AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಕಾಲಿಟ್ಟ ‘ರಕ್ಕಸಪುರದೋಳ್’: ಅಮೇಜಾನ್ ಪ್ರೈಮ್‌ನಲ್ಲಿ ಇಂದಿನಿಂದ ಪ್ರಸಾರ ಆರಂಭ

ಚಿತ್ರಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ‘ರಕ್ಕಸಪುರದೋಳ್’ ಕ್ರೈಂ ಥ್ರಿಲ್ಲರ್ ಸಿನಿಮಾ ಇದೀಗ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಹಾಗೂ ಮತ್ತೊಮ್ಮೆ ವೀಕ್ಷಿಸಲು ಕಾಯುತ್ತಿದ್ದ ಅಭಿಮಾನಿಗಳು ಒಟಿಟಿಯಲ್ಲಿ ವೀಕ್ಷಿಸಬಹುದು ಎಂದು ನಟ ಅನಿರುದ್ಧ್ ಭಟ್ ತಿಳಿಸಿದ್ದು, ಸಿನಿಮಾ ವೀಕ್ಷಿಸಿ ಬೆಂಬಲಿಸಲು ಚಿತ್ರತಂಡ ಮನವಿ ಮಾಡಿದೆ.

ಒಟಿಟಿಗೆ ಕಾಲಿಟ್ಟ ‘ರಕ್ಕಸಪುರದೋಳ್’: ಅಮೇಜಾನ್ ಪ್ರೈಮ್‌ನಲ್ಲಿ ಇಂದಿನಿಂದ ಪ್ರಸಾರ ಆರಂಭ
ರಕ್ಕಸಪುರದೋಳ್
ರಾಜೇಶ್ ದುಗ್ಗುಮನೆ
|

Updated on: Sep 11, 2026 | 1:12 PM

Share

ಮುಖ್ಯಾಂಶಗಳು

  • ಅಮೇಜಾನ್ ಪ್ರೈಮ್‌ಗೆ 'ರಕ್ಕಸಪುರದೋಳ್' ಗ್ರಾಂಡ್ ಎಂಟ್ರಿ
  • ಅಭಿಮಾನಿಗಳ ಕಾಯುವಿಕೆಗೆ ಸಿಕ್ತು ತೆರೆ
  • ಕೊಲೆ ರಹಸ್ಯವೋ ಅಥವಾ ದೆವ್ವದ ಕಾಟವೋ?

ಸಿನಿಮಾ ಪ್ರೇಮಿಗಳು ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ‘ರಕ್ಕಸಪುರದೋಳ್’ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಥಿಯೇಟರ್‌ಗಳಲ್ಲಿ ಸದ್ದು ಮಾಡಿದ್ದ ಈ ಚಿತ್ರ, ಇಂದಿನಿಂದ ಜನಪ್ರಿಯ ಒಟಿಟಿ ಸಂಸ್ಥೆಯಾದ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರಸಾರವಾಗುತ್ತಿದೆ. ಥಿಯೇಟರ್​​ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡಿವರು ಒಟಿಟಿಯಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ.

ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದ ದಿನದಿಂದಲೂ ಒಟಿಟಿ ಪ್ರಸಾರ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಈ ಬಗ್ಗೆ ಸಿನಿಮಾದ ನಟ ಅನಿರುದ್ಧ್ ಭಟ್ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕಾಯುವಿಕೆಗೆ ತೆರೆ ಎಳೆದಿದ್ದಾರೆ. ‘ರಕ್ಕಸಪುರದೋಳ್ ಒಟಿಟಿಗೆ ಯಾವಾಗ ಬರುತ್ತದೆ ಎಂದು ಸಾಕಷ್ಟು ಜನ ಕೇಳುತ್ತಿದ್ದರು. ಆಗ ನನಗೂ ಉತ್ತರ ಇರಲಿಲ್ಲ. ಇಂದಿನಿಂದ ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ರಕ್ಕಸಪುರದೋಳ್’ ಚಿತ್ರವನ್ನು ಥಿಯೇಟರ್​​ನಲ್ಲಿ ನೋಡಿ ಮತ್ತೊಮ್ಮೆ ವೀಕ್ಷಿಸಬೇಕು ಅಂದುಕೊಂಡಿದ್ದವರಿಗೂ ಹಾಗೂ ಚಿತ್ರಮಂದಿರಕ್ಕೆ ತೆರಳಲಾಗದೆ ಒಟಿಟಿಗಾಗಿ ಕಾಯುತ್ತಿದ್ದವರಿಗೂ ಇದು ಉತ್ತಮ ಅವಕಾಶವಾಗಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ನೋಡಿ ಬೆಂಬಲಿಸುವಂತೆ ಚಿತ್ರತಂಡ ಮನವಿ ಮಾಡಿದೆ.

ಏನಿದು ಸಿನಿಮಾ ಕಥೆ?

‘ರಕ್ಕಸಪುರದೋಳ್’’ ಇದೊಂದು ಅದ್ಭುತ ಕ್ರೈಂ ಥ್ರಿಲ್ಲರ್ ಸಿನಿಮಾ. ಆದರೆ ಈ ಚಿತ್ರ ಕೇವಲ ಕೊಲೆ-ತನಿಖೆಗೆ ಮಾತ್ರ ಸೀಮಿತವಾಗದೆ, ಹಲವು ಕುತೂಹಲಕಾರಿ ಮತ್ತು ರೋಚಕ ಮಸಾಲೆ ಅಂಶಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ರವಿ ಸಾರಂಗ ನಿರ್ದೇಶನ ಹಾಗೂ ರವಿವರ್ಮಾ ನಿರ್ಮಾಣದ ಈ ಚಿತ್ರದಲ್ಲಿ ನಟ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ಅಭಿಮಾನಿಗಳಿಗೆ ‘ರಕ್ಕಸಪುರದೋಳ್’ ಮನರಂಜನೆಯ ಪ್ಯಾಕೇಜ್

ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯನ್ನು (ರಾಜ್ ಬಿ ಶೆಟ್ಟಿ) ‘ರಕ್ಕಸಪುರ’ ಎಂಬ ಊರಿಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಆತ ಊರಿಗೆ ಕಾಲಿಡುತ್ತಿದ್ದಂತೆ ಅಲ್ಲಿ ಸಾಲು ಸಾಲು ಕೊಲೆಗಳು ನಡೆಯಲು ಆರಂಭವಾಗುತ್ತವೆ. ಇದರ ಮಧ್ಯೆ ದೆವ್ವ-ಭೂತದ ಕಾಟದ ಎಂಟ್ರಿಯೂ ಆಗುತ್ತದೆ. ಹಾಗಾದರೆ ಈ ಕೊಲೆಗಳ ಹಿಂದೆ ಇರುವುದು ಮನುಷ್ಯನಾ ಅಥವಾ ಅಪ್ರತ್ಯಕ್ಷ ಶಕ್ತಿಯಾ? ಕೊಲೆಗಳ ಹಿಂದಿನ ಅಸಲಿ ರಹಸ್ಯವೇನು? ಎಂಬುದನ್ನು ಚಿತ್ರಮಂದಿರದಲ್ಲೇ ನೋಡಿ ಅನುಭವಿಸಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us