AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಸ್ಟಾರ್ ನಟನ ಸಿನಿಮಾನಲ್ಲಿ ನಟಿಸಿ ತಪ್ಪು ಮಾಡಿದೆ: ನಯನತಾರಾ ಬೇಸರಕ್ಕೆ ಕಾರಣವೇನು?

Nayanathara: ನಯನತಾರಾ ದಕ್ಷಿಣ ಭಾರತದ ಸ್ಟಾರ್ ನಟಿ. ರಜನೀಕಾಂತ್, ಚಿರಂಜೀವಿ ಸೇರಿದಂತೆ ಹಲವಾರು ಸ್ಟಾರ್ ನಟರುಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಯನತಾರಾಗೆ ಆ ಒಬ್ಬ ಸ್ಟಾರ್ ನಟನ ಜೊತೆಗೆ ನಟಿಸಿದ್ದು ಮಾತ್ರ ಇಷ್ಟವಾಗಿಲ್ಲವಂತೆ. ಬ್ಲಾಕ್ ಬಸ್ಟರ್ ಸಿನಿಮಾ ಅದಾಗಿದ್ದರೂ ಸಹ ತಮ್ಮ ವೃತ್ತಿ ಜೀವನದ ಅತ್ಯಂತ ಕೆಟ್ಟ ನಿರ್ಣಯ ಅದಾಗಿತ್ತು ಎಂದು ನಯನತಾರಾ ಹೇಳಿಕೊಂಡಿದ್ದಾರೆ. ಯಾವುದು ಆ ಸಿನಿಮಾ?

ಆ ಸ್ಟಾರ್ ನಟನ ಸಿನಿಮಾನಲ್ಲಿ ನಟಿಸಿ ತಪ್ಪು ಮಾಡಿದೆ: ನಯನತಾರಾ ಬೇಸರಕ್ಕೆ ಕಾರಣವೇನು?
Nayantara
ಮಂಜುನಾಥ ಸಿ.
|

Updated on: Jul 06, 2025 | 5:19 PM

Share

ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಇತ್ತೀಚೆಗೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದು, ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ದಶಕಗಳಿಂದಲೂ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿರುವ ನಯನತಾರಾ ದಕ್ಷಿಣದ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಾಯಕಿಯಾಗಿ ನಟಿಸಿದ್ದಾರೆ. ನಯನತಾರಾ, ತಮ್ಮ ಶಿಸ್ತು ಜೊತೆಗೆ ಯಾವುದೇ ಅಂಜಿಕೆ ಇಲ್ಲದೆ ಅಭಿಪ್ರಾಯ ಹೇಳುವುದಕ್ಕೆ ಜನಪ್ರಿಯರು. ಒಬ್ಬ ಸ್ಟಾರ್ ನಟನ ಜೊತೆಗೆ ಸಿನಿಮಾದಲ್ಲಿ ನಟಿಸಿ ದೊಡ್ಡ ತಪ್ಪು ಮಾಡಿದೆ ಎಂದು ಕೆಲ ವರ್ಷಗಳ ಹಿಂದೆ ನಯನತಾರಾ ಹೇಳಿಕೊಂಡಿದ್ದರು. ಆ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.

ತಮಿಳಿನ ಸ್ಟಾರ್ ನಟ ಸೂರ್ಯ ಜೊತೆಗೆ ‘ಗಜಿನಿ’ ಸಿನಿಮಾನಲ್ಲಿ ನಯನತಾರಾ ನಟಿಸಿದ್ದರು. ‘ಗಜಿನಿ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಬಹಳ ಒಳ್ಳೆಯ ಹೆಸರು ಗಳಿಸಿಕೊಟ್ಟಿತು. ಹಾಗಿದ್ದರೂ ಸಹ ನಯನತಾರಾಗೆ ‘ಗಜಿನಿ’ ಸಿನಿಮಾನಲ್ಲಿ ನಟಿಸಿದ್ದು ತುಸುವೂ ಇಷ್ಟ ಆಗಲಿಲ್ಲವಂತೆ. ಅದಕ್ಕೆ ಕಾರಣವನ್ನೂ ಸಹ ನಟಿ ನಯನತಾರಾ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಗಜಿನಿ ಸಿನಿಮಾನಲ್ಲಿ ನಟಿಸಿದ್ದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಆ ಸಿನಿಮಾದಲ್ಲಿ ನನ್ನ ಪಾತ್ರ ಕೆಟ್ಟದಾಗಿತ್ತು. ಶೂಟಿಂಗ್​ಗೆ ಮುಂಚೆ ನನಗೆ ಹೇಳಿದಂತೆ ಆ ಪಾತ್ರವನ್ನು ತೋರಿಸಲಿಲ್ಲ. ನನ್ನನ್ನು ಅತ್ಯಂತ ಕೆಟ್ಟದಾಗಿ ಆ ಸಿನಿಮಾನಲ್ಲಿ ತೋರಿಸಲಾಗಿದೆ. ಆದರೆ ಆಗ ನಾನು ಆ ಬಗ್ಗೆ ಮಾತನಾಡಲಿಲ್ಲ. ಅದು ವೃತ್ತಿಪರತೆ ಅಲ್ಲ ಎಂದು ಸುಮ್ಮನಿದ್ದೆ. ಆದರೆ ಆ ಸಿನಿಮಾ ಅನ್ನು ನಾನು ಒಪ್ಪಿಕೊಳ್ಳಲೇ ಬಾರದಿತ್ತು. ಅದೊಂದು ಅತ್ಯಂತ ಕೆಟ್ಟ ನಿರ್ಧಾರ ಆಗಿತ್ತು’ ಎಂದಿದ್ದಾರೆ ನಯನತಾರಾ.

ಇದನ್ನೂ ಓದಿ:400 ಕೋಟಿ ಗಳಿಸಿದ ಸಿನಿಮಾ ಮಿಸ್ ಮಾಡಿಕೊಂಡಿದ್ದ ನಯನತಾರಾ, ಯಾವುದದು?

‘ಗಜಿನಿ’ ಸಿನಿಮಾನಲ್ಲಿ ನಯನತಾರಾ ಎರಡನೇ ನಾಯಕಿ. ಮೊದಲ ನಾಯಕಿ ಅಸಿನ್. ನಯನತಾರಾ ಅವರ ಪಾತ್ರಕ್ಕೂ ಸಿನಿಮಾನಲ್ಲಿ ಸಾಕಷ್ಟು ಮಹತ್ವ ಇತ್ತು. ಆದರೆ ಅಸಿನ್ ಸಿನಿಮಾದ ನಿಜವಾದ ನಾಯಕಿ. ಬಹುಷಃ ನಯನತಾರಾಗೆ ಅದು ಇಷ್ಟ ಆಗಿಲ್ಲ ಅನಿಸುತ್ತದೆ. ಈ ಹಿಂದೆ ರಜನೀಕಾಂತ್ ನಟನೆಯ ‘ಕುಸೇಲನ್’ ಸಿನಿಮಾನಲ್ಲಿ ಬೇರೊಬ್ಬ ನಾಯಕಿ ಹಾಡೊಂದರಲ್ಲಿ ನಟಿಸಿದರೆಂದು ನಯನತಾರಾ ಆ ಹಾಡನ್ನೇ ಕಟ್ ಮಾಡುವಂತೆ ಮಾಡಿದ್ದರು. ತಮ್ಮ ಪಾತ್ರಕ್ಕಿಂತಲೂ ಇನ್ನೊಬ್ಬ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆಯೆಂದರೆ ನಯನತಾರಾ ಅದನ್ನು ಸಹಿಸುವುದಿಲ್ಲ. ‘ಚಂದ್ರಮುಖಿ’ ಸಿನಿಮಾ ಸಮಯದಲ್ಲಿಯೂ ನಯನತಾರಾ ಅಸಮಾಧಾನ ಹೊರಹಾಕಿದ್ದರಂತೆ.

‘ಗಜಿನಿ’ ಸಿನಿಮಾ ಅನ್ನು ಮುರುಗದಾಸ್ ನಿರ್ದೇಶನ ಮಾಡಿದ್ದರು. ನಯನತಾರಾ ಹೇಳಿಕೆ ಬಗ್ಗೆ ಮಾತನಾಡಿದ್ದ ಮುರುಗದಾಸ್, ‘ಒಮ್ಮೊಮ್ಮೆ, ನಾವು ಇಷ್ಟ ಪಡುವ ನಟ-ನಟಿಯರಿಗೆ ಚಿಕ್ಕ ರೋಲ್ ಕೊಡಬೇಕಾಗುತ್ತದೆ. ಕೆಲವೊಮ್ಮೆ ವೈಯಕ್ತಿಕವಾಗಿ ನಮಗೆ ಆತ್ಮೀಯವಲ್ಲದ ನಟರಿಗೆ ದೊಡ್ಡ ಪಾತ್ರಗಳನ್ನು ನೀಡಬೇಕಾಗುತ್ತದೆ. ಇದೆಲ್ಲ ಸಾಮಾನ್ಯ’ ಎಂದಿದ್ದರು. ಅದಾದ ಬಳಿಕ ಮುರುಗದಾಸ್ ನಿರ್ದೇಶನದ ‘ದರ್ಬಾರ್’ ಸಿನಿಮಾನಲ್ಲಿ ನಯನತಾರಾ ನಟಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ