ಸೆಲ್ಫಿ ಕೇಳಲು ಬಂದಾಗ ಈ ಸೆಲೆಬ್ರಿಟಿಗಳು ನಡೆದುಕೊಂಡಿದ್ದನ್ನು ಯಾರೂ ಕ್ಷಮಿಸಲ್ಲ..

ಸಲ್ಮಾನ್ ಖಾನ್ ಅವರು ಯಾವಾಗಲೂ ಕೂಲ್ ಆಗಿರುವುದಿಲ್ಲ. ಅವರ ಬಳಿ ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಅವರ ಬಾಡಿಗಾರ್ಡ್​ ಸಲ್ಲು ಅಭಿಮಾನಿಗಳನ್ನು ಅನೇಕ ಬಾರಿ ತಳ್ಳಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ವಿಡಿಯೋ ವೈರಲ್ ಆಗಿತ್ತು.  

ಸೆಲ್ಫಿ ಕೇಳಲು ಬಂದಾಗ ಈ ಸೆಲೆಬ್ರಿಟಿಗಳು ನಡೆದುಕೊಂಡಿದ್ದನ್ನು ಯಾರೂ ಕ್ಷಮಿಸಲ್ಲ..
ಸೆಲ್ಫಿ ಕೇಳಲು ಬಂದಾಗ ಈ ಸೆಲೆಬ್ರಿಟಿಗಳು ನಡೆದುಕೊಂಡಿದ್ದನ್ನು ಯಾರೂ ಕ್ಷಮಿಸಲ್ಲ..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 19, 2023 | 11:05 AM

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳೋಕೆ ಮುಗಿಬೀಳುತ್ತಾರೆ. ಆದರೆ, ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಮೂಡ್ ಹೇಗಿರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಒಳ್ಳೆಯ ಮೂಡ್​ನಲ್ಲಿದ್ದರೆ ಫೋಟೋ ಕೊಡುತ್ತಾರೆ. ಇಲ್ಲದಿದ್ದರೆ ಅಭಿಮಾನಿಗಳನ್ನು ತಳ್ಳಿ ಮುಂದೆ ಹೋಗುತ್ತಾರೆ. ಈ ರೀತಿ ತಳ್ಳಿ ಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಹಲವು ಬಾರಿ ವೈರಲ್ ಆಗಿದ್ದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ನಾನಾ ಪಾಟೇಕರ್

ನಾನಾ ಪಾಟಕೇರ್ ಅವರು ಅಭಿಮಾನಿಗೆ ಹೊಡೆದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ನಾನಾ ಪಾಟೇಕರ್ ಅವರ ಬಳಿ ಅಭಿಮಾನಿ ಸೆಲ್ಫಿ ಕೇಳೋಕೆ ಬಂದಿದ್ದಾನೆ. ಆಗ ನಾನಾ ಪಾಟೇಕರ್ ಅವರು ಹೊಡೆದಿದ್ದಾರೆ. ಈ ವಿಡಿಯೋ ಸಂಚಲನ ಸೃಷ್ಟಿ ಮಾಡಿತ್ತು. ಪರಿಸ್ಥಿತಿ ಗಂಭೀರತೆ ಅರ್ಥವಾದ ಬಳಿಕ ನಾನಾ ಪಾಟೇಕರ್ ಅವರು ಕ್ಷಮೆ ಕೇಳಿದ್ದರು. ಅಲ್ಲದೆ, ಇದು ಗೊಂದಲದಿಂದ ಆದ ಘಟನೆ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ಯಾವಾಗಲೂ ಕೂಲ್ ಆಗಿರುವುದಿಲ್ಲ. ಅವರ ಬಳಿ ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಅವರ ಬಾಡಿಗಾರ್ಡ್​ ಸಲ್ಲು ಅಭಿಮಾನಿಗಳನ್ನು ಅನೇಕ ಬಾರಿ ತಳ್ಳಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ವಿಡಿಯೋ ವೈರಲ್ ಆಗಿತ್ತು.

ಶಾರುಖ್ ಖಾನ್

ಶಾರುಖ್ ಖಾನ್ ಅವರು ಅಭಿಮಾನಿಗಳ ಜೊತೆ ಯಾವಾಗಲೂ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಅವರು ಇತ್ತೀಚೆಗೆ ಅಭಿಮಾನಿಗಳ ವಿರುದ್ಧ ಗರಂ ಆಗಿದ್ದರು. ಏರ್​ಪೋರ್ಟ್​ನಲ್ಲಿ ಸೆಲ್ಫಿ ಕೇಳಿದ ಅಭಿಮಾನಿಯ ಮೇಲೆ ಅವರು ಕೋಪ ಮಾಡಿಕೊಂಡಿದ್ದರು. ಶಾರುಖ್ ನಡೆಯನ್ನು ಅನೇಕರು ಖಂಡಿಸಿದ್ದರು.

ಹೃತಿಕ್ ರೋಷನ್

ಹೃತಿಕ್ ರೋಷನ್ ಅವರು ಅವರು ಅಭಿಮಾನಿಗಳ ಜೊತೆ ಹೆಚ್ಚು ಕ್ಲೋಸ್ ಆಗೋಕೆ ಬಯಸಲ್ಲ. ಅವರ ಜೊತೆ ಸೆಲ್ಫಿ ಕೇಳೋಕೆ ಬಂದಾಗ ಅವರು ಸಿಟ್ಟಾಗಿದ್ದಿದೆ. ಈ ವಿಡಿಯೋಗಳು ಹರಿದಾಡಿದ್ದವು. ಆದಾಗ್ಯೂ ಅವರ ಮೇಲಿದ್ದ ಅಭಿಮಾನ ಕಡಿಮೆ ಆಗಿಲ್ಲ.

ನಯನತಾರಾ

ನಯನತಾರಾ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಸೆಲ್ಫಿ ಕೇಳಿಕೊಂಡು ಬಂದ ಅಭಿಮಾನಿಯ ಮೊಬೈಲ್​ನ ಎಸೆಯಲು ಅವರು ಮುಂದಾಗಿದ್ದರು. ಅನೇಕರು ಅವರನ್ನು ಟೀಕೆ ಮಾಡಿದ್ದರು.

ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ಕೆಲವು ಸಮಯ ಕೂಲ್ ಆಗಿರುತ್ತಾರೆ. ಆದರೆ, ಕೆಲವೊಮ್ಮೆ ಅವರು ಅಭಿಮಾನಿಗಳ ಮೇಲೆ ಸಿಟ್ಟಾಗಿದ್ದಿದೆ. ಇತ್ತೀಚೆಗೆ ಅವರು ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟಿದ್ದರು. ಆ ಬಳಿಕ ಅನೇಕರು ಫೋಟೋ ಕೇಳಿಕೊಂಡು ಬಂದರು. ಇದರಿಂದ ಅವರು ಇರಿಟೇಷನ್​ಗೆ ಒಳಗಾಗಿ ಸಿಟ್ಟಾಗಿದ್ದರು.

ವರುಣ್ ಧವನ್

ವರುಣ್ ಧವನ್ ಅವರು ಕೆಲವೊಮ್ಮೆ ಅಭಿಮಾನಿಗಳ ಜೊತೆ ಕಠಿಣವಾಗಿ ನಡೆದುಕೊಂಡಿದ್ದಿದೆ. ಇತ್ತೀಚೆಗೆ ವರುಣ್ ಧವನ್ ಅವರ ಬಳಿ ಅಭಿಮಾನಿಗಳು ಸೆಲ್ಫಿ ಕೇಳಿದ್ದರು. ಆಗ ಅವರು ಸಖತ್ ರೂಡ್ ಆಗಿ ನಡೆದುಕೊಂಡಿದ್ದರು.

ಇದನ್ನೂ ಓದಿ: ‘ಇನ್ಮುಂದೆ ಹೀಗೆ ಮಾಡಲ್ಲ, ಕ್ಷಮಿಸಿ’: ಅಭಿಮಾನಿಗೆ ಹೊಡೆದು ಕ್ಷಮೆ ಕೇಳಿದ ನಾನಾ ಪಾಟೇಕರ್​

ಜಾನ್ ಅಬ್ರಾಹಂ

ಸೆಲ್ಫಿ ತೆಗೆದುಕೊಳ್ಳೋಕೆ ಬಂದ ಅಭಿಮಾನಿಗಳ ಮೊಬೈಲ್​ ಅನ್ನೇ ಜಾನ್ ಅಬ್ರಾಹಂ ಅವರು ಕಸಿದುಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿ ಸದ್ದು ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:50 am, Sun, 19 November 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?