AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ ಪ್ರಶಸ್ತಿ ರೇಸ್​ಗಾಗಿ ಭಾರತದ 14 ಚಿತ್ರಗಳ ಹಣಾಹಣಿ; ಯಾವ ಸಿನಿಮಾಗೆ ಸಿಗಲಿದೆ ಚಾನ್ಸ್​?

Oscars 2022 India's official entry: ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ 14 ಸಿನಿಮಾಗಳನ್ನು ವೀಕ್ಷಿಸಲಿದೆ. ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್​. ಕರಣ್​ ಕೆಲಸ ಮಾಡುತ್ತಿದ್ದಾರೆ. 15 ಸದಸ್ಯರು ಈ ತಂಡದಲ್ಲಿದ್ದಾರೆ.

ಆಸ್ಕರ್​ ಪ್ರಶಸ್ತಿ ರೇಸ್​ಗಾಗಿ ಭಾರತದ 14 ಚಿತ್ರಗಳ ಹಣಾಹಣಿ; ಯಾವ ಸಿನಿಮಾಗೆ ಸಿಗಲಿದೆ ಚಾನ್ಸ್​?
ಆಸ್ಕರ್​ ಪ್ರಶಸ್ತಿ ರೇಸ್​ಗಾಗಿ ಭಾರತದ 14 ಚಿತ್ರಗಳ ಹಣಾಹಣಿ
TV9 Web
| Edited By: |

Updated on: Oct 21, 2021 | 12:55 PM

Share

ಆಸ್ಕರ್ (ಅಕಾಡೆಮಿ ಅವಾರ್ಡ್ಸ್​)​ ಪ್ರಶಸ್ತಿಯನ್ನು ಬಣ್ಣದ ಲೋಕದವರು ಕಣ್ಣರಳಿಸಿ ನೋಡುತ್ತಾರೆ. ಸಿನಿಮಾ ಜಗತ್ತಿನ ಪ್ರತಿಷ್ಠಿತ ಗೌರವ ಎಂದು ಪರಿಗಣಿಸಲಾಗುವ ಈ ಪ್ರಶಸ್ತಿಯನ್ನು ಪಡೆಯಬೇಕು ಎಂಬುದು ಎಲ್ಲರ ಕನಸು. ಆದರೆ ಆಸ್ಕರ್​ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಮುಂಬರುವ 94ನೇ ಅಕಾಡೆಮಿ ಅವಾರ್ಡ್ಸ್​ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗುತ್ತಿದೆ. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗುವುದು. ಆ ಒಂದು ಸಿನಿಮಾ ಯಾವುದು ಎಂಬುದನ್ನು ಈಗ ಆಯ್ಕೆ ಮಾಡಬೇಕಿದೆ. ಸದ್ಯ ಭಾರತದ 14 ಸಿನಿಮಾಗಳು ಪರಸ್ಪರ ಹಣಾಹಣಿ ನಡೆಸುತ್ತಿವೆ.

94ನೇ ಅಕಾಡೆಮಿ ಅವಾರ್ಡ್ಸ್​ (ಆಸ್ಕರ್​) ಸ್ಪರ್ಧೆಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಸ್​’ ಕೆಟಗರಿಯಲ್ಲಿ ಸ್ಪರ್ಧಿಸಲು ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಲಾಗುವುದು. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್​ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’, ವಿಕ್ಕಿ ಕೌಶಲ್​ ನಟನೆಯ ‘ಉದ್ಧಮ್​’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್​’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳ ಪೈಕಿ ಒಂದನ್ನು ಆಯ್ಕೆ ಮಾಡಲಾಗುತ್ತದೆ.

ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಲಿದೆ. ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್​. ಕರಣ್​ ಕೆಲಸ ಮಾಡುತ್ತಿದ್ದಾರೆ. 15 ಸದಸ್ಯರು ಈ ತಂಡದಲ್ಲಿದ್ದಾರೆ. ಅಂತಿಮವಾಗಿ ಆಸ್ಕರ್​ ಕಣದಲ್ಲಿ ಸ್ಪರ್ಧಿಸುವ ಅವಕಾಶ ಯಾವ ಚಿತ್ರಕ್ಕೆ ಸಿಗಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.

ಈವರೆಗೂ ಭಾರತದ ಯಾವುದೇ ಸಿನಿಮಾ ಕೂಡ ಆಸ್ಕರ್​ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆಯಾದರೂ ಭಾರತೀಯ ಚಿತ್ರಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕು ಎಂಬುದು ಸಿನಿಪ್ರಿಯರ ಬಯಕೆ. ಈ ಬಾರಿಯಾದರೂ ಅದು ಈಡೇರಲಿ ಎಂದು ಎಲ್ಲರೂ ಹಂಬಲಿಸುತ್ತಿದ್ದಾರೆ. ಮುಂಬರುವ ಆಸ್ಕರ್​ ಸಮಾರಂಭವು 2022ರ ಮಾರ್ಚ್​​ ತಿಂಗಳಲ್ಲಿ ನಡೆಯಲಿದೆ.

ಇದನ್ನೂ ಓದಿ:

ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ

Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?