
‘ಮಿಲನ’ ಖ್ಯಾತಿಯ ನಟಿ ಪಾರ್ವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಮಲಯಾಳಂ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸಿನಿಮಾ ‘ಪ್ರಥಮ ದೃಷ್ಟಿಯ ಕುಟ್ಟಕ್ಕಾರ್’ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಒಟಿಟಿ ಪ್ರೇಕ್ಷಕರಿಂದಲೂ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.ಓಣಂ ಹಬ್ಬದ ಸಮಯದಲ್ಲಿ ತೆರೆಗೆ ಬಂದ ‘ಪ್ರಥಮ ದೃಷ್ಟಿಯ ಕುಟ್ಟಕ್ಕಾರ್’ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮ ಕಲೆಕ್ಷನ್ ಮಾಡಿತ್ತು. ಶಹಾದ್ ನಿಲಂಬೂರ್ ನಿರ್ದೇಶನದ ಈ ಚಿತ್ರದಲ್ಲಿ ಪಾರ್ವತಿ ಅವರು ತಮ್ಮ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಒಟಿಟಿ ರಿಲೀಸ್ ಬಗ್ಗೆ ಇಲ್ಲ ಅಪ್ಡೇಟ್; ಕಾಯುವಿಕೆಗೆ ಕೊನೆ ಯಾವಾಗ?
ಚಿತ್ರದಲ್ಲಿ ಮ್ಯಾಥ್ಯೂ ಥಾಮಸ್, ಸಿದ್ಧಾರ್ಥ್ ಭರತನ್, ಉನ್ನಿಮಯ ಪ್ರಸಾದ್ ಮತ್ತು ವಿಜಯರಾಘವನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಕಥೆಯ ಕುತೂಹಲಕಾರಿ ಹೆಣಿಕೆ, ಒಂದರ ಹಿಂದೆ ಒಂದರಂತೆ ಎದುರಾಗುವ ಸಸ್ಪೆನ್ಸ್ ತಿರುವುಗಳು ಮತ್ತು ನಾಯಕರ ನೈಜ ಅಭಿನಯವು ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಾಗಿದ್ದರೂ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ಸುಮಾರು 40.93 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು ಎಂಬುದು ವಿಶೇಷ.
#PradhamaDrishtiyaKuttakkar
What a film
Must-watch twist turns debba midha debba
Lady actress Parvathy 🙌🙌🙌
Last 1 hour, edge-of-your-seat
Chudandi bagundhi
Only available in Malayalam
Ending the ring
4/5 https://t.co/dSP79KNChe— sunil royal (@sunnythedoctor) October 10, 2026
ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಿಸಲು ತಪ್ಪಿಸಿಕೊಂಡವರಿಗಾಗಿ ಹಾಗೂ ಮತ್ತೊಮ್ಮೆ ಕಥೆಯ ರೋಚಕತೆಯನ್ನು ಸವಿಯಲು ಬಯಸುವವರಿಗಾಗಿ ಈಗ ಒಟಿಟಿಯಲ್ಲಿ ಚಿತ್ರ ಮಂದಿದೆ. ಈ ಸಿನಿಮಾ ಅಕ್ಟೋಬರ್ 9ರಂದು ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದೆ. ಮಲಯಾಳಂ ಮೂಲ ಭಾಷೆಯ ಜೊತೆಗೆ ಇತರ ಭಾಷೆಯಲ್ಲೂ ಸಿನಿಮಾ ಪ್ರಸಾರ ಆರಂಭಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Mon, 12 October 26