AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅನ್ನೇ ಆಯ್ಕೆ ಮಾಡಿದ್ದೇಕೆ: ನಿರ್ದೇಶಕ ಕೊಟ್ಟ ಕಾರಣವಿದು?

‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗುವತ್ತ ದಾಪುಗಾಲು ಹಾಕುತ್ತಿದೆ. ಇದರ ನಡುವೆ ನಿರ್ದೇಶಕ ನಾಗ್ ಅಶ್ವಿನ್ ಪ್ರಭಾಸ್ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋನಲ್ಲಿ ತಾವು ಈ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂದು ಹೇಳಿದ್ದಾರೆ.

‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅನ್ನೇ ಆಯ್ಕೆ ಮಾಡಿದ್ದೇಕೆ: ನಿರ್ದೇಶಕ ಕೊಟ್ಟ ಕಾರಣವಿದು?
ಮಂಜುನಾಥ ಸಿ.
|

Updated on: Jun 28, 2024 | 6:28 PM

Share

ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಖ್ಯೆಯ ಸ್ಟಾರ್ ನಟರಿದ್ದಾರೆ. ಪರಭಾಷೆಯ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗು ಚಿತ್ರರಂಗ ಹೊಂದಿರುವ ಸ್ಟಾರ್ ನಟರ ಸಂಖ್ಯೆ ತುಸು ಹೆಚ್ಚು, ಅದಕ್ಕೆ ತಕ್ಕಂತೆ ಭಾರಿ ಬಜೆಟ್​ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿಯಮಿತವಾಗಿ ನೀಡುತ್ತಲೇ ಬಂದಿದೆ ತೆಲುಗು ಚಿತ್ರರಂಗ. ಇದೀಗ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಸತತ ಸೋಲು ಕಂಡಿದ್ದ ಪ್ರಭಾಸ್​ಗೆ ಭಾರಿ ಗೆಲುವನ್ನು ‘ಕಲ್ಕಿ’ ನೀಡಲಿದೆ ಎನ್ನಲಾಗುತ್ತಿದೆ. ಕಲ್ಕಿ ಸಿನಿಮಾದ ಪಾತ್ರಕ್ಕೆ ಪ್ರಭಾಸ್ ಅದ್ಭುತವಾಗಿ ಸೂಟ್ ಸಹ ಆಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಷ್ಟೋಂದು ಸೂಪರ್ ಸ್ಟಾರ್​ಗಳಿರುವಾಗ ‘ಕಲ್ಕಿ’ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆರಿಸಿಕೊಂಡಿದ್ದೇಕೆ? ನಿರ್ದೇಶಕ ನಾಗ್ ಅಶ್ವಿನ್ ಉತ್ತರ ನೀಡಿದ್ದಾರೆ.

ಈ ಹಿಂದಿನ ಸಂದರ್ಶನವೊಂದರಲ್ಲಿ ನಾಗ್ ಅಶ್ವಿನ್​ಗೆ ಈ ಪ್ರಶ್ನೆ ಎದುರಾಗಿತ್ತು, ‘ಇಷ್ಟು ದೊಡ್ಡ ಬಜೆಟ್ ಭಿನ್ನ ಕತೆಯುಳ್ಳ ಸಿನಿಮಾ, ಈ ಸಿನಿಮಾಕ್ಕೆ ಪ್ರಭಾಸ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಎಂದು ಸಂದರ್ಶಕಿ ಪ್ರಶ್ನೆ ಕೇಳಿದ್ದರು. ‘ಕತೆಗೆ ಸೂಕ್ತವಾಗುತ್ತಾರೆ ಎಂಬುದು ಮಾತ್ರವೇ ಕಾರಣವಲ್ಲ, ಈ ಕತೆಯನ್ನು ಅವರು ಬಿಟ್ಟು ಇನ್ಯಾರೂ ಸಹ ಮಾಡಲು ಸಾಧ್ಯವಿಲ್ಲ. ಇದು ಬಹಳ ದೊಡ್ಡ ಕತೆ, ಭಾರವಾದ ಕತೆ, ಈ ಕತೆಯನ್ನು ಹೆಗಲ ಮೇಲೆ ಹೊರುವ ಛಾತಿ ಈಗಿರುವ ನಟರಲ್ಲಿ ಪ್ರಭಾಸ್ ಅವರನ್ನು ಬಿಟ್ಟು ಇನ್ಯಾರಿಗೂ ಇಲ್ಲ’ ಎಂದಿದ್ದರು ನಾಗ್ ಅಶ್ವಿನ್.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಮುರಿದ ದಾಖಲೆಗಳೆಷ್ಟು? ನಿರ್ಮಾಪಕರು ಕೊಟ್ಟರು ಉತ್ತರ

ನಾಗ್ ಅಶ್ವಿನ್ ಅವರು ಆ ಸಂದರ್ಶನದಲ್ಲಿ ಆಡಿದ ಮಾತುಗಳ ವಿಡಿಯೋ ಇಂದು ವೈರಲ್ ಆಗುತ್ತಿವೆ. ಜೂ ಎನ್​ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್, ಮಹೇಶ್ ಬಾಬು, ಚಿರಂಜೀವಿ, ಪವನ್ ಕಲ್ಯಾಣ್, ವಿಜಯ್ ದೇವರಕೊಂಡ ಇನ್ನೂ ಹಲವಾರು ಸ್ಟಾರ್ ನಟರನ್ನು ಹೊಂದಿರುವ ಚಿತ್ರರಂಗದಲ್ಲಿ ದೊಡ್ಡ ಕತೆಯನ್ನು ಹೊರುವ ಛಾತಿ, ಕತೆಗೆ ಪಾತ್ರಕ್ಕೆ ನ್ಯಾಯ ಒದಗಿಸುವ ಛಾತಿ ಪ್ರಭಾಸ್​ಗೆ ಮಾತ್ರವೇ ಇದೆ ಎಂದು ನಾಗ್ ಅಶ್ವಿನ್ ಸ್ಪಷ್ಟವಾಗಿ ಹೇಳಿದ್ದರು. ನಾಗ್ ಅಶ್ವಿನ್​ರ ವಿಡಿಯೋವನ್ನು ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ನಾಗ್ ಅಶ್ವಿನ್ ಹೇಳಿರುವುದು ನಿಜ ಸಹ. ಬಾಹುಬಲಿ ಬಳಿಕ ಪ್ರಭಾಸ್​ಗೆ ಎಲ್ಲವೂ ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳೇ ದೊರೆತಿವೆ. ಅಂಥಹಾ ಪಾತ್ರಗಳನ್ನು ಅವರನ್ನು ಬಿಟ್ಟು ಇನ್ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದಲೇ ಪಾತ್ರಗಳು ಪ್ರಭಾಸ್ ಅನ್ನು ಅರಸಿ ಬಂದಿವೆ. ‘ರಾಧೆ-ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳು ಸಹ ಸಾಮಾನ್ಯ ಕತೆಗಳಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ