ನಾಗ ಚೈತನ್ಯ ಮನೆಯಲ್ಲಿ ಮತ್ತೆ ಕೇಳಲಿದೆ ವಾಲಗದ ಸದ್ದು? ಎರಡನೇ ಮದುವೆಗೆ ರೆಡಿ?
ನಾಗ ಚೈತನ್ಯ ಮದುವೆ ಮಾಡಲು ಅಕ್ಕಿನೇನಿ ನಾಗಾರ್ಜುನ ಅವರು ಆಸಕ್ತಿ ತೋರಿಸಿದ್ದಾರೆ. ನಾಗ ಚೈತನ್ಯಗೆ ಉದ್ಯಮಿ ಕುಟುಂಬದಿಂದ ಹೆಣ್ಣನ್ನು ತರಲು ಸಿದ್ಧತೆ ನಡೆದಿದ್ದು, ಈ ವರ್ಷವೇ ವಿವಾಹ ನಡೆಯಲಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ವಿಚ್ಛೇದನ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಅವರು ಎರಡನೇ ಮದುವೆಗೆ ರೆಡಿ ಆಗುತ್ತಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅನೇಕರು ನಾಗ ಚೈತನ್ಯ ಅವರನ್ನು ‘ಮೋಸಗಾರ’ ಎಂದು ಕರೆದಿದ್ದಾರೆ. ಈ ಬಗ್ಗೆ ನಾಗ ಚೈತನ್ಯ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.
ನಾಗ ಚೈತನ್ಯ ಹಾಗೂ ಸಮಂತಾ 2021ರ ಅಕ್ಟೋಬರ್ನಲ್ಲಿ ವಿಚ್ಛೇದನ ಪಡೆದರು. ಈ ಬೆಳವಣಿಗೆ ನಿಜಕ್ಕೂ ಶಾಕಿಂಗ್ ಆಗಿತ್ತು. ಇದಾದ ಬಳಿಕ ಇಬ್ಬರೂ ಎಂದಿಗೂ ಮುಖಾಮುಖಿ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಈಗ ನಾಗ ಚೈತನ್ಯ ಅವರು ವಿಚ್ಛೇದನ ಬಳಿಕ ಮತ್ತೊಮ್ಮೆ ಮದುವೆ ಆಗಲು ನಿರ್ಧರಿಸಿದ್ದಾರೆ ಎನ್ನುತ್ತಿವೆ ವರದಿಗಳು.
ನಾಗ ಚೈತನ್ಯ ಮದುವೆ ಮಾಡಲು ಅಕ್ಕಿನೇನಿ ನಾಗಾರ್ಜುನ ಅವರು ಆಸಕ್ತಿ ತೋರಿಸಿದ್ದಾರೆ. ನಾಗ ಚೈತನ್ಯಗೆ ಉದ್ಯಮಿ ಕುಟುಂಬದಿಂದ ಹೆಣ್ಣನ್ನು ತರಲು ಸಿದ್ಧತೆ ನಡೆದಿದ್ದು, ಈ ವರ್ಷವೇ ವಿವಾಹ ನಡೆಯಲಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಕೆಲವು ಮೂಲಗಳು ಇದನ್ನು ಅಲ್ಲಗಳೆಯುತ್ತಿವೆ. ‘ನಾಗ ಚೈತನ್ಯ ಅವರಿಗೆ ಮದುವೆ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಸದ್ಯಕ್ಕಂತೂ ಅವರು ಎರಡನೇ ವಿವಾಹ ಆಗುತ್ತಿಲ್ಲ’ ಎಂದು ನಾಗ ಚೈತನ್ಯ ಆಪ್ತರು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರದಿಂದ ನಾಗ ಚೈತನ್ಯ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ನಾಗ ಚೈತನ್ಯ ಜೊತೆ ನಟಿಸೋಕೆ ಸಾಯಿ ಪಲ್ಲವಿ-ಕೀರ್ತಿ ಸುರೇಶ್ ಮಧ್ಯೆ ಮೂಡಿದೆ ಸ್ಪರ್ಧೆ
ನಾಗ ಚೈತನ್ಯ ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಮಾಜಿ ಪತ್ನಿ ಸಮಂತಾ ಕೂಡ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ನಟನೆಯ ‘ಖುಷಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಸಿನಿಮಾದಲ್ಲಿ ಅವರು ವಿಜಯ್ ದೇವರಕೊಂಡಗೆ ಜೊತೆಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




