‘ಕಪಿಲ್ ಓರ್ವ ದುರಹಂಕಾರಿ’; ಶಕ್ತಿಮಾನ್ ಮುಖೇಶ್ ಖನ್ನಾ ನೇರ ಮಾತು
ಕಪಿಲ್ ಶರ್ಮಾ ಅವರ ಕಾರ್ಯಕ್ರಮದ ಬಗ್ಗೆ ಮುಖೇಶ್ ಖನ್ನಾ ಮಾತನಾಡಿದ್ದಾರೆ. ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ಅಶ್ಲೀಲ ಎಂದು ಕರೆಯುವ ಮೂಲಕ ಮುಖೇಶ್ ಖನ್ನಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮುಖೇಶ್ ಖನ್ನಾ ಅವರು ‘ಮಹಾಭಾರತ' ಟಿವಿ ಶೋನಲ್ಲಿ ಭೀಷ್ಮ ಪಿತಾಮಹ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಕಪಿಲ್ ಶರ್ಮಾ ಅವರ ಕಾಮಿಡಿ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖೇಶ್ ಖನ್ನಾ ಅವರು ಆ ಕಾಲದ ಅತ್ಯುತ್ತಮ ನಟರಲ್ಲಿ ಒಬ್ಬರು. ಇಂದಿಗೂ ಅವರನ್ನು ‘ಶಕ್ತಿಮಾನ್’ ಎಂದೇ ಕರೆಯಲಾಗುತ್ತದೆ. ಅವರು ತಮ್ಮ ಶಕ್ತಿಯುತ ನಟನೆ ಮತ್ತು ಅವರ ನಿಷ್ಠುರತೆಯಿಂದ ಯಾವಾಗಲೂ ಸುದ್ದಿಯಲ್ಲುದ್ದಾರೆ. ಅವರು ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನಿರ್ಭಯವಾಗಿ ವ್ಯಕ್ತಪಡಿಸುತ್ತಾರೆ. ಅಂಥದ್ದೊಂದು ವಿಷಯ ಈಗ ಮುನ್ನೆಲೆಗೆ ಬಂದಿದ್ದು, ಈ ಕುರಿತು ಆಕ್ರೋಶದಿಂದ ಕಾಮೆಂಟ್ ಮಾಡಿದ್ದಾರೆ.
ಕಪಿಲ್ ಶರ್ಮಾ ಅವರ ಕಾರ್ಯಕ್ರಮದ ಬಗ್ಗೆ ಮುಖೇಶ್ ಖನ್ನಾ ಮಾತನಾಡಿದ್ದಾರೆ. ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ಅಶ್ಲೀಲ ಎಂದು ಕರೆಯುವ ಮೂಲಕ ಮುಖೇಶ್ ಖನ್ನಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮುಖೇಶ್ ಖನ್ನಾ ಅವರು ‘ಮಹಾಭಾರತ’ ಟಿವಿ ಶೋನಲ್ಲಿ ಭೀಷ್ಮ ಪಿತಾಮಹ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ‘ಶಕ್ತಿಮಾನ್’ ಪಾತ್ರಕ್ಕಾಗಿ ಅವರು ಇಂದಿಗೂ ನೆನಪಿನಲ್ಲಿ ಉಳಿಯುತ್ತಾರೆ. ಇತ್ತೀಚೆಗೆ ಅವರು ಕಪಿಲ್ ಶರ್ಮಾ ಅವರ ಕಾಮಿಡಿ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕಪಿಲ್ ಶರ್ಮಾ ಅವರ ಶೋನಲ್ಲಿ ಕಾಣಿಸಿಕೊಳ್ಳಲು ಅವರನ್ನು ಎಂದಿಗೂ ಸಂಪರ್ಕಿಸಲಾಗಿಲ್ಲ ಮತ್ತು ಅವರನ್ನು ಸಂಪರ್ಕಿಸಿದರೂ ನಿರಾಕರಿಸುತ್ತಿದ್ದೆ ಎಂದು ನಟ ಹೇಳುತ್ತಾರೆ. ಕಪಿಲ್ ಅವರ ಕಾರ್ಯಕ್ರಮವನ್ನು ಮುಖೇಶ್ ಖನ್ನಾ ಕೂಡ ಅಶ್ಲೀಲ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಕಪಿಲ್ ಶರ್ಮಾ, ಜೂ ಎನ್ಟಿಆರ್ ವಿರುದ್ಧ ರಾಜಮೌಳಿ ಅಭಿಮಾನಿಗಳ ಅಸಮಾಧಾನ
‘ಕಪಿಲ್ ಶರ್ಮಾ ಅವರ ಸಮಸ್ಯೆ ಏನೆಂದು ನನಗೆ ತಿಳಿದಿಲ್ಲ. ಆದರೆ ಅವರು ನನ್ನನ್ನು ಸಂಪರ್ಕಿಸಲಿಲ್ಲ. ಬಹುಶಃ ಅಹಂಕಾರ ಮತ್ತು ಸಂಕೋಚದ ಕಾರಣ ಇರಬಹುದು. ಜನರು ಅವರ ಪ್ರದರ್ಶನವನ್ನು ನೋಡಿ ನಗುತ್ತಾರೆ. ಆದರೆ ನನಗೆ ಅದರಲ್ಲಿ ಯಾವುದೇ ಸಭ್ಯತೆ ಕಾಣಿಸುತ್ತಿಲ್ಲ. ಈ ಕಾರ್ಯಕ್ರಮ ನೋಡೋಕೆ ಆಗಲ್ಲ’ ಎಂದು ಹೇಳಿದ್ದಾರೆ.
ಶ್ರೀರಾಮನ ಪಾತ್ರಧಾರಿಗೆ ಅವಮಾನ ಮಾಡಿದ ಆರೋಪ
ಅರುಣ್ ಗೋವಿಲ್ ಈ ಮೊದಲು ಕಪಿಲಶ್ ಶರ್ಮಾ ಶೋಗೆ ಬಂದಿದ್ದರು. ‘ನೀವು ಸ್ನಾನ ಮಾಡುತ್ತೀರಾ’ ಎಂದು ಕಪಿಲ್ ಶರ್ಮಾ ಅರುಣ್ ಗೋವಿಲ್ಗೆ ಕೇಳಿದ್ದರು. ಇದನ್ನು ಕೇಳಿದ ಅರುಣ್ ಗೋವಿಲ್ ಸದ್ದಿಲ್ಲದೆ ನಗುತ್ತಾ ಕುಳಿತಿದ್ದರು. ‘ನಾನು ಅಲ್ಲಿದ್ದಿದ್ದರೆ ಇರಿಟೇಟ್ ಆಗುತ್ತಿತ್ತು. ಇಷ್ಟು ಗೌರವ ಇರುವ ವ್ಯಕ್ತಿಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.