AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಒಂದು ಡಿಸಾಸ್ಟರ್ ಅಂದಿದ್ದರು’; ರಾಜಕುಮಾರ್ ಹಿರಾನಿ

‘ಮುನ್ನಾಭಾಯ್ ಎಂಬಿಬಿಎಸ್’ ಆರಂಭದಲ್ಲಿ ಉದ್ಯಮದವರಿಂದ ‘ಡಿಸಾಸ್ಟರ್’ ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿತ್ತು. ಆಕ್ಷನ್ ಹೀರೋ ಸಂಜಯ್ ದತ್ ಅವರನ್ನು ಹಾಸ್ಯ ಪಾತ್ರದಲ್ಲಿ ತೋರಿಸಿದ್ದಕ್ಕೆ ಟೀಕೆ ಎದುರಿಸಿದ ನಿರ್ದೇಶಕ ರಾಜಕುಮಾರ್ ಹಿರಾನಿ, ಮೊದಲ ಪ್ರದರ್ಶನದಲ್ಲೂ ನಕಾರಾತ್ಮಕ ಪ್ರತಿಕ್ರಿಯೆ ಪಡೆದಿದ್ದರು. ಆದರೆ, ಥಿಯೇಟರ್‌ಗೆ ಬಂದ ಪ್ರೇಕ್ಷಕರು ನಕ್ಕು ನಲಿದು, ಕೆಲವೇ ಗಂಟೆಗಳಲ್ಲಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಇತಿಹಾಸ ಸೃಷ್ಟಿಸಿತು.

‘ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಒಂದು ಡಿಸಾಸ್ಟರ್ ಅಂದಿದ್ದರು’; ರಾಜಕುಮಾರ್ ಹಿರಾನಿ
ಹಿರಾನಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 20, 2026 | 8:12 AM

Share

ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೂ ಮುನ್ನ ಭಾರಿ ನೆಗೆಟಿವ್ ವಿಮರ್ಶೆ ಎದುರಿಸುತ್ತವೆ, ಆದರೆ ಥಿಯೇಟರ್‌ಗೆ ಬಂದ ಬಳಿಕ ಬಾಕ್ಸ್ ಆಫೀಸ್ ಇತಿಹಾಸವನ್ನೇ ಬದಲಾಯಿಸುತ್ತವೆ. ಅಂತಹದ್ದೇ ಒಂದು ಟ್ರೆಂಡ್ ಸೆಟ್ಟರ್ ಸಿನಿಮಾ ಬಾಲಿವುಡ್‌ನ ‘ಮುನ್ನಾಭಾಯ್ M.B.B.S’. ಇಂದು ಈ ಚಿತ್ರಕ್ಕೆ ಕ್ಲಾಸಿಕ್ ಪಟ್ಟ ಸಿಕ್ಕಿರಬಹುದು, ಆದರೆ ಸಿನಿಮಾ ರಿಲೀಸ್ ಆಗುವ ಮುನ್ನ ಉದ್ಯಮದವರೇ ಇದನ್ನು ‘ಫ್ಲಾಪ್’ ಎಂದು ಭವಿಷ್ಯ ನುಡಿದಿದ್ದರಂತೆ. ಈ ಆಸಕ್ತಿದಾಯಕ ಕಥೆಯನ್ನು ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಅಂದು ಆ್ಯಕ್ಷನ್ ಹೀರೊ ಆಗಿ ಅಬ್ಬರಿಸುತ್ತಿದ್ದ ಸಂಜಯ್ ದತ್ ಅವರನ್ನು ಹಿಡಿದು, ಆಸ್ಪತ್ರೆ ಹಿನ್ನೆಲೆಯಲ್ಲಿ ಕಾಮಿಡಿ ಸಿನಿಮಾ ಮಾಡಲು ಹೊರಟಾಗ ಹಿರಾನಿ ಅವರಿಗೆ ಎಲ್ಲರಿಂದಲೂ ಅಪಸ್ವರವೇ ಕೇಳಿಬಂದಿತ್ತಂತೆ.

ಚಿತ್ರದ ಮೊದಲ ಪ್ರದರ್ಶನದ ದಿನಗಳನ್ನು ನೆನಪಿಸಿಕೊಂಡ ಹಿರಾನಿ, ‘ಸಿನಿಮಾ ಮುಗಿದ ಮೇಲೆ ಚಿತ್ರರಂಗದ ಕೆಲವು ಪ್ರಮುಖರಿಗಾಗಿ ಶೋ ಇಟ್ಟಿದ್ದೆವು. ಸಿನಿಮಾ ನೋಡಿ ಹೊರಬಂದ ಒಬ್ಬ ಪ್ರಸಿದ್ಧ ನಿರ್ದೇಶಕರು ನನ್ನ ಬಳಿ ಬಂದು, ‘ಏನ್ ಗುರು ಇಂಥ ಸಿನಿಮಾ ಮಾಡಿದ್ದೀಯಾ? ಇದೊಂದು ಬಿಗ್ ಡಿಸಾಸ್ಟರ್ ಆಗಲಿದೆ. ಸಂಜಯ್ ದತ್ ಒಬ್ಬ ಆ್ಯಕ್ಷನ್ ಹೀರೊ, ಅವನನ್ನು ತಂದು ಆಸ್ಪತ್ರೆಯಲ್ಲಿ ನಿಲ್ಲಿಸಿದ್ದೀಯಾ. ಚಿತ್ರದ ಹಾಡುಗಳನ್ನಾದರೂ ವಿದೇಶದಲ್ಲಿ ಶೂಟ್ ಮಾಡಬೇಕಿತ್ತು, ಅದನ್ನೂ ಇಲ್ಲೇ ಮಾಡಿದ್ದೀಯಾ’ ಎಂದು ಬೇಸರ ಹೊರಹಾಕಿದ್ದರು’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾ ಕಲರ್‌ಫುಲ್ ಆಗಿಲ್ಲ, ಎಲ್ಲರಿಗೂ ಆಸ್ಪತ್ರೆಯ ಯೂನಿಫಾರ್ಮ್ ಹಾಕಿ ಕೂರಿಸಿದ್ದೀಯಾ ಎಂದು ಆ ನಿರ್ದೇಶಕರು ಹಿರಾನಿ ಅವರನ್ನು ತರಾಟೆಗೆ ತಗೆದುಕೊಂಡಿದ್ದರಂತೆ.

ಚಿತ್ರ ಬಿಡುಗಡೆಯಾದ ಮೊದಲ ದಿನ ಮುಂಬೈನ ಪ್ರಖ್ಯಾತ ‘ಗೈಟಿ ಗ್ಯಾಲಕ್ಸಿ’ ಥಿಯೇಟರ್‌ಗೆ ಹಿರಾನಿ ಭೇಟಿ ನೀಡಿದ್ದರು. ‘ನಾನು ಥಿಯೇಟರ್ ಒಳಗಡೆ ಹೋಗುವಾಗ ಅಲ್ಲಿದ್ದ ಗೇಟ್‌ಕೀಪರ್‌ನ ಕೇಳಿದೆ. ಅವನು ಹೆಬ್ಬೆರಳು ಕೆಳಗೆ ತೋರಿಸಿ (Thumbs-down) ಸನ್ನೆ ಮಾಡಿದ. ಅದನ್ನು ನೋಡಿ ನನ್ನ ಹೃದಯ ಒಂದು ಕ್ಷಣ ನಿಂತಂತಾಯಿತು, ಸಿನಿಮಾ ಮುಗಿಯಿತು ಅಂದುಕೊಂಡೆ. ಆದರೆ ಒಳಗೆ ಹೋದಾಗ ಕೇವಲ ಶೇ. 50 ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಟಿಕೆಟ್ ಮಾರುವ ಅವನಿಗೆ ಹೌಸ್‌ಫುಲ್ ಆಗದಿದ್ದರೆ ಸಿನಿಮಾ ಫ್ಲಾಪ್ ಎಂದರ್ಥ. ಆದರೆ ಒಳಗಿದ್ದ ಪ್ರೇಕ್ಷಕರು ಮಾತ್ರ ಪ್ರತಿ ದೃಶ್ಯಕ್ಕೂ ನಕ್ಕು ನಕ್ಕು ಬಿದ್ದು ಒದ್ದಾಡುತ್ತಿದ್ದರು. ಅದೇ ದಿನ ಸಂಜೆಯಷ್ಟರಲ್ಲಿ ಸಿನಿಮಾ ಸೂಪರ್ ಹಿಟ್ ಎಂಬ ಟಾಕ್ ಹರಡಿ, ರಾತ್ರಿಯ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡವು’ ಎಂದು ಹಿರಾನಿ ಆ ದಿನದ ನೆನಪನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ