Nayanthara: ‘ಮೊಬೈಲ್ ಒಡೆದು ಹಾಕ್ತೀನಿ’; ವಿಡಿಯೋ ಸೆರೆಹಿಡಿಯಲು ಮುಂದಾದ ಅಭಿಮಾನಿಗೆ ನಯನತಾರಾ ಧಮ್ಕಿ
ಸೆಲೆಬ್ರಿಟಿಗಳು ಅಭಿಮಾನಿಗಳ ಮೊಬೈಲ್ ಒಡೆದು ಹಾಕಿದ ಉದಾಹರಣೆಯೂ ಇದೆ. ಈಗ ನಯನತಾರಾ ಕೂಡ ಕೋಪ ಕೂಡ ಅದೇ ಹಂತ ತಲುಪಿತ್ತು.
ನಟಿ ನಯನತಾರಾ (Nayanthara) ಹಾಗೂ ವಿಘ್ನೇಶ್ ಶಿವನ್ ಬಾಳಲ್ಲಿ ಒಳ್ಳೆಯ ದಿನಗಳು ಬಂದಿವೆ. ಇಬ್ಬರೂ ಕಳೆದ ವರ್ಷ ಮದುವೆ ಆದರು. ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದರು. ಈ ದಂಪತಿಗೆ ದೇವರ ಮೇಲೆ ಭಕ್ತಿ ಜಾಸ್ತಿ. ಹೀಗಾಗಿ ಸಮಯ ಸಿಕ್ಕಾಗಲೆಲ್ಲ ಅವರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇತ್ತೀಚೆಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ (Vignesh Shivan) ಕುಂಬಕೋಣದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸೆಲೆಬ್ರಿಟಿ ಜೋಡಿಯನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಇದು ನಯನತಾರಾ ಅಸಮಾಧಾನಕ್ಕೆ ಕಾರಣ ಆಗಿದೆ. ಈ ವೇಳೆ ಅವರು ತಮ್ಮ ಕೋಪ ಹೊರಹಾಕಿದ್ದಾರೆ.
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನೇ ಫ್ಯಾನ್ಸ್ ಕಾಯುತ್ತಿರುತ್ತಾರೆ. ನೆಚ್ಚಿನ ಕಲಾವಿದರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕು ಎಂದು ಅಭಿಮಾನಿಗಳು ಮುಗಿಬೀಳುತ್ತಾರೆ. ಇದು ಎಲ್ಲ ಸಂದರ್ಭಗಳಲ್ಲೂ ಸೆಲೆಬ್ರಿಟಿಗಳಿಗೆ ಇಷ್ಟ ಆಗುವುದಿಲ್ಲ. ಈ ಕಾರಣಕ್ಕೆ ನೇರವಾಗಿ ಕೋಪ ಹೊರಹಾಕುತ್ತಾರೆ. ಸೆಲೆಬ್ರಿಟಿಗಳು ಅಭಿಮಾನಿಗಳ ಮೊಬೈಲ್ ಒಡೆದು ಹಾಕಿದ ಉದಾಹರಣೆಯೂ ಇದೆ. ಈಗ ನಯನತಾರಾ ಕೂಡ ಕೋಪ ಕೂಡ ಅದೇ ಹಂತ ತಲುಪಿತ್ತು.
ದೇವರ ದರ್ಶನ ಪಡೆದು ಮನೆಗೆ ಮರಳಬೇಕು ಅನ್ನೋದು ನಯನತಾರಾ ಹಾಗೂ ವಿಘ್ನೇಶ್ ಆಲೋಚನೆ ಆಗಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ಜನರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಕೆಲವರು ಸೆಲೆಬ್ರಿಟಿ ದಂಪತಿಯ ವಿಡಿಯೋ ಮಾಡುತ್ತಿದ್ದರು. ಇದರಿಂದ ನಯನತಾರಾ ಕೋಪ ನೆತ್ತಿಗೇರಿದೆ. ಅವರು ಅಭಿಮಾನಿಯ ಮೊಬೈಲ್ ಒಡೆದುಹಾಕುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಸೆಲೆಬ್ರಿಟಿಗಳ ಖಾಸಗಿತನಕ್ಕೆ ಧಕ್ಕೆ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.
ಇದನ್ನೂ ಓದಿ: Nayanthara: ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಕುರಿತು ಮಾತನಾಡಿ, ಈಗ ಹೊಸ ಸಂಗಾತಿಯೊಂದಿಗೆ ಕಾಣಿಸಿಕೊಂಡ ನಯನತಾರಾ
2022ರ ಜೂನ್ ತಿಂಗಳಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಆದರು. ಮದುವೆ ಆಗಿ ನಾಲ್ಕು ತಿಂಗಳಲ್ಲಿ ಇವರು ಮಗು ಪಡೆದರು. ಇತ್ತೀಚೆಗೆ ಮಗುವಿನ ಪೂರ್ತಿ ಹೆಸರನ್ನು ನಯನತಾರಾ ರಿವೀಲ್ ಮಾಡಿದ್ದರು. ‘ನನ್ನ ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ನನ್ನ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್’ ಎಂದು ನಯನತಾರಾ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ