಟ್, ದೊಡ್ಡ ಸ್ಟಾರ್ ನಟರನ್ನು ಹೊಂದಿದ ಸಿನಿಮಾಗಳು ದೊಡ್ಡ ಮೊತ್ತದ ಕಲೆಕ್ಷನ್ ಮಾಡುವುದು ಆಶ್ಚರ್ಯವಲ್ಲ. ಆದರೆ ಯಾವುದೇ ಸ್ಟಾರ್​ಗಳಿಲ್ಲದ, ಕಡಿಮೆ ಬಜೆಟ್​ನ ಸಿನಿಮಾಗಳು ದೊಡ್ಡ ಕಲೆಕ್ಷನ್ ಮಾಡುವ ಘಟನೆಗಳು ಅಪರೂಪದಲ್ಲಿ ಅಪರೂಪ. ಆದರೆ ಈ ಅಪರೂಪದ ವಿದ್ಯಮಾನಗಳು ಇತರೆ ಚಿತ್ರರಂಗಕ್ಕೆ ಹೋಲಿಸಿದರೆ ಕೇರಳ ಚಿತ್ರರಂಗಕ್ಕೆ ತುಸು ಹೆಚ್ಚು. ಕಡಿಮೆ ಬಜೆಟ್​ನ ಅವರ ಸಿನಿಮಾಗಳು ವಿಶ್ವ ಬಾಕ್ಸ್ ಆಫೀಸ್​ನಲ್ಲಿ (Box Office) ಕಾಲ-ಕಾಲಕ್ಕೆ ದೊಡ್ಡ ಕಲೆಕ್ಷನ್ ಮಾಡುತ್ತಲೇ ಬಂದಿವೆ. ಇದೀಗ ಮತ್ತೊಂದು ಕಡಿಮೆ ಬಜೆಟ್​ನ ಮಲಯಾಳಂ ಸಿನಿಮಾ ಗ್ಲೋಬಲ್ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ.

ಫೆಬ್ರವರಿ 22 ಕ್ಕೆ ಬಿಡುಗಡೆ ಆದ ‘ಮಂಜ್ಞುಮೆಲ್ ಬಾಯ್ಸ’ ಮಲಯಾಳಂ ಸಿನಿಮಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ. ಸುಮಾರು 10 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಇದೀಗ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಚಿದಂಬರಂ ನಿರ್ದೇಶನದ ಈ ಸಿನಿಮಾ ನಿಜ ಘಟನೆ ಆಧರಿಸಿದ ಸಿನಿಮಾ ಆಗಿದ್ದು, ಸಿನಿಮಾದ ಹಾಸ್ಯ, ಥ್ರಿಲ್ಲರ್ ಅಂಶಗಳು ಪ್ರೇಕ್ಷಕರನ್ನು ಬಹುವಾಗಿ ಸೆಳೆದಿವೆ. ಮಂಜ್ಞುಮೆಲ್ ಬಾಯ್ಸ ಹೆಸರಿನ ಗುಂಪು ಕಟ್ಟಿಕೊಂಡು ತಮಿಳುನಾಡಿನ ಕೊಡೈಕೆನಲ್​ನ ‘ಗುಣಾ ಕೇವ್ಸ್​’ಗೆ ಪ್ರವಾಸ ಹೋಗುವ ಯುವಕರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾದ ಕನ್ನಡದ ‘ಕೆಆರ್​ಜಿ ಸ್ಟುಡಿಯೋಸ್’

ಕಮಲ್ ಹಾಸನ್​ರ ಅಭಿಮಾನಿಗಳಾದ ಯುವಕರು ಅವರ ನಟನೆಯ ‘ಗುಣ’ ಸಿನಿಮಾದ ಚಿತ್ರೀಕರಣ ಮಾಡಲಾದ ‘ಗುಣಾ ಕೇವ್ಸ್’ ಗೆ ಹೋದಾಗ ಗುಂಪಿನ ಒಬ್ಬ ಸದಸ್ಯ ಅಲ್ಲಿನ ಡೆವಿಲ್ಸ್ ಕಿಚನ್ ಎಂಬ ಅತ್ಯಂತ ದುರ್ಗಮ ಪ್ರತಾಪಕ್ಕೆ ಬಿದ್ದು ಬಿಡುತ್ತಾನೆ. ಆಗ ಉಳಿದ ಸದಸ್ಯರು ತಮ್ಮ ಗೆಳೆಯನನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆ ಎಂಬುದೇ ‘ಮಂಜ್ಞುಮೆಲ್ ಬಾಯ್ಸ’ ಸಿನಿಮಾದ ಕತೆ. ಸಿನಿಮಾದಲ್ಲಿ ಸೋಬಿನ್, ಶ್ರೀನಾಥ್ ಬಸ್ಸಿ, ಬಾಲು, ಲಾಲ್​ ಜಿ, ಸೇರಿದಂತೆ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ನಿಜ ಜೀವನದ ಮಂಜ್ಞುಮೆಲ್ ಬಾಯ್ಸ ಸಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾವನ್ನು ಕಮಲ್ ಹಾಸನ್ ಸಹ ವೀಕ್ಷಿಸಿದ್ದು, ಸಿನಿಮಾಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇತ್ತೀಚೆಗಷ್ಟೆ ತಮಿಳಿಗೆ ಡಬ್ ಆಗಿ ಬಿಡುಗಡೆ ಆಗಿದ್ದು, ತಮಿಳುನಾಡಿನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ರಜನೀಕಾಂತ್​ರ ‘ಲಾಲ್ ಸಲಾಂ’ ಸಿನಿಮಾದ ಕಲೆಕ್ಷನ್ ಅನ್ನು ಮೀರಿಸಿ ಉತ್ತಮ ಗಳಿಕೆಯನ್ನು ತಮಿಳುನಾಡಿನಲ್ಲಿ ‘ಮಂಜ್ಞುಮೆಲ್ ಬಾಯ್ಸ’ ಸಿನಿಮಾ ಮಾಡುತ್ತಿದೆ. ವಿಶ್ವದಾದ್ಯಂತ ಈ ವರೆಗೆ 100 ಕೋಟಿಗೂ ಹೆಚ್ಚು ಕಲೆಕ್ಷನ್ ಅನ್ನು ‘ಮಂಜ್ಞುಮೆಲ್ ಬಾಯ್ಸ’ ಸಿನಿಮಾ ಮಾಡಿದೆ. ಬೆಂಗಳೂರಿನಲ್ಲಿಯೂ ಸಹ ‘ಮಂಜ್ಞುಮೆಲ್ ಬಾಯ್ಸ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Tue, 5 March 24

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ