Nayanthara Twin boys: ಅವಳಿ ಮಕ್ಕಳಿಗೆ ತಂದೆ-ತಾಯಿ ಆದ ವಿಘ್ನೇಶ್​ ಶಿವನ್​, ನಯನತಾರಾ; ಫೋಟೋ ಹಂಚಿಕೊಂಡ ದಂಪತಿ

Nayanthara Vignesh Shivan: ನಯನತಾರಾ ಮತ್ತು ವಿಘ್ನೇಶ್​ ಶಿವನ್ ಅವರು ಜೂನ್​ 9ರಂದು ಹಸೆಮಣೆ ಏರಿದ್ದರು. ಸರಿಯಾಗಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಗುಡ್​ ನ್ಯೂಸ್​ ನೀಡಿದ್ದಾರೆ.

Nayanthara Twin boys: ಅವಳಿ ಮಕ್ಕಳಿಗೆ ತಂದೆ-ತಾಯಿ ಆದ ವಿಘ್ನೇಶ್​ ಶಿವನ್​, ನಯನತಾರಾ; ಫೋಟೋ ಹಂಚಿಕೊಂಡ ದಂಪತಿ
ನಯನತಾರಾ, ವಿಘ್ನೇಶ್ ಶಿವನ್
Updated By: ಮದನ್​ ಕುಮಾರ್​

Updated on: Oct 09, 2022 | 8:30 PM

ನಾಲ್ಕು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಖ್ಯಾತ ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್​ ಅವರು ಈಗ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಖುಷಿಯ ಸಮಾಚಾರವನ್ನು ತಿಳಿಸಿದ್ದಾರೆ ವಿಘ್ನೇಶ್​ ಶಿವನ್​ (Vignesh Shivan). ಜೂನ್​ 9ರಂದು ಈ ಜೋಡಿ ಹಸೆಮಣೆ ಏರಿತ್ತು. ಸರಿಯಾಗಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಗುಡ್​ ನ್ಯೂಸ್​ ನೀಡಿದ್ದಾರೆ. ಬಾಡಿಗೆ ತಾಯಿ (Surrogate Mother) ಮೂಲಕ ಮಕ್ಕಳನ್ನು ಪಡೆದ ಈ ದಂಪತಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ವೈರಲ್​ ಆಗಿದೆ.

ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆ ಆದವರು ನಯನತಾರಾ ಹಾಗೂ ವಿಘ್ನೇಶ್​ ಶಿವನ್​. ನಟಿಯಾಗಿ ನಯನತಾರಾ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಅದೇ ರೀತಿ, ವಿಘ್ನೇಶ್​ ಶಿವನ್​ ಅವರು ನಿರ್ದೇಶಕನಾಗಿ ಬ್ಯುಸಿ ಆಗಿದ್ದಾರೆ. ಇವರಿಬ್ಬರು ಬಾಡಿಗೆ ತಾಯಿ ಮೂಲಕ ಮಗು ಪಡೆಯಬಹುದು ಎಂಬ ಅನುಮಾನ ಮೊದಲೇ ಮೂಡಿತ್ತು. ಆ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಆ ಅನುಮಾನ ಈಗ ನಿಜವಾಗಿದೆ.

ಇದನ್ನೂ ಓದಿ
Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು
ಮದುವೆಯಲ್ಲಿ ಸುಂದರಿಯಾಗಿ ಮಿಂಚಿದ ನಯನತಾರಾ; ಇಲ್ಲಿದೆ ಫೋಟೋ ಗ್ಯಾಲರಿ
Priyanka Chopra: ಬಾಡಿಗೆ ತಾಯಿ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್
Mimi Trailer: ‘ಮಿಮಿ’ ಟ್ರೇಲರ್​ ನೋಡಿದರೆ ಸಾಕು, ಕಣ್ಣಿಗೆ ಕಟ್ಟುತ್ತದೆ ಬಾಡಿಗೆ ತಾಯಿಯ ಕಷ್ಟ

ಸದ್ಯ ವಿಘ್ನೇಶ್​ ಶಿವನ್ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಮಕ್ಕಳ ಮುಖ ತೋರಿಸಿಲ್ಲ. ತಮ್ಮ ಅವಳಿ ಮಕ್ಕಳ ಪಾದಕ್ಕೆ ಪತಿ-ಪತ್ನಿ ಮುತ್ತಿಡುತ್ತಿರುವ ಕ್ಷಣ ಈ ಫೋಟೋದಲ್ಲಿ ಸೆರೆ ಆಗಿದೆ. ಈ ಕ್ಯೂಟ್​ ಫೋಟೋ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅವಳಿ ಮಕ್ಕಳ ಮುಖ ತೋರಿಸಿ ಎಂದು ಅನೇಕರು ಮನವಿ ಮಾಡುತ್ತಿದ್ದಾರೆ.

ಗಂಡು ಮಕ್ಕಳ ಹೆಸರು ತಿಳಿಸಿದ ದಂಪತಿ:

ಬಾಡಿಗೆ ತಾಯಿ ಮೂಲಕ ಜನಿಸಿರುವ ಈ ಅವಳಿ ಗಂಡು ಮಕ್ಕಳಿಗೆ ಉಯಿರ್​ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ‘ನಯನ್​ ಮತ್ತು ನಾನು ಅಪ್ಪ-ಅಮ್ಮ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ. ನಮ್ಮ ಪ್ರಾರ್ಥನೆ, ಹಿರಿಯರ ಆಶೀರ್ವಾದವು ಈ ಮಕ್ಕಳ ರೂಪದಲ್ಲಿ ಸಿಕ್ಕಿದೆ. ನಮ್ಮ ಉಯಿರ್​ ಮತ್ತು ಉಳಗಂ ಮೇಲೆ ನಿಮ್ಮ ಆಶೀರ್ವಾದ ಇರಲಿ’ ಎಂದು ವಿಘ್ನೇಶ್​ ಶಿವನ್​ ಪೋಸ್ಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:54 pm, Sun, 9 October 22