AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Sharma: ತಂದೆ-ತಾಯಿಗೂ ಹೇಳದೇ ಮೊದಲ ಚಿತ್ರಕ್ಕೆ ನಾಯಕಿ ಆಗಿದ್ದ ಅನುಷ್ಕಾ ಶರ್ಮಾ; ಈಗ ಬಯಲಾಯ್ತು ಸತ್ಯ

Anushka Sharma | Shah Rukh Khan: 2008ರ ಡಿಸೆಂಬರ್​ 12ರಂದು ‘ರಬ್​ ನೇ ಬನಾದಿ ಜೋಡಿ’ ಸಿನಿಮಾ ರಿಲೀಸ್​ ಆಯಿತು. ಚೊಚ್ಚಲ ಚಿತ್ರದಲ್ಲಿಯೇ ಅನುಷ್ಕಾ ಶರ್ಮಾ ಮೋಡಿ ಮಾಡಿದರು.

Anushka Sharma: ತಂದೆ-ತಾಯಿಗೂ ಹೇಳದೇ ಮೊದಲ ಚಿತ್ರಕ್ಕೆ ನಾಯಕಿ ಆಗಿದ್ದ ಅನುಷ್ಕಾ ಶರ್ಮಾ; ಈಗ ಬಯಲಾಯ್ತು ಸತ್ಯ
ಅನುಷ್ಕಾ ಶರ್ಮಾ, ಶಾರುಖ್ ಖಾನ್
ಮದನ್​ ಕುಮಾರ್​
|

Updated on: Feb 17, 2023 | 10:36 PM

Share

ಹಿಂದಿ ಚಿತ್ರರಂಗದ ಸಕ್ಸಸ್​ಫುಲ್​ ನಟಿಯರ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ (Anushka Sharma) ಹೆಸರು ಕೂಡ ಮುಂಚೂಣಿಯಲ್ಲಿದೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈಗ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಮೊದಲಿನಂತೆ ಅವರು ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಲಿ ಎಂದು ಅನುಷ್ಕಾ ಶರ್ಮಾ ಫ್ಯಾನ್ಸ್​ ಬಯಸುತ್ತಿದ್ದಾರೆ. ಈ ನಡುವೆ ನೆಟ್​ಫ್ಲಿಕ್ಸ್​ನ (Netflix) ಒಂದು ವಿಶೇಷ ಕಾರ್ಯಕ್ರಮದಲ್ಲಿ ಅವರು ಹಳೇ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ‘ದಿ ರೊಮ್ಯಾಂಟಿಕ್ಸ್​’ ಡಾಕ್ಯು-ಸಿರೀಸ್​ ಅನ್ನು ನೆಟ್​ಫ್ಲಿಕ್ಸ್​ ಬಿಡುಗಡೆ ಮಾಡಿದೆ. ಅದರಲ್ಲಿ ಅನುಷ್ಕಾ ಶರ್ಮಾ, ಆದಿತ್ಯ ಚೋಪ್ರಾ (Aditya Chopra) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದಾರೆ.

ಅನುಷ್ಕಾ ಶರ್ಮಾ ಅವರು ಮೊದಲು ಬಣ್ಣ ಹಚ್ಚಿದ್ದು ‘ರಬ್​ ನೇ ಬನಾದಿ ಜೋಡಿ’ ಸಿನಿಮಾದಲ್ಲಿ. 2008ರಲ್ಲಿ ತೆರೆಕಂಡ ಆ ಚಿತ್ರಕ್ಕೆ ಶಾರುಖ್​ ಖಾನ್​ ಹೀರೋ. ಆದಿತ್ಯ​ ಚೋಪ್ರಾ ಅವರ ನಿರ್ದೇಶನದಲ್ಲಿ ಆ ಸಿನಿಮಾ ಮೂಡಿಬಂತು. ಮೊದಲ ಸಿನಿಮಾದಲ್ಲೇ ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸುವ ಅವಕಾಶ ಅನುಷ್ಕಾ ಶರ್ಮಾಗೆ ಸಿಕ್ಕಿತು. ಆದರೆ ಅದನ್ನು ಖುಷಿಯಿಂದ ಹೇಳಿಕೊಂಡು ತಿರುಗಾಡುವ ಚಾನ್ಸ್​ ಅವರಿಗೆ ಮಿಸ್​ ಆಯಿತು. ಈ ಬಗ್ಗೆ ಅವರು ಈಗ ಬಾಯಿ ಬಿಟ್ಟಿದ್ದಾರೆ.

ಬಾಂಬೆ ಹೈಕೋರ್ಟ್ ಮೊರೆಹೋದ ಅನುಷ್ಕಾ ಶರ್ಮಾ; ತೆರಿಗೆ ಇಲಾಖೆ ವಿರುದ್ಧ ನಟಿ ಗರಂ  

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ನಿರ್ದೇಶಕ ಆದಿತ್ಯ ಚೋಪ್ರಾ ಅವರು ‘ರಬ್​ ನೇ ಬನಾದಿ ಜೋಡಿ’ ಚಿತ್ರದ ಹೀರೋಯಿನ್​ ಯಾರು ಎಂಬುದನ್ನು ಬಹಳ ಗೌಪ್ಯವಾಗಿ ಇಡಲು ಬಯಸಿದ್ದರು. ಹಾಗಾಗಿ ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದು ಎಂದು ಅವರು ಕಂಡೀಷನ್​ ಹಾಕಿದ್ದರು. ‘ಎಲ್ಲವೂ ಗೌಪ್ಯವಾಗಿತ್ತು. ಇದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ನಾನೇ ಹೀರೋಯಿನ್​ ಎಂಬುದು ಗೊತ್ತಾಗಲೇಬಾರದು ಎಂದು ಆದಿ ಹೇಳಿದ್ದರು. ಯಾರಿಗೂ ಹೇಳಬಾರದು, ತಂದೆ-ತಾಯಿಗೂ ವಿಷಯ ಗೊತ್ತಾಗಕೂಡದು ಅಂತ ಅವರು ತಾಕೀತು ಮಾಡಿದ್ದರು’ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

Anushka Sharma: ‘ಮಗಳ ಬಟ್ಟೆ ಹಾಕಿ ಬಂದಿರಾ?’; ಅನುಷ್ಕಾ ಶರ್ಮಾ ಉಡುಗೆಗೆ ಟ್ರೋಲ್​ ಕಾಟ

2008ರ ಡಿಸೆಂಬರ್​ 12ರಂದು ‘ರಬ್​ ನೇ ಬನಾದಿ ಜೋಡಿ’ ಸಿನಿಮಾ ರಿಲೀಸ್​ ಆಯಿತು. ಆದಿತ್ಯ ಚೋಪ್ರಾ ಅಂದುಕೊಂಡಂತೆಯೇ ಆ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಿತು. ಚೊಚ್ಚಲ ಚಿತ್ರದಲ್ಲಿಯೇ ಅನುಷ್ಕಾ ಶರ್ಮಾ ಮೋಡಿ ಮಾಡಿದರು. ಅವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಆ ಬಳಿಕ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.

ಪ್ರಸ್ತುತ ಅನುಷ್ಕಾ ಶರ್ಮಾ ಅವರು ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟರ್​ ಜೂಲನ್​ ಗೋಸ್ವಾಮಿ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ನೆಟ್​ಫ್ಲಿಕ್ಸ್​ ಮೂಲಕ ಈ ಸಿನಿಮಾ ರಿಲೀಸ್​ ಆಗಲಿದೆ. ಬಿಡುಗಡೆ ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ