ಒಟಿಟಿ ಸಂಸ್ಥೆಯಿಂದ 135 ಕೋಟಿ ರೂಪಾಯಿ ಬಾಚಿದ ಅಕ್ಷಯ್​ ಕುಮಾರ್ ಕುಮಾರ್ ಸಿನಿಮಾ

ಅಕ್ಷಯ್​ ಕುಮಾರ್ ನಟನೆಯ ‘ಬೆಲ್​ ಬಾಟಂ’ ಚಿತ್ರಕ್ಕೆ ವಷು ಭಗ್ನಾನಿ ಬಂಡವಾಳ ಹೂಡಿದ್ದರು. ಈ ಸಿನಿಮಾವನ್ನು ನೇರವಾಗಿ ಒಟಿಟಿಗೆ ತೆರೆಗೆ ತರದೆ ಚಿತ್ರಮಂದಿರದಲ್ಲಿ ರಿಲೀಸ್​ ಮಾಡುವ ಸಾಹಸವನ್ನು ವಿಷ್ಣು ಮಾಡಿದ್ದರು. ಆದರೆ, ಇದರಿಂದ ಅವರು ಕೈ ಸುಟ್ಟುಕೊಂಡಿದ್ದರು.

ಒಟಿಟಿ ಸಂಸ್ಥೆಯಿಂದ 135 ಕೋಟಿ ರೂಪಾಯಿ ಬಾಚಿದ ಅಕ್ಷಯ್​ ಕುಮಾರ್ ಕುಮಾರ್ ಸಿನಿಮಾ
ಅಕ್ಷಯ್​ ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 12, 2022 | 1:28 PM

ಅಕ್ಷಯ್​ ಕುಮಾರ್ (Akshay Kumar) ನಟನೆಯ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಮೋಡಿ ಮಾಡುತ್ತವೆ. ಅವರ ಸಿನಿಮಾಗಳು ಒಟಿಟಿಗೆ ಕಾಲಿಡಲಿ ಅಥವಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿ, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಈಗ ರಂಜಿತ್​ ತಿವಾರಿ ನಿರ್ದೇಶನದ ಅವರ ಮುಂದಿನ ಥ್ರಿಲ್ಲರ್ ಸಿನಿಮಾ ‘ಮಿಷನ್​ ಸಿಂಡರೆಲ್ಲಾ’ (Mission Cinderella) ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ನಿರ್ಮಾಪಕ ವಷು ಹಾಗೂ ಜಾಕಿ ಭಗ್ನಾನಿ ಅವರು 135 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿ ಆಗಿದೆ. ಅಕ್ಷಯ್​ ಕುಮಾರ್ ನಟನೆಯ ‘ಅತ್ರಂಗಿ ರೇ’ ಸಿನಿಮಾ ನೇರವಾಗಿ ಒಟಿಟಿ ಹಾದಿ ಹಿಡಿದಿತ್ತು. ಈಗ ಅವರ ನಟನೆಯ ಎರಡನೇ ಸಿನಿಮಾ ನೇರವಾಗಿ ಒಟಿಟಿಯತ್ತ ಮುಖ ಮಾಡಿದೆ. ಡಿಸ್ನಿ + ಹಾಟ್​ಸ್ಟಾರ್ ‘ಮಿಷನ್​ ಸಿಂಡರೆಲ್ಲಾ’ ಚಿತ್ರದ ಡಿಜಿಟಲ್​ ಹಕ್ಕನ್ನು 135 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅಕ್ಷಯ್​ ವೃತ್ತಿ ಜೀವನದಲ್ಲಿ ಅವರ ಸಿನಿಮಾ ಒಟಿಟಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್​ ಆಗಿರುವುದು ಇದೇ ಮೊದಲು. ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

‘ಮಿಷನ್​ ಸಿಂಡರೆಲ್ಲಾ’ ಸಿನಿಮಾದ ಮ್ಯೂಸಿಕ್ ಹಕ್ಕು ಈಗಾಗಲೇ ಸೇಲ್ ಆಗಿದೆ. ಇದರಿಂದ ಚಿತ್ರಕ್ಕೆ 20 ಕೋಟಿ ರೂಪಾಯಿ ಸಿಕ್ಕಿದೆ. ಕೆಲವೇ ತಿಂಗಳಲ್ಲಿ ಕೊವಿಡ್ ನಾಲ್ಕನೆ ಅಲೆ ಕಾಣಿಸಿಕೊಳ್ಳಲಿದೆ ಎಂದು ತಜ್ಞರು  ವರದಿ ಬಿಡುಗಡೆ ಮಾಡಿದ್ದಾರೆ. ಹೀಗಾದರೆ, ಸಿನಿಮಾ ರಿಲೀಸ್​ ಸಾಧ್ಯವಾಗದೆ ಇರಬಹುದು. ಈ ಕಾರಣಕ್ಕೆ ನಿರ್ಮಾಪಕರು ರಿಸ್ಕ್​ ತೆಗೆದುಕೊಳ್ಳದೆ ನೇರವಾಗಿ ಒಟಿಟಿ ಹಾದಿ ಹಿಡಿದಿದ್ದಾರೆ.

ಅಕ್ಷಯ್​ ಕುಮಾರ್ ನಟನೆಯ ‘ಬೆಲ್​ ಬಾಟಂ’ ಚಿತ್ರಕ್ಕೆ ವಷು ಭಗ್ನಾನಿ ಬಂಡವಾಳ ಹೂಡಿದ್ದರು. ಈ ಸಿನಿಮಾವನ್ನು ನೇರವಾಗಿ ಒಟಿಟಿಗೆ ತೆರೆಗೆ ತರದೆ ಚಿತ್ರಮಂದಿರದಲ್ಲಿ ರಿಲೀಸ್​ ಮಾಡುವ ಸಾಹಸವನ್ನು ವಿಷ್ಣು ಮಾಡಿದ್ದರು. ಆದರೆ, ಇದರಿಂದ ಅವರು ಕೈ ಸುಟ್ಟುಕೊಂಡಿದ್ದರು. ಈಗ ಅಕ್ಷಯ್​ ಕುಮಾರ್ ಜತೆ ಅವರು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ವಷು ಹಾಗೂ ಅಕ್ಷಯ್​ ಇಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಅಕ್ಷಯ್​ ಕುಮಾರ್​ಗೆ ಬಾಲಿವುಡ್​ನಲ್ಲಿ ಭಾರೀ ಬೇಡಿಕೆ ಇದೆ. ಈ ಕಾರಣಕ್ಕೆ ಸಿನಿಮಾ 135 ಕೋಟಿ ರೂಪಾಯಿಗೆ ಸೇಲ್​ ಆಗಿದೆ ಎಂದು ಚಿತ್ರತಂಡದವರು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್​ ಕುಮಾರ್​ ಅವರು ‘ರಾಮ್​ ಸೇತು’ ಸಿನಿಮಾದ ಶೂಟಿಂಗ್​ ಮುಗಿಸಿದ್ದಾರೆ. ‘ಗೋರ್ಖ’, ‘ಪೃಥ್ವಿರಾಜ್​’, ‘ರಕ್ಷಾ ಬಂಧನ್​’, ‘ಓಹ್​ ಮೈ ಗಾಡ್​ 2’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವರ ನಟನೆಯ ‘ಬಚ್ಚನ್​ ಪಾಂಡೆ’ ಸಿನಿಮಾ ರಿಲೀಸ್​ಗೆ ರೆಡಿ ಇದೆ.

ಇದನ್ನೂ ಓದಿ: ನೀರಜ್​ ಚೋಪ್ರಾಗೆ ಸಿನಿಮಾ ಆಫರ್​; ಅಕ್ಷಯ್​ ಕುಮಾರ್ ಬಯೋಪಿಕ್​ ಬಗ್ಗೆ ಏನಿದು ಅಪ್​ಡೇಟ್​?

ಅಕ್ಷಯ್​ ಕುಮಾರ್ ಸಿನಿಮಾ ಬ್ಯಾನ್​ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ