
ಪಾಕಿಸ್ತಾನದ ಪಾಪ್ಯುಲರ್ ಟಿಕ್ ಟಾಕರ್ ಸಾಜಲ್ ಮಲಿಕ್ (Sajal Malik) ಅವರು ಈಗ ವಿವಾದಕ್ಕೆ ಸಿಲುಕಿದ್ದಾರೆ. ಅವರ ಖಾಸಗಿ ವಿಡಿಯೋ ಲೀಕ್ ಆಗಿ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಈ ವಿಡಿಯೋ ಹರಿದಾಡುತ್ತಿದೆ. ಸಾಜಲ್ ಮಲಿಕ್ ಅವರ ಬಳಿ ಉತ್ತರಕ್ಕಾಗಿ ಅನೇಕರು ಬೇಡಿಕೆ ಇಟ್ಟಿದ್ದಾರೆ. ಇನ್ನೂ ಕೆಲವರು ಇದು ಫೇಕ್ ಇರಬಹುದು ಎಂದಿದ್ದಾರೆ. ಈ ವಿಡಿಯೋನ ಶೇರ್ ಮಾಡಿಕೊಳ್ಳದಂತೆ ಅವರ ಕಟ್ಟಾಭಿಮಾನಿಗಳು ಕೋರಿಕೆ ಇಡುತ್ತಾ ಇದ್ದಾರೆ.
ಸಾಜಲ್ ಮಲಿಕ್ ಅವರು ಇತ್ತೀಚೆಗೆ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಸಾಕಷ್ಟು ಫಾಲೋವರ್ಗಳನ್ನು ಹೊಂದಿದ್ದಾರೆ. ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಹರಿದಾಡಿದೆ. ಸಾಜಲ್ ಮಲಿಕ್ ಅಭಿಮಾನಿಗಳು ಆದಷ್ಟು ಈ ವಿಡಿಯೋ ವೈರಲ್ ಆಗದಂತೆ ತಡೆಯುವ ಪ್ರಯತ್ನದಲ್ಲಿ ಇದ್ದಾರೆ. ಕೆಲವರು ಇದು ಎಐನಿಂದ ಮಾಡಿರಬಹದಾದ ವಿಡಿಯೋ ಎಂದು ಶಂಕಿಸಿದ್ದಾರೆ.
ಇದು ಸಾಜಲ್ ಮಲಿಕ್ ಅವರ ಉದ್ದೇಶ ಪೂರ್ವಕ ಕ್ರಿಯೆ ಇರಬಹುದು ಎಂದು ಅನೇಕರು ಹೇಳಿದ್ದಾರೆ. ಅಷ್ಟು ಖಾಸಗಿ ವಿಡಿಯೋ ಲೀಕ್ ಆಗಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿರಬಹುದು ಎಂದು ಅನೇಕರು ಹೇಳುತ್ತಿದ್ದಾರೆ.
ಸಾಜಲ್ ಅವರು ಈ ವಿಡಿಯೋ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರು ಈ ಬಗ್ಗೆ ಓಪನ್ ಆಗಿ ಬಂದು ಮಾತನಾಡಿದರೆ ಅಥವಾ ಅಧಿಕೃತ ಹೇಳಿಕೆ ನೀಡಿದರೆ ಈ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ಸಿಕ್ಕಂತೆ ಆಗಲಿದೆ.
ನಟಿಯರು ಹಾಗೂ ಇನ್ಫ್ಲುಯೆನ್ಸರ್ಗಳ ಖಾಸಗಿ ವಿಡಿಯೋ ಲೀಕ್ ಆಗುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಈ ಟ್ರೆಂಡ್ಗೆ ಸಾಜಲ್ ಕೂಡ ಸೇರಿಕೊಂಡಿದ್ದಾರೆ. ಮಿನಾಹಿಲ್ ಮಲಿಕ್, ಇಮ್ಶಾ ರೆಹ್ಮಾನ್ ರೀತಿಯ ಇನ್ಫ್ಲುಯೆನ್ಸರ್ಗಳ ಖಾಸಗಿ ವಿಡಿಯೋ ವೈರಲ್ ಆದ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು.
ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್; ಅಭಿಮಾನಿಗಳಲ್ಲಿ ಕೈ ಮುಗಿದು ಮನವಿ ಮಾಡಿದ ನಟಿ
ಭಾರತದಲ್ಲೂ ಅನೇಕರು ಈ ರೀತಿಯ ಸಮಸ್ಯೆಗೆ ಒಳಗಾಗಿದ್ದಾರೆ. ನಟಿ ಶ್ರುತಿ ನಾರಾಯಣ್ ಅವರ ವಿಡಿಯೋ ಲೀಕ್ ಆಗಿ ಸದ್ದು ಮಾಡಿತ್ತು. ಆ ಬಳಿಕ ಆ ವಿಡಿಯೋ ಎಐನಿಂದ ಮಾಡಲ್ಪಟ್ಟಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.