ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು, ಇಲ್ಲಿದೆ ಪಟ್ಟಿ
ಪ್ರತಿ ವಾರದಂತೆ ಈ ವಾರವೂ ಸಹ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರವಂತೂ, ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಕೆಲ ಸಿನಿಮಾಗಳು ಸಹ ಒಟಿಟಿಗೆ ಬಂದಿವೆ. ವಿಶೇಷವಾಗಿ ಈ ವಾರ ಕೆಲವು ಜನಪ್ರಿಯ ತೆಲುಗು ಮತ್ತು ತಮಿಳು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಈ ವಾರ ಒಟಿಟಿಗೆ ಬಂದಿರುವ ಸಿನಿಮಾ ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ ನೋಡಿ...
Updated on: Nov 01, 2026 | 3:03 PM

ವಿಜಯ್ ಸೇತುಪತಿ ನಟನೆ ಮಾಡಿರುವ ‘ಬತ್ತ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಖತ್ ಹಿಟ್ ಆಗಿದೆ. ಮಾತ್ರವಲ್ಲದೆ ವಿಮರ್ಶಕರಿಂದಲೂ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ನಟ ಬಾಲಯ್ಯ ಅವರ ಫೇಮಸ್ ಡೈಲಾಗ್ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಅನ್ನೇ ಸಿನಿಮಾಕ್ಕೆ ಹೆಸರಾಗಿ ಇರಿಸಿಕೊಂಡ ತೆಲುಗು ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾ ಹಾಸ್ಯ ಪ್ರಧಾನ ಜೊತೆಗೆ ಥ್ರಿಲ್ಲರ್ ಅಂಶವೂ ಇರುವ ಸಿನಿಮಾ ಆಗಿದ್ದು, ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ.

ಕೀರ್ತಿ ಸುರೇಶ್, ಅಮಲಾ ಪೌಲ್ ಸೇರಿದಂತೆ ಇನ್ನೂ ಹಲವು ಪ್ರತಿಭಾವಂತ ನಟಿಯರು ಒಟ್ಟಿಗೆ ನಟಿಸಿರುವ ಮಹಿಳಾ ಪ್ರಧಾನ ಆಕ್ಷನ್ ಭರಿತ ವೆಬ್ ಸರಣಿ ‘ಅಕ್ಕ’ ಈ ವಾರ ನೇರವಾಗಿ ಒಟಿಟಿಗೆ ಬಂದಿದೆ. ಈ ವೆಬ್ ಸರಣಿಯನ್ನು ಕಾದಂಬರಿ ಆಧರಿಸಿ ನಿರ್ಮಿಸುವುದು ಮತ್ತೊಂದು ವಿಶೇಷ. ಈ ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ತೆಲುಗಿನ ಜನಪ್ರಿಯ ಹಾಸ್ಯನಟ ಶ್ರೀವಿಷ್ಣು ನಟನೆ ಮಾಡಿರುವ ಹಾಸ್ಯಪ್ರಧಾನ ಸಿನಿಮಾ ‘ಕಾಮ್ರೆಡ್ ಕಲ್ಯಾಣ್’ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು, ಸಿನಿಮಾ ಅನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಿದೆ.

ಬಿಜು ಮೆನನ್ ಸೇರಿದಂತೆ ಇನ್ನು ಕೆಲವು ಜನಪ್ರಿಯ ನಟರು ನಟಿಸಿರುವ ‘ಅರಾಚ್ಚನ್ ಆಂಡ್ ಸನ್ಸ್’ ಮಲಯಾಳಂ ಸಿನಿಮಾ ಈ ವಾರ ಈ ಒಟಿಟಿಗೆ ಬಂದಿದೆ. ಹಾಸ್ಯಪ್ರಧಾನ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಜಿವಿ ಪ್ರಕಾಶ್ ಮತ್ತು ಖಯಾದು ಲೋಹರ್ ನಟನೆಯ ಮಾಡಿರುವ ತಮಿಳಿನ ಹಾರರ್ ಥ್ರಿಲ್ಲರ್ ಸಿನಿಮಾ ‘ಇಮ್ಮಾರ್ಟಲ್’ ಈ ವಾರ ಒಟಿಟಿಗೆ ಬಂದಿದೆ. ಒಂದು ಅಪಾರ್ಟ್ಮೆಂಟ್ನಲ್ಲಿ ನಡೆಯುವ ಹಾರರ್ ಕತೆಯನ್ನು ಆಧರಿಸಿದ ಈ ಸಿನಿಮಾವನ್ನು ಸೋನಿ ಲಿವ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ತಮಿಳುನಾಡು ಸಿಎಂ ವಿಜಯ್ ಅವರ ಪುತ್ರ ಜೇಸನ್ ನಿರ್ದೇಶನ ಮಾಡಿರುವ ‘ಸಿಗ್ಮಾ’ ಸಿನಿಮಾ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಚಿತ್ರಮಂದಿರದಲ್ಲಿ ವ್ಯಕ್ತವಾಗಿತ್ತು. ಸಿನಿಮಾ ಇದೀಗ ಒಟಿಟಿಗೆ ಬಂದಿದ್ದು ಸಿನಿಮಾ ಅನ್ನು ಈ ಸಿನಿಮಾ ಸಹ ನೆಟ್ಫ್ಲಿಕ್ಸ್ನಲ್ಲಿಯೇ ರಿಲೀಸ್ ಆಗಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



