AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಂಡವ್​​ನ ದೂರ ಇಟ್ಟ ಗಗನ್; ಇನ್ನಾದರೂ ಬದಲಾಗುತ್ತಾ ಆಟ?

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗೆಳೆಯರಾಗಿದ್ದ ಗಗನ್ ಹಾಗೂ ತಾಂಡವ್ ಅವರ ಸ್ನೇಹದಲ್ಲಿ ಬಿರುಕು ಮೂಡಿದೆ. ಸುದೀಪ್ ಅವರ ಎಚ್ಚರಿಕೆಯ ಬಳಿಕ ತಾಂಡವ್ ಅವರಿಂದ ದೂರ ಸರಿಯಲು ಗಗನ್ ನಿರ್ಧರಿಸಿದ್ದು, ಫಿನಾಲೆ ರೇಸ್ ಕುರಿತು ಸೌಂದರ್ಯಾ ಹೆಸರು ತೆಗೆದುಕೊಂಡಿರುವುದು ದೊಡ್ಮನೆಯಲ್ಲಿ ಹೊಸ ಚರ್ಚೆಗೆ ಹಾಗೂ ಸಂಚಲನಕ್ಕೆ ಕಾರಣವಾಗಿದೆ.

ತಾಂಡವ್​​ನ ದೂರ ಇಟ್ಟ ಗಗನ್; ಇನ್ನಾದರೂ ಬದಲಾಗುತ್ತಾ ಆಟ?
ಗಗನ್-ತಾಂಡವ್ Image Credit source: Colors Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 12, 2026 | 7:01 AM

Share

ಮುಖ್ಯಾಂಶಗಳು

  • ಸುದೀಪ್ ಕ್ಲಾಸ್ ಬಳಿಕ ಬದಲಾದ ಆಟದ ಲೆಕ್ಕಾಚಾರ
  • ತಾಂಡವ್ ರಾಮ್​ರಿಂದ ದೂರ ಉಳಿಯಲು ಗಗನ್ ನಿರ್ಧಾರ
  • ಫಿನಾಲೆ ರೇಸ್​ನಿಂದ ತಾಂಡವ್ ಔಟ್

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಗಗನ್ ಹಾಗೂ ತಾಂಡವ್ ಅವರ ಗೆಳೆತನ ಅವರ ಆಟಕ್ಕೇ ಮುಳುವಾಗುತ್ತಿದೆ. ಇದನ್ನು ಪದೇಪದೇ ಸುದೀಪ್ ಹೇಳಿದರೂ ಆಟದ ಸ್ವರೂಪ ಬದಲಾಗಿಲ್ಲ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಈಗ ಇಬ್ಬರ ಆಟದಲ್ಲಿ ಬಿರುಕು ಮೂಡುವ ಎಲ್ಲಾ ಲಕ್ಷಣ ಕಾಣಿಸಿದೆ. ಶನಿವಾರದ ಎಪಿಸೋಡ್ ಬಳಿಕ ಈ ಬೆಳವಣಿಗೆ ನಡೆದಿದೆ.

ಗಗನ್ ಹಾಗೂ ತಾಂಡವ್ ರಾಮ್ ಅವರು ಮೊದಲಿನಿಂದಲೂ ಗೆಳೆಯರು. ಬಿಗ್ ಬಾಸ್​ಗೆ ಬಂದ ಬಳಿಕ ಇವರು ಮತ್ತಷ್ಟು ಕ್ಲೋಸ್ ಆದರು. ಇವರ ಗೆಳೆತನ ವೈಯಕ್ತಿಕ ಆಟದ ಮೇಲೂ ಸಾಕಷ್ಟು ಎಫೆಕ್ಟ್ ಆಯಿತು. ಈಗ ಗಗನ್ ಅವರು ತಾಂಡವ್ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಮೊದಲು ತಾಂಡವ್ ರಾಮ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಕಳುಹಿಸುವ ಡ್ರಾಮಾ ಮಾಡಲಾಗಿತ್ತು. ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ಇದಾದ ಬಳಿಕ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುವಾಗ ಸುದೀಪ್ ಅವರು, ‘ವೈಯಕ್ತಿಕ ಆಟ ಆಡಿ’ ಎಂದು ಕಿವಿಮಾತು ಹೇಳಿದ್ದರು. ಆದರೂ ತಾಂಡವ್ ರಾಮ್ ಬದಲಾಗಲೇ ಇಲ್ಲ.

ಬಿಗ್ ಬಾಸ್ ಮನೆ ಒಳಗೆ ಹೋಗಿ, ‘ಗಗನ್ ಗಗನ್’ ಎಂದು ಅವರನ್ನು ಬೆಂಬಲಿಸಿ ನಿಂತರು. ಗಗನ್ ಕೂಡ ಹಿಗೆಯೇ ಮಾಡಿದರು. ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್​ನಲ್ಲಿಯೂ ಇಬ್ಬರೂ ಬೇರೆ ಬೇರೆ ತಂಡದಲ್ಲಿದ್ದರೂ ಒಟ್ಟಾಗಿ ಆಡಿದ್ದರು. ಟಾಸ್ಕ್ ವೇಳೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡಿದ್ದರು. ಇದನ್ನು ವಿಟಿ ಹಾಕಿ ತೋರಿಸಿ ಸುದೀಪ್ ಕ್ಲಾಸ್ ತೆಗೆದುಕೊಂಡರು. ಇದಾದ ಬಳಿಕ ಗಗನ್ ಅವರು ತಾಂಡವ್ ರಾಮ್ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ

‘ನಾನು ತಾಂಡವ್ ರಾಮ್​​ನಿಂದ ದೂರ ಇರುತ್ತೇನೆ. ಗೆಳೆತನ ಇರುತ್ತದೆ. ಆದರೆ, ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಇರುತ್ತದೆ’ ಎಂದಿದ್ದರು ಗಗನ್. ಯಾರು ಫಿನಾಲೆ ತಲುಪುತ್ತಾರೆ ಎಂದು ಸುದೀಪ್ ಕೇಳಿದಾಗ ಗಗನ್ ಅವರು ತಾಂಡವ್ ಬದಲು ಸೌಂದರ್ಯಾ ಹೆಸರನ್ನು ತೆಗೆದುಕೊಂಡಿದ್ದು, ದೊಡ್ಮನೆಯಲ್ಲಿ ಚರ್ಚೆಯ ಕೇಂದ್ರ ಬಿಂದು ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ