BBK: 5 ಲಕ್ಷ ರೂಪಾಯಿ ಆಫರ್​ ನೀಡಿದ ಬಿಗ್​ ಬಾಸ್​; ಇದನ್ನು ಗೆಲ್ಲಲು ಸ್ಪರ್ಧಿಗಳು ಏನು ಮಾಡಬೇಕು?

| Updated By: ಮದನ್​ ಕುಮಾರ್​

Updated on: Sep 05, 2022 | 10:00 PM

Bigg Boss Kannada OTT: ‘ಮನಸ್ಸಿಟ್ಟು ಆಟ ಆಡಿ. ನಿಮ್ಮನ್ನು ನೀವು ಸಾಬೀತು ಪಡಿಸಿಕೊಳ್ಳಲು ಇರುವುದು 13 ದಿನ ಮಾತ್ರ’ ಎಂದು ಬಿಗ್​​ ಬಾಸ್​ ಹೇಳಿದ್ದಾರೆ.

BBK: 5 ಲಕ್ಷ ರೂಪಾಯಿ ಆಫರ್​ ನೀಡಿದ ಬಿಗ್​ ಬಾಸ್​; ಇದನ್ನು ಗೆಲ್ಲಲು ಸ್ಪರ್ಧಿಗಳು ಏನು ಮಾಡಬೇಕು?
ಬಿಗ್ ಬಾಸ್ ಕನ್ನಡ ಒಟಿಟಿ
Follow us on

ಕಿಚ್ಚ ಸುದೀಪ್​ (Kichcha Sudeep) ನಡೆಸಿಕೊಡುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಕಾರ್ಯಕ್ರಮದಲ್ಲಿ ಹಲವು ಟ್ವಿಸ್ಟ್​ಗಳು ಎದುರಾಗುತ್ತಿವೆ. ನೇರವಾಗಿ ಒಟಿಟಿಯಲ್ಲಿ ಬಿಗ್​ ಬಾಸ್ (Bigg Boss Kannada)​ ಪ್ರಸಾರ ಆಗುತ್ತಿರುವುದು ಕನ್ನಡದ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ. ಈ ಶೋನಲ್ಲಿ ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳ ಭಾಗವಹಿಸಿದ್ದಾರೆ. 16 ಸ್ಪರ್ಧಿಗಳಿಂದ ಆರಂಭ ಆದ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಈಗ 9 ಜನ ಉಳಿದುಕೊಂಡಿದ್ದಾರೆ. ಐದನೇ ವಾರದಲ್ಲಿ ಆಟದ ಮಜಾ ಹೆಚ್ಚಿದೆ. ಈ ಸಂದರ್ಭದಲ್ಲಿ ಎಲ್ಲ ಸ್ಪರ್ಧಿಗಳಿಗೂ ಬಿಗ್​ ಬಾಸ್​ ಒಂದು ಬಂಪರ್​ ಆಫರ್​ ನೀಡಿದ್ದಾರೆ. ಮನೆಯ ಸದಸ್ಯರು ಬರೋಬ್ಬರಿ 5 ಲಕ್ಷ ರೂಪಾಯಿ ಗೆಲ್ಲಬಹುದು. ಈ ಆಫರ್​ ಘೋಷಣೆ ಆಗುತ್ತಿದ್ದಂತೆಯೇ ಎಲ್ಲ ಸ್ಪರ್ಧಿಗಳಿಗೂ ಹುಮ್ಮಸ್ಸು ಹೆಚ್ಚಾಗಿದೆ.

ನಂದಿನಿ, ಜಶ್ವಂತ್​, ಸೋನು ಶ್ರೀನಿವಾಸ್​ ಗೌಡ, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ, ಸಾನ್ಯಾ ಐಯ್ಯರ್​, ಜಯಶ್ರೀ ಆರಾಧ್ಯ ಅವರು ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. 5 ಲಕ್ಷ ರೂಪಾಯಿ ಹಣ ಗೆಲ್ಲಲು ಎಲ್ಲರೂ ಪ್ರಯತ್ನ ಆರಂಭಿಸಿದ್ದಾರೆ. ಅದಕ್ಕಾಗಿ ಬಿಗ್ ಬಾಸ್​ ವಿವಿಧ ಟಾಸ್ಕ್​ಗಳನ್ನು ನೀಡುತ್ತಿದ್ದಾರೆ.

ಬಿಗ್ ಬಾಸ್​ ಮಾಡಿದ ಘೋಷಣೆ ಏನು?

ಇದನ್ನೂ ಓದಿ
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

‘ಬಿಗ್​ ಬಾಸ್​ ಒಟಿಟಿ ಪ್ರಯಾಣ ಮುಗಿಯೋಕೆ ಬಾಕಿ ಇರೋದು ಇನ್ನು ಎರಡೇ ಹೆಜ್ಜೆ. ಈ ಹಂತವನ್ನು ತಲುಪಲು ನೀವೆಲ್ಲರೂ ವೈಯಕ್ತಿಕವಾಗಿ, ತಂಡಗಳಾಗಿ ವಿವಿಧ ಟಾಸ್ಕ್​ಗಳನ್ನು ಆಡಿದ್ದೀರಿ. ಕೆಲವು ಟಾಸ್ಕ್​ಗಳಲ್ಲಿ ಗೆದ್ದಿದ್ದೀರಿ, ಇನ್ನು ಕೆಲವು ಟಾಸ್ಕ್​ಗಳಲ್ಲಿ ಕಲಿತಿದ್ದೀರಿ. ಈ ವಾರದ ಟಾಸ್ಕ್​ನಲ್ಲಿ ಮನೆಯ ಸದಸ್ಯರಿಗೆ 5 ಲಕ್ಷ ರೂಪಾಯಿವರೆಗೆ ಹಣ ಸಂಗ್ರಹಿಸುವ ಅವಕಾಶವನ್ನು ಬಿಗ್​ ಬಾಸ್​ ನೀಡುತ್ತಿದ್ದಾರೆ’ ಎಂಬ ಘೋಷಣೆ ಮಾಡಲಾಗಿದೆ.

‘ಈ 5 ಲಕ್ಷ ರೂಪಾಯಿ ಗಳಿಸಲು ವಿವಿಧ ಟಾಸ್ಕ್​ಗಳು ಇರುತ್ತವೆ. ಪ್ರತಿ ಟಾಸ್ಕ್​ನ ಮೌಲ್ಯ ಮತ್ತು ಆಡುವ ಸದಸ್ಯರ ಸಂಖ್ಯೆಯನ್ನು ತಿಳಿಸಲಾಗುತ್ತಿದೆ. ಮನೆಯ ಸದಸ್ಯರು ಸಂಗ್ರಹಿಸಿದ ಹಣವನ್ನು ಫಿನಾಲೆ ವೇದಿಕೆಯಲ್ಲಿ ಜನಮೆಚ್ಚಿದ ಒಬ್ಬ ಸದಸ್ಯನಿಗೆ ನೀಡಲಾಗುತ್ತದೆ. ಪ್ರತಿ ಟಾಸ್ಕ್​ ಅನ್ನು ಮನಸ್ಸಿಟ್ಟು ಆಡಿ. ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳಲು ಇರುವುದು 13 ದಿನ ಮಾತ್ರ’ ಎಂದು ಬಿಗ್​​ ಬಾಸ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:00 pm, Mon, 5 September 22