55 ವರ್ಷ ಹಳೆಯ ಥಿಯೇಟರ್ ಖರೀದಿಸಿದ ನಯನತಾರಾ; ಮುಂದಿನ ಪ್ಲ್ಯಾನ್ ಏನು?
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ನಯನತಾರಾ ನಟನೆಯಲ್ಲಿ ಬ್ಯುಸಿ ಇದ್ದರೆ, ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಥಿಯೇಟರ್ ನಡೆಸುವ ಐಡಿಯಾ ಬಂದಿದೆ.
ನಟಿ ನಯನತಾರಾ (Nayanthara) ಹಾಗೂ ಅವರ ಪತಿ ವಿಘ್ನೇಶ್ ಶಿವನ್ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಇತ್ತೀಚೆಗೆ ಮಗು ಪಡೆದಿದ್ದಾರೆ. ಈಗ ಈ ಜೋಡಿ ಹಳೆಯ ಥಿಯೇಟರ್ ಖರೀದಿಸಿದೆ. ವಿಘ್ನೇಶ್ ಹಾಗೂ ನಯನತಾರಾ ಒಟ್ಟಾಗಿ ಚೆನ್ನೈನಲ್ಲಿರುವ ಥಿಯೇಟರ್ ಒಂದನ್ನು ಖರೀದಿ ಮಾಡಿದ್ದಾರೆ. ಮೂಲಗಳ ಪ್ರಕಾರ ದೊಡ್ಡ ಬಿಸ್ನೆಸ್ ಐಡಿಯಾ ಇಟ್ಟುಕೊಂಡು ಈ ದಂಪತಿ ಇದನ್ನು ಖರೀದಿ ಮಾಡಿದೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ನಯನತಾರಾ ನಟನೆಯಲ್ಲಿ ಬ್ಯುಸಿ ಇದ್ದರೆ, ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಥಿಯೇಟರ್ ನಡೆಸುವ ಐಡಿಯಾ ಬಂದಿದೆ. ಹೀಗಾಗಿ, ಈ ದಂಪತಿ ಉತ್ತರ ಚೆನ್ನೈನ ಅಗಸ್ತ್ಯ ಥಿಯೇಟರ್ನ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ರೌಡಿ ಪಿಕ್ಚರ್ಸ್ ಅಡಿಯಲ್ಲಿ ಈ ಡೀಲ್ ಖುದುರಿಸಿದ್ದಾರೆ.
ದೇವಿ ಥಿಯೇಟರ್ ಗ್ರೂಪ್ ಈ ಚಿತ್ರಮಂದಿರದ ಮಾಲಿಕತ್ವ ಹೊಂದಿತ್ತು. ಇದು ನಿರ್ಮಾಣ ಆಗಿದ್ದು 1967ರಲ್ಲಿ. ತಮಿಳಿನ ಎಂಜಿಆರ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ದಳಪತಿ ವಿಜಯ್ ಮೊದಲಾದ ಸ್ಟಾರ್ ಹೀರೋಗಳ ಸಿನಿಮಾಗಳು ಇಲ್ಲಿ ಪ್ರದರ್ಶನ ಕಂಡಿದ್ದವು. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಅನೇಕ ಚಿತ್ರಮಂದಿರಗಳು ಬಿಸ್ನೆಸ್ ಇಲ್ಲದೆ ಕಂಗೆಟ್ಟವು. ಅಗಸ್ತ್ಯ ಚಿತ್ರಮಂದಿರದ ಮಾಲೀಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಇದನ್ನು ಮಾರುವ ನಿರ್ಧಾರಕ್ಕೆ ಅವರು ಬಂದರು.
ನಯನತಾರಾ ಹಾಗೂ ವಿಘ್ನೇಶ್ ಈ ಥಿಯೇಟರ್ನ ನವೀಕರಿಸುವ ಆಲೋಚನೆಯಲ್ಲಿದ್ದಾರೆ. ಎರಡು ಪರದೆ ಥಿಯೇಟರ್ ಮಾಡಲು ಇವರು ನಿರ್ಧರಿಸಿದ್ದಾರೆ. ಪ್ರತಿ ಪರದೆಯಲ್ಲಿ ಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ: ‘ನಮ್ಮ 25 ಕೋಟಿ ನಮಗೆ ಹಿಂದಿರುಗಿಸಿ’; ನಯನತಾರಾ-ವಿಘ್ನೇಶ್ಗೆ ಗಂಟುಬಿದ್ದ ನೆಟ್ಫ್ಲಿಕ್ಸ್
ನಯನತಾರಾ ಅವರು ಸದ್ಯ ‘ಜವಾನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಶಾರುಖ್ ಖಾನ್ ಹೀರೋ. ತಮಿಳು ನಿರ್ದೇಶಕ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಇದನ್ನು ನಿರ್ಮಾಣ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Mon, 22 May 23