ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ಪುಷ್ಪ’ ಚಿತ್ರ ಈಗಾಗಲೇ ದೇಶದಾದ್ಯಂತ ಸಖತ್ ಕ್ರೇಜ್ ಸೃಷ್ಟಿಸಿದೆ. ಆದರೂ ಚಿತ್ರತಂಡ ರಶ್ಮಿಕಾರ ಮೊದಲ ಲುಕ್ ಬಹಿರಂಗಪಡಿಸಿರಲಿಲ್ಲ. ಇತ್ತೀಚೆಗಷ್ಟೇ ರಶ್ಮಿಕಾರ ಒಂದು ಖಡಕ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಆ ಮೂಲಕ ಸರ್ಪ್ರೈಸ್ ನೀಡಿದ್ದರು. ಆ ಪೋಸ್ಟರ್ ಮುಖಾಂತರ ಚಿತ್ರದಲ್ಲಿ ರಶ್ಮಿಕಾರ ಭಿನ್ನ ಪಾತ್ರದ ಕುರಿತು ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ಮತ್ತೊಂದು ಸುದ್ದಿ ನೀಡಿದ್ದು, ಈ ಮೂಲಕ ರಶ್ಮಿಕಾ ಪಾತ್ರ ಪ್ರಪಂಚವನ್ನು ಚಿತ್ರ ಪ್ರೇಮಿಗಳಿಗೆ ತಿಳಿಸಲು ಮುಂದಾಗಿದೆ.
‘ಪುಷ್ಪ’ ಚಿತ್ರದಲ್ಲಿ ‘ಶ್ರೀವಲ್ಲಿ’ ಪಾತ್ರವನ್ನು ರಶ್ಮಿಕಾ ನಿರ್ವಹಿಸುತ್ತಿದ್ದಾರೆ. ಇದೀಗ ಅದೇ ಹೆಸರಿನ ಹಾಡೊಂದನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ‘ಪುಷ್ಪ’ ಚಿತ್ರವು ಒಟ್ಟು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗಕ್ಕೆ ‘ಪುಷ್ಪ ದಿ ರೈಸ್’ ಎಂದು ಹೆಸರಿಡಲಾಗಿದೆ. ಇದರ ‘ಶ್ರೀವಲ್ಲಿ’ ಹಾಡು ಅಕ್ಟೋಬರ್ 13ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದರೊಂದಿಗೆ ರಶ್ಮಿಕಾರ ಹೊಸ ಪೋಸ್ಟರ್ ಕೂಡ ಹಂಚಿಕೊಳ್ಳಲಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಚಿತ್ರತಂಡ ಹಂಚಿಕೊಂಡ ಟ್ವೀಟ್ ಇಲ್ಲಿದೆ:
She stole our ferocious #PushpaRaj‘s heart and she is coming to take our breath away 😍
Second single #Srivalli from #PushpaTheRise on October 13th ❤️#PushpaTheRiseOnDec17#ThaggedheLe 🤙@alluarjun @iamRashmika @aryasukku @ThisIsDSP @adityamusic @MythriOfficial pic.twitter.com/84YaJRLfJU
— Pushpa (@PushpaMovie) October 5, 2021
ಈ ಹಿಂದೆ ರಶ್ಮಿಕಾರ ಮೊದಲ ಪೋಸ್ಟರ್ ಹಂಚಿಕೊಂಡಿದ್ದ ಚಿತ್ರತಂಡ:
Our fiercest #PushpaRaj‘s heart melts at the sight of his love ❤️
Meet @iamRashmika as #Srivalli 😍#SoulmateOfPushpa #PushpaTheRise #ThaggedheLe 🤙@alluarjun @aryasukku @ThisIsDSP @adityamusic @MythriOfficial pic.twitter.com/XTBei2377u
— Pushpa (@PushpaMovie) September 29, 2021
ರಕ್ತಚಂದನ ಕಳ್ಳಸಾಗಾಣಿಕೆಯ ಕಥಾ ಹಿನ್ನೆಲೆ ಹೊಂದಿರುವ ‘ಪುಷ್ಪ’ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಡಾಲಿ ಧನಂಜಯ, ಪ್ರಕಾಶ್ ರೈ, ಫಹಾದ್ ಫಾಸಿಲ್, ಜಗಪತಿ ಬಾಬು ಮೊದಲಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಗೂ ಡಬ್ ಆಗಿ ಈ ಸಿನಿಮಾ ತೆರೆಕಾಣುತ್ತಿದೆ. ಚಿತ್ರವನ್ನುಡಿಸೆಂಬರ್ 17ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.
ಇದನ್ನೂ ಓದಿ:
Pushpa: ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಫರ್ಸ್ಟ್ ಲುಕ್ ಬಹಿರಂಗ; ನೂತನ ಗೆಟಪ್ಗೆ ಫಿದಾ ಆದ ಅಭಿಮಾನಿಗಳು