‘ರಾಧೆ ಶ್ಯಾಮ್​’ ಸಿನಿಮಾ ಒಟಿಟಿಗೆ ಬರಲು ದಿನಾಂಕ ಫಿಕ್ಸ್​; ಒಟಿಟಿಯಲ್ಲಾದರೂ ಆಗುತ್ತಾ ಕಮಾಲ್​?

‘ಜೇಮ್ಸ್​’, ‘ಆರ್​ಆರ್​ಆರ್​’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾದ ಅಬ್ಬರದ ನಡುವೆ ಪ್ರಭಾಸ್ ಸಿನಿಮಾ ಕಳೆದೇ ಹೋಗಿದೆ. ಹೀಗಾಗಿ, ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡುವ ಅನಿವಾರ್ಯತೆಯಲ್ಲಿ ಚಿತ್ರತಂಡದವರಿದ್ದಾರೆ.

‘ರಾಧೆ ಶ್ಯಾಮ್​’ ಸಿನಿಮಾ ಒಟಿಟಿಗೆ ಬರಲು ದಿನಾಂಕ ಫಿಕ್ಸ್​; ಒಟಿಟಿಯಲ್ಲಾದರೂ ಆಗುತ್ತಾ ಕಮಾಲ್​?
TV9kannada Web Team

| Edited By: Rajesh Duggumane

Mar 28, 2022 | 4:21 PM

ನಟ ಪ್ರಭಾಸ್​ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ ಮಾರ್ಚ್​ 11ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾವನ್ನು ಪ್ರೇಕ್ಷಕರು ಅಷ್ಟಾಗಿ ಇಷ್ಟಪಡಲೇ ಇಲ್ಲ. ಹೀಗಾಗಿ, ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ಚಿತ್ರ ಚೆನ್ನಾಗಿ ಗಳಿಕೆ ಮಾಡುತ್ತಿದೆ ಎಂದು ಚಿತ್ರತಂಡದವರು ಹೇಳಿಕೊಂಡರಾದರೂ ಅದನ್ನು ನಂಬೋಕೆ ಫ್ಯಾನ್ಸ್​ ರೆಡಿ ಇರಲಿಲ್ಲ. ಒಟ್ಟಾರೆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ  ನೆಲಕಚ್ಚಿತು. ‘ಬಾಹುಬಲಿ 2’ ಯಶಸ್ಸಿನ ಬಳಿಕ ಪ್ರಭಾಸ್ ಸತತವಾಗಿ ಎರಡನೇ ಸೋಲನ್ನು ಕಂಡರು. ಈಗ ‘ರಾಧೆ ಶ್ಯಾಮ್’​ ಸಿನಿಮಾ (Radhe Syam Movie) ಒಟಿಟಿಗೆ ಬರೋಕೆ ರೆಡಿ ಆಗಿದೆ. ಸಿನಿಮಾ ತೆರೆಕಂಡು ಕೇವಲ 20 ದಿನಕ್ಕೆ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಸಿನಿಮಾ ಪ್ರಸಾರ ಆರಂಭಿಸುತ್ತಿದೆ. ಈ ಚಿತ್ರವನ್ನು ಒಟಿಟಿ ಮಂದಿ ಇಷ್ಟಪಡುತ್ತಾರೋ ಎನ್ನುವ ಕುತೂಹಲ ಅಭಿಮಾನಿಗಳದ್ದು.

‘ಬಾಹುಬಲಿ 2’ ಬಳಿಕ ಪ್ರಭಾಸ್ ನಟನೆಯ ‘ಸಾಹೋ’ ಸಿನಿಮಾ ಸೋಲು ಕಂಡಿತು. ಆ ಬಳಿಕ ತೆರೆಗೆ ಬಂದಿದ್ದು ‘ರಾಧೆ ಶ್ಯಾಮ್​’ ಚಿತ್ರ. ಈ ಸಿನಿಮಾ ಪ್ರೇಕ್ಷಕರಿಗೆ ರುಚಿಸಲೇ ಇಲ್ಲ. ಈ ಚಿತ್ರ ಮಾಮೂಲಿ ಕಮರ್ಷಿಯಲ್​ ಸಿನಿಮಾಗಳ ರೀತಿಯಲ್ಲಿ ಇರಲಿಲ್ಲ. ಬಹುಕೋಟಿ ವೆಚ್ಚದಲ್ಲಿ ಸಿದ್ಧವಾದ ಈ ಸಿನಿಮಾದಲ್ಲಿ ಫೈಟ್​, ಮಾಸ್​ ಡೈಲಾಗ್​ಗಳು ಇರಲಿಲ್ಲ. ಒಂದು ಲವ್​ ಸ್ಟೋರಿಯನ್ನು ಮಾತ್ರ ಹೇಳಲಾಗಿತ್ತು. ಈ ಕಾರಣಕ್ಕೆ ಪ್ರಭಾಸ್​ ಫ್ಯಾನ್ಸ್​​ಗಳೇ​ ಚಿತ್ರವನ್ನು ತೆಗಳಿದ್ದರು. ಈಗ ಸಿನಿಮಾ ಏಪ್ರಿಲ್​ 1ರಂದು ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ.

ರಾಧ ಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಯುವಿ ಕ್ರಿಯೇಷನ್ಸ್​ ಸಿನಿಮಾಗೆ ಬಂಡವಾಳ ಹೂಡಿದೆ. ಈ ಚಿತ್ರದ ಬಹುತೇಕ ಶೂಟಿಂಗ್​ ಯುರೋಪ್​ನಲ್ಲಿ ನಡೆದಿದೆ. ಕೊವಿಡ್ ಕಾರಣದಿಂದ ಕೆಲ ಸ್ಥಳಗಳ ಸೆಟ್​ಗಳನ್ನು ಭಾರತದಲ್ಲಿಯೇ ಹಾಕಿ ಶೂಟ್​ ಮಾಡಲಾಗಿದೆ. ಇದರಿಂದ ಸಿನಿಮಾದ ಬಜೆಟ್​ 300 ಕೋಟಿ ರೂಪಾಯಿ ದಾಟಿದೆ. ಇಷ್ಟು ದೊಡ್ಡ ಮೊತ್ತದ ಹಣ ನಿರ್ಮಾಪಕರಿಗೆ ಮರಳೋದು ಅನುಮಾನ ಎನ್ನಲಾಗುತ್ತಿದೆ.

ಇತ್ತೀಚೆಗೆ ಹಲವು ಸ್ಟಾರ್​ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಕೆಲವೇ ವಾರಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ‘ಪುಷ್ಪ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಆದರೆ, ‘ರಾಧೆ ಶ್ಯಾಮ್​’ ಪರಿಸ್ಥಿತಿ ಹಾಗಿಲ್ಲ. ‘ಜೇಮ್ಸ್​’, ‘ಆರ್​ಆರ್​ಆರ್​’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾದ ಅಬ್ಬರದ ನಡುವೆ ಪ್ರಭಾಸ್ ಸಿನಿಮಾ ಕಳೆದೇ ಹೋಗಿದೆ. ಹೀಗಾಗಿ, ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡುವ ಅನಿವಾರ್ಯತೆಯಲ್ಲಿ ಚಿತ್ರತಂಡದವರಿದ್ದಾರೆ.

ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರು ಹಾಗೂ ಒಟಿಟಿಯಲ್ಲಿ ಸಿನಿಮಾ ನೋಡುವವರ ಮನಸ್ಥಿತಿ ಒಂದೇ ರೀತಿ ಇರುವುದಿಲ್ಲ. ಹೀಗಾಗಿ, ಒಟಿಟಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Prabhas: ‘ರಾಧೆ ಶ್ಯಾಮ್’ ಸೋಲಿನ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪ್ರಭಾಸ್; ‘ಬಾಹುಬಲಿ’ ನಟನಿಗೆ ಏನಾಯ್ತು?

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada