ರಶ್ಮಿಕಾ ಮಂದಣ್ಣ ಈ ಅವತಾರ ನೀವು ನೋಡಿಯೇ ಇಲ್ಲ; ಎಲ್ಲರಿಗೂ ಅಚ್ಚರಿ

|

Updated on: Dec 01, 2024 | 9:04 PM

‘ಪುಷ್ಪ’ ಸಿನಿಮಾದಲ್ಲಿ ಸಮಂತಾ ರುತ್​ ಪ್ರಭು ಅವರು ಮೈಚಳಿ ಬಿಟ್ಟು ಕುಣಿದಿದ್ದರು. ಈಗ ಅವರನ್ನೂ ಮೀರಿಸುವ ರೀತಿಯಲ್ಲಿ ರಶ್ಮಿಕಾ ಮಂದಣ್ಣ ‘ಪುಷ್ಪ 2’ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ಚಿತ್ರದ ‘ಪೀಲಿಂಗ್ಸ್..’ ಹಾಡು ಬಿಡುಗಡೆ ಆಗಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಡಿಸೆಂಬರ್​ 5ಕ್ಕೆ ‘ಪುಷ್ಪ 2’ ಬಿಡುಗಡೆ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಈ ಅವತಾರ ನೀವು ನೋಡಿಯೇ ಇಲ್ಲ; ಎಲ್ಲರಿಗೂ ಅಚ್ಚರಿ
ಅಲ್ಲು ಅರ್ಜುನ್, ರಶ್ಮಿಕಾ
Follow us on

ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 5ರಂದು ವಿಶ್ವಾದ್ಯಂತ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್​ ಆಗಲಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾದ ಹಾಡುಗಳನ್ನು ನೋಡಿ ಎಂಜಾಯ್ ಮಾಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಅಷ್ಟರಮಟ್ಟಿಗೆ ಹಾಡುಗಳು ಕ್ರೇಜ್​ ಹುಟ್ಟುಹಾಕಿವೆ. ಈಗಾಗಲೇ ಟೈಟಲ್​ ಸಾಂಗ್, ಶ್ರೀಲೀಲಾ ನಟಿಸಿರುವ ಐಟಂ ಸಾಂಗ್ ಸೂಪರ್​ ಹಿಟ್ ಆಗಿವೆ. ಈಗ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅವರು ಜೋಡಿಯಾಗಿ ಹೆಜ್ಜೆ ಹಾಕಿರುವ ‘ಪೀಲಿಂಗ್ಸ್..’ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರು ಬಿಂದಾಸ್ ಆಗಿ ಡ್ಯಾನ್ಸ್​ ಮಾಡಿ ಗಮನ ಸೆಳೆದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಡ್ಯಾನ್ಸ್​ ವಿಚಾರದಲ್ಲಿ ಇಷ್ಟೆಲ್ಲ ಚುರುಕಾಗಿದ್ದಾರೆ ಎಂದು ಅಚ್ಚರಿ ಆಗುವ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಸಖತ್ ಗ್ಲಾಮರಸ್​ ಆಗಿಯೂ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಅವತಾರವನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಚಿತ್ರಮಂದಿರದಲ್ಲಿ ‘ಪೀಲಿಂಗ್ಸ್..’ ಹಾಡು ಬಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಈ ಹಾಡು ಮಾಸ್ ಆಗಿದೆ.

ದೇವಿ ಶ್ರೀ ಪ್ರಸಾದ್ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಸುಕುಮಾರ್​ ಅವರು ಹಾಡುಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ‘ಪೀಲಿಂಗ್ಸ್​..’ ಹಾಡನ್ನು ಬಹಳ ಅದ್ದೂರಿಯಾಗಿ ಚಿತ್ರಿಸಲಾಗಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

‘ಪೀಲಿಂಗ್ಸ್..’ ಹಾಡು:

ನಟಿ ಸಮಂತಾ ರುತ್ ಪ್ರಭು ಅವರು ‘ಪುಷ್ಪ’ ಸಿನಿಮಾದ ‘ಉ ಅಂಟಾವಾ ಮಾವ..’ ಹಾಡಿನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದರು. ಈಗ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಚಿತ್ರದ ‘ಪೀಲಿಂಗ್ಸ್..’ ಹಾಡಿನಲ್ಲಿ ಮಾಸ್​ ಅವತಾರ ತಾಳಿದ್ದಾರೆ. ಯಾವ ಐಟಂ ಡ್ಯಾನ್ಸರ್​ಗೂ ಕಮ್ಮಿ ಇಲ್ಲದಂತೆ ಅವರು ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾದಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ಹೈಪ್ ಸಿಗುವ ನಿರೀಕ್ಷೆ ಇದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ಇದನ್ನೂ ಓದಿ: ‘ನಿಮಗೆ ನಿರಾಸೆ ಮಾಡಲ್ಲ’: ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಭರವಸೆ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಈ ಚಿತ್ರ ತೆರೆ ಕಾಣುತ್ತಿದೆ. ವಿವಿಧ ನಗರಗಳಲ್ಲಿ ಪ್ರಮೋಷನ್ ಮಾಡಲಾಗಿದೆ. ಹೊಸ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಟ್ಯಾಲೆಂಟ್​ ನೋಡಿದ ಅಭಿಮಾನಿಗಳು ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.