ಸಖತ್ ದಪ್ಪ ಇದ್ದ ನಯನತಾರಾ ಸ್ಲಿಮ್ ಆ್ಯಂಡ್ ಫಿಟ್ ಆಗಿದ್ದು ಹೇಗೆ?
ನಯನತಾರಾ ಅವರು ತೂಕ ಇಳಿಸಿಕೊಂಡಿದ್ದು ಅನೇಕರಿಗೆ ಸ್ಫೂರ್ತಿದಾಯಕ. ಅವರು ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಮಿಕ್ಸ್ ಫ್ರುಟ್ಸ್, ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರು. ಅವರು ಸಕ್ಕರೆ ಹಾಗೂ ಸಕ್ಕರೆಯುಕ್ತ ಡ್ರಿಂಕ್ಸ್ನ ಸಂಪೂರ್ಣವಾಗಿ ತ್ಯಜಿಸಿದ್ದರು.

ನಯನತಾರಾ ಇಷ್ಟು ವರ್ಷ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿದ್ದರು. ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಅವರು ಗುರುತಿಸಿಕೊಂಡರು. ಈಗ ‘ಜವಾನ್’ ಸಿನಿಮಾ ಮೂಲಕ ನಯನತಾರಾ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಶಾರುಖ್ ಖಾನ್ಗೆ (Shah Rukh Khan) ಜೊತೆಯಾಗಿ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸೋಕೆ ಅವರು ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಯನಾತಾರಾ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಆದರೆ, ಮೊದಲು ಈ ರೀತಿ ಇರಲಿಲ್ಲ. ನಯನತಾರಾ ಸಖತ್ ದಪ್ಪ ಇದ್ದರು. ಅವರು ಸಾಕಷ್ಟು ಶ್ರಮ ಹಾಕಿ ತೂಕ ಇಳಿಸಿಕೊಂಡಿದ್ದಾರೆ.
ನಯನತಾರಾ ಚಿತ್ರರಂಗಕ್ಕೆ ಬಂದಿದ್ದು 2003ರಲ್ಲಿ. ಮಲಯಾಳಂ ಚಿತ್ರರಂಗದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಮನಸಿನಕ್ಕರೆ’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆದರು ನಯನತಾರಾ. ನಂತರ ತೆಲುಗು ಸಿನಿಮಾಗಳಲ್ಲೂ ನಟಿಸಿದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಕನ್ನಡದ ‘ಸೂಪರ್’ ಚಿತ್ರದಲ್ಲೂ ನಯನತಾರಾ ಬಣ್ಣ ಹಚ್ಚಿದ್ದರು. ಈಗ ಅವರು ಹಿಂದಿಯಲ್ಲೂ ಮಿಂಚುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಅವರು ಲೇಡಿ ಸೂಪರ್ಸ್ಟಾರ್ ಎಂದೇ ಫೇಮಸ್ ಆಗಿದ್ದಾರೆ.
ನಯನತಾರಾ ಅವರು ತೂಕ ಇಳಿಸಿಕೊಂಡಿದ್ದು ಅನೇಕರಿಗೆ ಸ್ಫೂರ್ತಿದಾಯಕ. ಅವರು ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಮಿಕ್ಸ್ ಫ್ರುಟ್ಸ್, ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರು. ಅವರು ಸಕ್ಕರೆ ಹಾಗೂ ಸಕ್ಕರೆಯುಕ್ತ ಡ್ರಿಂಕ್ಸ್ನ ಸಂಪೂರ್ಣವಾಗಿ ತ್ಯಜಿಸಿದ್ದರು. ಎಳನೀರನ್ನು ಹೆಚ್ಚು ಕುಡಿಯುತ್ತಿದ್ದರು. ಅವರು ತಮ್ಮದೇ ಆದ ಡಯಟ್ ಹೊಂದಿದ್ದರು.
ನಯನತರಾ ಅವರು ಜಿಮ್ನಲ್ಲಿ ಹೆಚ್ಚು ವರ್ಕೌಟ್ ಮಾಡುತ್ತಾರೆ. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅವರು ವರ್ಕೌಟ್ ತಪ್ಪಿಸುವುದಿಲ್ಲ. ಚರ್ಮದ ಆರೋಗ್ಯಕ್ಕೆ ಅವರು ಹೆಚ್ಚೆಚ್ಚು ನೀರು ಕುಡಿಯುತ್ತಾರೆ. ನಯನತಾರಾ ಅವರು ಜಿಮ್ ಜೊತೆ ಯೋಗ ಕೂಡ ಮಾಡುತ್ತಾರೆ. ಅವರು ಫಿಟ್ನೆಸ್ ಸೆಷನ್ನ ಎಂದಿಗೂ ಮಿಸ್ ಮಾಡಿಲ್ಲ. ಈ ಎಲ್ಲಾ ಕಾರಣದಿಂದ ಅವರು ಈಗ ಸಖತ್ ಫಿಟ್ ಆಗಿದ್ದಾರೆ. ‘ಜವಾನ್’ ಸಿನಿಮಾದಲ್ಲಿ ಅವರ ಪಾತ್ರ ಸಾಕಷ್ಟು ಗಮನ ಸೆಳೆದಿದೆ.
ಇದನ್ನೂ ಓದಿ: ಹೇಗಿತ್ತು ನೋಡಿ ನಯನತಾರಾ-ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ವರ್ಷದ ಬರ್ತ್ಡೇ ಸಂಭ್ರಮ
ವಿಘ್ನೇಶ್ ಶಿವನ್ ಜೊತೆ ನಯನತಾರಾ ಅವರು 2022ರ ಜೂನ್ 9ರಂದು ಮದುವೆ ಆದರು. ಇವರ ಮದುವೆ ಸಿಂಪಲ್ ಆಗಿ ನಡೆದಿತ್ತು. ಮೂಲಗಳ ಪ್ರಕಾರ 6 ವರ್ಷದ ಹಿಂದೆಯೇ ಇವರ ಮದುವೆ ನೋಂದಣಿ ನಡೆದಿದೆ ಎನ್ನಲಾಗಿದೆ. ಬಾಡಿಗೆ ತಾಯ್ತನದ ಮೂಲಕ ನಯನತಾರಾ ಮಗು ಪಡೆದಿದ್ದಾರೆ. ಅವಳಿ ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



