
‘ಬಿಗ್ ಬಾಸ್ ಕನ್ನಡ ಒಟಿಟಿ’ಯಲ್ಲಿ ಐದನೇ ವಾರ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನೊಂದು ವಾರ ಕಳೆದರೆ ಟಿವಿ ಸೀಸನ್ ಆರಂಭ ಆಗಲಿದೆ. ಈ ಕಾರಣದಿಂದಲೂ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಸಾಕಷ್ಟು ಕುತೂಹಲ ಮೂಡಿಸಿದೆ. ಈಗ ಐದನೇ ವಾರದ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಿಂದ ನಂದಿನಿ ಔಟ್ ಆಗಿದ್ದಾರೆ. ಈ ಮೂಲಕ ಮನೆಯ ಸದಸ್ಯರ ಸಂಖ್ಯೆ ಮತ್ತಷ್ಟು ಕಡಿಮೆ ಆಗಿದೆ. ಇನ್ನುಮುಂದೆ ಸ್ಪರ್ಧೆ ಮತ್ತಷ್ಟು ಕಠಿಣ ಆಗಲಿದೆ.
‘ಬಿಗ್ ಬಾಸ್’ ಮನೆಯಿಂದ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಪ್ರತಿವಾರವೂ ಮೂಡುತ್ತದೆ. ಅದರಲ್ಲೂ ಕೊನೆಯ ವಾರ ಸಮೀಪಿಸಿದಾಗ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಕೌತುಕ ಮತ್ತಷ್ಟು ಹೆಚ್ಚಾಗುತ್ತದೆ. ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ ಆದ ಕಾರಣ ಯಾರೇ ಹೊರ ಹೋದರು ಮನೆಯವರಿಗೆ ಹಾಗೂ ವೀಕ್ಷಕರಿಗೆ ಬೇಸರ ಆಗುತ್ತದೆ. ಆದರೂ ಎಲಿಮಿನೇಷನ್ ಆಗಲೇಬೇಕು. ಶೋ ಮುಂದೆ ಸಾಗಲೇಬೇಕು. ಅದರಂತೆ ಐದನೇ ವಾರದ ಎಲಿಮಿನೇಷನ್ ಆಗಿದೆ.
ಫಿನಾಲೆ ವೀಕ್ಗೆ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಈ ಮೊದಲೇ ಹೋಗಿದ್ದರು. ಉಳಿದಂತೆ ಆರ್ಯವರ್ಧನ್ ಗುರೂಜಿ, ಜಶ್ವಂತ್ ಬೋಪಣ್ಣ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಹಾಗೂ ನಂದಿನಿ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದರು. ಈ ಪೈಕಿ ಆರ್ಯವರ್ಧನ್ ಮೊದಲು ಸೇವ್ ಆದರು. ಸೋಮಣ್ಣ, ಸೋನು, ಜಯಶ್ರೀ, ಸೋಮಣ್ಣ ನಂತರ ಸೇವ್ ಆದರು. ಕಡಿಮೆ ವೋಟ್ ಪಡೆದು ನಂದಿನಿ ಔಟ್ ಆಗಿದ್ದಾರೆ.
ಇದನ್ನೂ ಓದಿ: ಪ್ರಾಣಿಗಳ ಭಾಷೆಯಲ್ಲಿ ಮಾತಾಡಿಕೊಂಡ ನಂದಿನಿ, ಜಶ್ವಂತ್; ಬಿಗ್ ಬಾಸ್ನಲ್ಲಿ ಪ್ರೇಮಿಗಳ ಸಲ್ಲಾಪ
ಜಶ್ವಂತ್ ಹಾಗೂ ನಂದಿನಿ ನಿಜ ಜೀವನದಲ್ಲಿ ಲವರ್ಸ್. ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿದ ಉದಾಹರಣೆ ಇದೆ. ಆದರೆ, ಈ ಬಾರಿ ಲವರ್ಸ್ ಅನ್ನೇ ಮನೆ ಒಳಗೆ ಕಳುಹಿಸಲಾಗಿತ್ತು. ಜಶ್ವಂತ್ ಬಗ್ಗೆ ನಂದಿನಿಗೆ ಸಾಕಷ್ಟು ಪೊಸೆಸಿವ್ನೆಸ್ ಇತ್ತು. ಇದು ಜಶ್ವಂತ್ ಆಟದ ಮೇಲೆ ಪ್ರಭಾವ ಬೀರುತ್ತಲೇ ಇತ್ತು. ‘ನಾನು ಈ ವಾರ ಮನೆಯಿಂದ ಹೊರ ಹೋಗುತ್ತೇನೆ’ ಎಂದು ನಂದಿನಿ ಈ ವಾರ ಅನೇಕ ಬಾರಿ ಹೇಳಿಕೊಂಡಿದ್ದಿದೆ. ಈ ಕಾರಣದಿಂದಲೂ ಅವರು ಔಟ್ ಆಗಿದ್ದಾರೆ. ಈ ಮೂಲಕ ರೂಪೇಶ್, ಸಾನ್ಯಾ, ರಾಕೇಶ್, ಸೋಮಣ್ಣ, ಆರ್ಯವರ್ಧನ್, ಜಯಶ್ರೀ, ಸೋನು, ಜಶ್ವಂತ್ ಫಿನಾಲೆ ವೀಕ್ ತಲುಪಿದ್ದಾರೆ.
Published On - 8:41 pm, Sat, 10 September 22