Kantara OTT: ಒಟಿಟಿಗೆ ಬಂತು ‘ಕಾಂತಾರ’ ಸಿನಿಮಾ; ನ.24ರಿಂದ ‘ಅಮೇಜಾನ್ ಪ್ರೈಮ್ ವಿಡಿಯೋ’ದಲ್ಲಿ ಪ್ರಸಾರ
Kantara OTT Release | Amazon Prime Video: ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾ ಭಾರಿ ಯಶಸ್ಸು ತಂದುಕೊಟ್ಟಿದೆ. ಈಗ ಈ ಚಿತ್ರ ‘ಅಮೇಜಾನ್ ಪ್ರೈಮ್ ವಿಡಿಯೋ’ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ.
ಸೂಪರ್ ಹಿಟ್ ‘ಕಾಂತಾರ’ ಸಿನಿಮಾ (Kantara Movie) ಯಾವಾಗ ಒಟಿಟಿಗೆ ಬರಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆ ಕಾಯುವಿಕೆಗೆ ಈಗ ಅಂತ್ಯ ಹಾಡುವ ಸಮಯ ಬಂದಿದೆ. ನ.24ರಂದು ಈ ಚಿತ್ರ ಒಟಿಟಿ ಅಂಗಳದಲ್ಲಿ ಪ್ರಸಾರ ಆಗಲಿದೆ. ಈ ಬಗ್ಗೆ ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ‘ಕಾಂತಾರ’ ಸಿನಿಮಾದ ಒಟಿಟಿ ಪ್ರಸಾರ ದಿನಾಂಕವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಲಾಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾವನ್ನು ಪ್ರೇಕ್ಷಕರು ಮನೆಯಲ್ಲಿ ಕುಳಿತು ಎಂಜಾಯ್ ಮಾಡಬಹುದು. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ (Rishab Shetty) ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
‘ಕಾಂತರ’ ಸಿನಿಮಾದ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಪಡೆದುಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ಒಟಿಟಿಗೆಯಲ್ಲಿ ಪ್ರಸಾರ ಆಗಬೇಕಿತ್ತು. ಆದರೆ ಅನೇಕ ಚಿತ್ರಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಆಗುತ್ತಿದ್ದ ಕಾರಣ ಒಟಿಟಿಯಲ್ಲಿ ಪ್ರಸಾರ ಆಗುವುದು ಕೊಂಚ ವಿಳಂಬ ಆಯಿತು. ಈಗ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಸಿನಿಮಾ ಇನ್ನೂ ಹೆಚ್ಚಿನ ಜನರನ್ನು ತಲುಪಲಿದೆ.
ನಿರ್ಮಾಪಕ ವಿಜಯ್ ಕಿರಗಂದೂರು ಅವರು ಒಟಿಟಿ ಬಿಡುಗಡೆ ಬಗ್ಗೆ ಮಾತನಾಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್ ಮುಖಾಂತರ ನಾವು ಯಾವಾಗಲೂ ಆಕರ್ಷಕವಾದ ಕಥೆಗಳನ್ನು ಅಸಾಮಾನ್ಯ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕೆ ಇಷ್ಟಪಡುತ್ತೇವೆ. ಕಾಂತಾರ ಸಿನಿಮಾ ನಮ್ಮ ಅಂಥ ಪ್ರಯತ್ನಗಳಲ್ಲೊಂದು. ಈ ಚಿತ್ರವನ್ನು ಪ್ರೈಂ ವಿಡಿಯೊ ಮುಖಾಂತರ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರಿಗೆ ತಲುಪಿಸಲು ಉತ್ಸುಕರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.
ನಟನಾಗಿ ಮತ್ತು ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಿಂದ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಚಿತ್ರಕ್ಕೆ ಹಣ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಸಖತ್ ಲಾಭ ಮಾಡಿಕೊಂಡಿದೆ. ನಾಯಕಿ ಸಪ್ತಮಿ ಗೌಡ ಅವರ ಜನಪ್ರಿಯತೆ ಹೆಚ್ಚಿದೆ. ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಮುಂತಾದ ಕಲಾವಿದರು ಕೂಡ ಈ ಚಿತ್ರದಲ್ಲಿ ಸಖತ್ ಶೈನ್ ಆಗಿದ್ದಾರೆ.
putting an end to all the wait!!! ?#KantaraOnPrime, out tomorrow@hombalefilms @shetty_rishab @VKiragandur @gowda_sapthami @AJANEESHB @actorkishore pic.twitter.com/HBsEAGNRbU
— prime video IN (@PrimeVideoIN) November 23, 2022
ರಿಷಬ್ ಶೆಟ್ಟಿಗೆ ಖುಷಿ:
‘ದೇಶದ ಮೂಲೆ-ಮೂಲೆಗಳಲ್ಲಿನ ಸಿನಿಮಾ ಪ್ರಿಯರು ನಮ್ಮ ಚಿತ್ರಕ್ಕೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ನನಗೆ ತುಂಬಾ ಖುಷಿ ಇದೆ. ಈಗ ಅಮೇಜಾನ್ ಪ್ರೈಂ ವೀಡಿಯೊ ಮೂಲಕ ಜಾಗತಿಕವಾಗಿ ಬಿತ್ತರ ಆಗುತ್ತಿದೆ. ಚಿತ್ರವು ವಿಶ್ವಮಟ್ಟದಲ್ಲಿ ಇನ್ನಷ್ಟು ಜನರನ್ನು ತಲುಪುವುದಕ್ಕೆ ವೇದಿಕೆ ಸಿಕ್ಕಿರುವುದು ಸಂತೋಷ ತಂದಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.