AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೋದಲ್ಲಿ ಇರೋ ಹುಡುಗಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ..

ಈ ಫೋಟೋದಲ್ಲಿ ಇರೋ ನಟಿ ಮೃಣಾಲ್ ಠಾಕೂರ್. ಈ ನಟಿಗೆ ಇಂದು (ಆಗಸ್ಟ್ 1) ಜನ್ಮದಿನ. ಎಲ್ಲರೂ ಮೃಣಾಲ್ ಠಾಕೂರ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಮೃಣಾಲ್ ಖ್ಯಾತಿ ಹೆಚ್ಚಿದೆ. ಮೃಣಾಲ್ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದನ್ನು ಕೆಲವರು ಹೋಲಿಕೆ ಮಾಡಿ ನೋಡುತ್ತಿದ್ದಾರೆ.

ಈ ಫೋಟೋದಲ್ಲಿ ಇರೋ ಹುಡುಗಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ..
ಈ ಫೋಟೋದಲ್ಲಿ ಇರೋ ಹುಡುಗಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ..
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 01, 2024 | 7:48 AM

Share

ಸ್ಟಾರ್ ನಟಿಯರ ಚೈಲ್ಡ್​ವುಡ್ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಕೆಲವೊಮ್ಮೆ ಸೆಲೆಬ್ರಿಟಗಳೇ ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಈಗ ಸ್ಟಾರ್ ನಟಿಯ ಫೋಟೋ ಒಂದು ವೈರಲ್ ಆಗಿದೆ. ಇದು ಅವರ ಮೊದಲ ಹಿಂದಿ ಸಿನಿಮಾ ಸಂದರ್ಭದ ಫೋಟೋ. ಈಗ ಅವರು ಗ್ಲಾಮರ್ ಗೊಂಬೆ. ಅಷ್ಟಕ್ಕೂ ಯಾರು ಆ ನಟಿ? ಅವರ ಈ ಫೋಟೋ ಈಗ ವೈರಲ್ ಆಗಲು ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಫೋಟೋದಲ್ಲಿ ಇರೋ ನಟಿ ಮೃಣಾಲ್ ಠಾಕೂರ್. ಈ ನಟಿಗೆ ಇಂದು (ಆಗಸ್ಟ್ 1) ಜನ್ಮದಿನ. ಎಲ್ಲರೂ ಮೃಣಾಲ್ ಠಾಕೂರ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಮೃಣಾಲ್ ಖ್ಯಾತಿ ಹೆಚ್ಚಿದೆ. ಮೃಣಾಲ್ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದನ್ನು ಕೆಲವರು ಹೋಲಿಕೆ ಮಾಡಿ ನೋಡುತ್ತಿದ್ದಾರೆ.

ಮೃಣಾಲ್ ಠಾಕೂರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಧಾರಾವಾಹಿ ಮೂಲಕ. ‘ಮುಜ್ಸೆ ಕುಚ್ ಕೆಹ್ತೀ ಯೇ ಕಮೋಶೀಯಾ’ ಚಿತ್ರದ ಮೂಲಕ ಮೃಣಾಲ್ ಅವರು ನಟನೆ ಆರಂಭಿಸಿದರು. ಅವರು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಾಗ ಅವರಿಗೆ ಕೇವಲ 20 ವರ್ಷ ವಯಸ್ಸು. ಆ ಬಳಿಕ 2014ರಲ್ಲಿ ಕೆಲವು ಮರಾಠಿ ಚಿತ್ರಗಳನ್ನು ಮಾಡಿದರು. 2018ರಲ್ಲಿ ರಿಲೀಸ್ ಆದ ‘ಲವ್ ಸೋನಿಯಾ’ ಚಿತ್ರದಲ್ಲಿ ಮೃಣಾಲ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರ ನಟನೆಯ ಮೊದಲ ಹಿಂದಿ ಸಿನಿಮಾ. ಈಗ ವೈರಲ್ ಆಗಿರೋದು ಇದೇ ಸಿನಿಮಾದ ದೃಶ್ಯ.

ಮೃಣಾಲ್ ಠಾಕೂರ್ ಅವರು ‘ಲವ್ ಸೋನಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಮಕ್ಕಳ ಕಳ್ಳ ಸಾಗಣೆ ಬಗ್ಗೆ ಕಥೆ ಇದೆ. ಇದರಲ್ಲಿ ಬರೋ ಬೋಲ್ಡ್ ದೃಶ್ಯವೊಂದರಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದರು. ಅವರು ಫೇಮಸ್ ಆದ ಬಳಿಕ ಈ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ: ಸಂಭಾವನೆ ಪಡೆಯದೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ಮೃಣಾಲ್, ಕಾರಣ? 

2022ರಲ್ಲಿ ರಿಲೀಸ್ ಆದ ತೆಲುಗಿನ ‘ಸೀತಾ ರಾಮಂ’ ಸಿನಿಮಾ ಮೃಣಾಲ್ ಅವರ ಖ್ಯಾತಿಯನ್ನೇ ಹೆಚ್ಚಿಸಿತು. ಈ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರಿಗೆ ಹಲವು ಆಫರ್​ಗಳು ಬಂದವು. ಸದ್ಯ ಒಂದೆರಡು ಸಿನಿಮಾಗಳಲ್ಲಿ ಮೃಣಾಲ್ ನಟಿಸುತ್ತಿದ್ದಾರೆ. ಮೃಣಾಲ್ ಠಾಕೂರ್ ಆಗಾಗ ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ