ಆಸ್ಕರ್ (ಅಕಾಡೆಮಿ ಅವಾರ್ಡ್ಸ್) ಪ್ರಶಸ್ತಿ ಎಂದರೆ ಅದು ಪ್ರತಿಷ್ಠೆಯ ಪ್ರಶಸ್ತಿ. ಪ್ರಶಸ್ತಿಯನ್ನು ಪಡೆಯಬೇಕು ಎಂಬುದು ಎಲ್ಲರ ಕನಸು. ಆದರೆ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಮುಂಬರುವ 94ನೇ ಅಕಾಡೆಮಿ ಅವಾರ್ಡ್ಸ್ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗುತ್ತಿದೆ. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗಿದೆ. ತಮಿಳಿನ ‘ಕೂಳಾಂಗಲ್’ ಸಿನಿಮಾ ಭಾರತವನ್ನು ಪ್ರತಿನಿಧಿಸಲಿದೆ.
94ನೇ ಅಕಾಡೆಮಿ ಅವಾರ್ಡ್ಸ್ (ಆಸ್ಕರ್) ಸ್ಪರ್ಧೆಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಸ್’ ಕೆಟಗರಿಯಲ್ಲಿ ಸ್ಪರ್ಧಿಸಲು ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್ ನಟನೆಯ ‘ಉದ್ಧಮ್’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್ನಲ್ಲಿದ್ದವು.
ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಿದೆ. ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್. ಕರಣ್ ಕೆಲಸ ಮಾಡಿದ್ದಾರೆ. 15 ಸದಸ್ಯರು ಈ ತಂಡದಲ್ಲಿದ್ದರು. ಅಂತಿಮವಾಗಿ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ‘ಕೂಳಾಂಗಲ್’ ಚಿತ್ರಕ್ಕೆ ಸಿಕ್ಕಿದೆ.
Debutant Tamil film director PS Vinothraj’s film #Koozhangal / #Pebbles is India’s official entry to Oscars 2022. #கூழாங்கல் 💥
Starring #Chellapandi and #Karuththadaiyaan it will represent India in the International Feature Film category at the 94th Academy Awards.#Oscars2022 pic.twitter.com/p1FZIanb9u
— S Abishek Raaja (@cinemapayyan) October 23, 2021
ಈವರೆಗೂ ಭಾರತದ ಯಾವುದೇ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆಯಾದರೂ ಭಾರತೀಯ ಚಿತ್ರಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕು ಎಂಬುದು ಸಿನಿಪ್ರಿಯರ ಬಯಕೆ. ಈ ಬಾರಿಯಾದರೂ ಅದು ಈಡೇರಲಿ ಎಂದು ಎಲ್ಲರೂ ಹಂಬಲಿಸುತ್ತಿದ್ದಾರೆ. ಮುಂಬರುವ ಆಸ್ಕರ್ ಸಮಾರಂಭವು 2022ರ ಮಾರ್ಚ್ ತಿಂಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ರೇಸ್ಗಾಗಿ ಭಾರತದ 14 ಚಿತ್ರಗಳ ಹಣಾಹಣಿ; ಯಾವ ಸಿನಿಮಾಗೆ ಸಿಗಲಿದೆ ಚಾನ್ಸ್? ಮನೆಯಲ್ಲಿದ್ದ ಆಸ್ಕರ್ ಟ್ರೋಫಿ ಕಳೆದುಹಾಕಿದ್ದ ಎ.ಆರ್. ರೆಹಮಾನ್; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ