Sunny Leone: ಗಂಡನನ್ನು ಬಿಟ್ಟು ಬಿಗ್ ಬಾಸ್ ಓಟಿಟಿಗೆ ಬಂದ ಸನ್ನಿ ಲಿಯೋನ್; ಹೆಚ್ಚಲಿದೆ ಮಾದಕತೆಯ ಕಿಚ್ಚು
Sunny Leone | Bigg Boss OTT: ಟಿವಿಯಲ್ಲಿ ‘ಬಿಗ್ ಬಾಸ್ ಓಟಿಟಿ’ ಪ್ರಸಾರ ಆಗುತ್ತಿಲ್ಲ. ವಯಸ್ಕರನ್ನೇ ಟಾರ್ಗೆಟ್ ಆಗಿಟ್ಟುಕೊಂಡಿರುವ ಈ ಕಾರ್ಯಕ್ರಮ ಕೇವಲ ಓಟಿಟಿ (ವೂಟ್) ಮೂಲಕ ಪ್ರಸಾರ ಆಗುತ್ತಿದೆ. ಇದಕ್ಕೀಗ ಸನ್ನಿ ಲಿಯೋನ್ ಎಂಟ್ರಿ ಆಗಿದೆ.
ಸನ್ನಿ ಲಿಯೋನ್ (Sunny Leone) ಹೆಸರು ಹೇಳುತ್ತಿದ್ದಂತೆಯೇ ಪಡ್ಡೆಗಳ ಎದೆಬಡಿತ ಹೆಚ್ಚುತ್ತದೆ. ಮಾದಕತೆಯಲ್ಲಿ ಈ ಮಾಜಿ ನೀಲಿತಾರೆಗೆ ಪೈಪೋಟಿ ಕೊಡುವುದು ಕಷ್ಟ. ಇಂಥ ಹಾಟ್ ಬೆಡಗಿ ‘ಬಿಗ್ ಬಾಸ್ ಓಟಿಟಿ’ (Bigg Boss OTT) ಕಾರ್ಯಕ್ರಮಕ್ಕೆ ಎಂಟ್ರಿ ನೀಡುತ್ತಾರೆ ಎಂದು ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಿತ್ತು. ಆ ಸುದ್ದಿಯನ್ನು ಸ್ವತಃ ಸನ್ನಿ ಲಿಯೋನ್ ಖಚಿತ ಪಡಿಸಿದ್ದಾರೆ. ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ. ಸನ್ನಿ ಜೊತೆ ಅವರ ಪತಿ ಡೇನಿಯಲ್ ವೆಬರ್ ಕೂಡ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ಆ ಪ್ಲ್ಯಾನ್ ಕೊಂಚ ಮಿಸ್ ಆಗಿದೆ. ಪತಿಯನ್ನು ಬಿಟ್ಟು ಸನ್ನಿ ಒಬ್ಬರೇ ಬಿಗ್ ಬಾಸ್ ಪ್ರವೇಶಿಸಿದ್ದಾರೆ.
ಟಿವಿಯಲ್ಲಿ ‘ಬಿಗ್ ಬಾಸ್ ಓಟಿಟಿ’ ಪ್ರಸಾರ ಆಗುತ್ತಿಲ್ಲ. ವಯಸ್ಕರನ್ನೇ ಟಾರ್ಗೆಟ್ ಆಗಿಟ್ಟುಕೊಂಡಿರುವ ಈ ಕಾರ್ಯಕ್ರಮ ಕೇವಲ ಓಟಿಟಿ (ವೂಟ್) ಮೂಲಕ ಪ್ರಸಾರ ಆಗುತ್ತಿದೆ. ಹಾಗಾಗಿ, ಸೆನ್ಸಾರ್ನ ಹಂಗು ತೊರೆದು ಎಲ್ಲ ಸ್ಪರ್ಧಿಗಳು ಆಟ ಆಡುತ್ತಿದ್ದಾರೆ. ಅಂಥವರ ಗುಂಪಿನಲ್ಲಿ ಸನ್ನಿ ಲಿಯೋನ್ ಸೇರಿಕೊಳ್ಳುತ್ತಿರುವುದರಿಂದ ವೀಕ್ಷಕರಿಗೆ ಹೆಚ್ಚು ನಿರೀಕ್ಷೆ ಮೂಡಿದೆ.
ಸದ್ಯ ಬಿಗ್ ಬಾಸ್ ಓಟಿಟಿಯಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಕಾಂಟ್ರವರ್ಸಿ ಗಾಯಕಿ ನೇಹಾ ಭಾಸಿನ್, ದಿವ್ಯಾ ಅಗರ್ವಾಲ್ ಮುಂತಾದವರು ಪೈಪೋಟಿ ನಡೆಸುತ್ತಿದ್ದಾರೆ. ಈಗ ಸನ್ನಿ ಲಿಯೋನ್ ಎಂಟ್ರಿಯಿಂದಾಗಿ ಈ ಸ್ಪರ್ಧಿಗಳ ವರ್ತನೆಯಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸನ್ನಿ ಲಿಯೋನ್ ಅವರು ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕಿಂತಲೂ ಮುನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸನ್ನಿ ಲಿಯೋನ್ ಅವರಿಗೂ ಬಿಗ್ ಬಾಸ್ ಮನೆಗೂ ತುಂಬ ಹಳೆಯ ಸಂಬಂಧ. ನೀಲಿ ಸಿನಿಮಾ ಲೋಕಕ್ಕೆ ಗುಡ್ಬೈ ಹೇಳಿದ ಬಳಿಕ ಅವರು ಮೊದಲು ಕಾಲಿಟ್ಟಿದ್ದೇ ಹಿಂದಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ. 2011-12ರಲ್ಲಿ ಪ್ರಸಾರವಾದ ‘ಹಿಂದಿ ಬಿಗ್ ಬಾಸ್ ಸೀಸನ್ 5’ರಲ್ಲಿ ಅವರು ಸ್ಪರ್ಧಿಸಿದ್ದರು. ಆ ಬಳಿಕವೇ ಅವರಿಗೆ ಬಾಲಿವುಡ್ನಲ್ಲಿ ಅವಕಾಶ ಬರಲು ಆರಂಭ ಆದವು. ನಂತರ ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಇನ್ನಷ್ಟು ಫೇಮಸ್ ಆದರು. ಈಗ ಬರೋಬ್ಬರಿ 10 ವರ್ಷಗಳ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ಕಾಲಿಡುತ್ತಿರುವುದು ವಿಶೇಷ.
ಇದನ್ನೂ ಓದಿ:
ರಶ್ಮಿಕಾ ಸಿನಿಮಾದಲ್ಲಿ ಸನ್ನಿ ಲಿಯೋನ್ಗೆ 50 ಲಕ್ಷ ಸಂಬಳ; ಮಾಜಿ ನೀಲಿ ತಾರೆಗೆ ಏನು ಕೆಲಸ?