‘ಆತ್ಮಹತ್ಯೆ ಒಂದೇ ಉಳಿದಿರುವ ಮಾರ್ಗ’; ಜಡ್ಜ್ ಎದುರು ಕಣ್ಣೀರು ಹಾಕಿ, ಜಾಮೀನಿಗೆ ಅಂಗಲಾಚಿದ ಪೋಸಾನಿ
ಪೋಸಾನಿ ಕೃಷ್ಣ ಮುರಳಿ ಅವರನ್ನು ಅವಾಚ್ಯ ಶಬ್ದ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬಂಧನದ ಹಿಂದೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಜಾಮೀನು ನಿರಾಕರಣೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುರಳಿ ಹೇಳಿದ್ದಾರೆ ಎಂಬ ವರದಿಗಳಿವೆ.

ಅವಾಚ್ಯ ಶಬ್ದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ತೆಲುಗಿನ ಜನಪ್ರಿಯ ನಟ, ರಾಜಕಾರಣಿ ಪೋಸಾನಿ ಕೃಷ್ಣ ಮುರಳಿಯನ್ನು ಆಂಧ್ರ ಪ್ರದೇಶ ಪೊಲೀಸರು ಫೆಬ್ರವರಿ 26ರಂದು ಬಂಧಿಸಿದ್ದರು. ಈ ಬಂಧನದ ಹಿಂದೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಈಗ ಅವರು ಜಾಮೀನಾನಿಗಾಗಿ ಅಂಗಲಾಚುತ್ತಿದ್ದಾರೆ. ಅದು ಸಿಗದೆ ಇದ್ದರೆ ತಮಗೆ ಆತ್ಮಹತ್ಯೆ ಒಂದೇ ಉಳಿದುಕೊಂಡಿರುವ ಮಾರ್ಗ ಎಂದು ಕಣ್ಣೀರು ಇಟ್ಟಿದ್ದಾಗಿ ವರದಿ ಆಗಿದೆ.
ಪೋಸಾನಿ ಕೃಷ್ಣ ಮುರಳಿ ಅವರು ಸಿನಿಮಾ ರಂಗದ ಜೊತೆ ರಾಜಕೀಯದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರು ವೈಸಿಆರ್ ಪಕ್ಷದ ಮುಖಂಡರೂ ಹೌದು. ಪವನ್ ಕಲ್ಯಾಣ್ ಇನ್ನೂ ಅಧಿಕಾರಕ್ಕೆ ಬರದೇ ಇದ್ದಾಗ ಅವರ ಬಗ್ಗೆ ಬೇಕಾಬಿಟ್ಟಿ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದರು. ಇಷ್ಟೇ ಅಲ್ಲ, ಪವನ್ ಕಲ್ಯಾಣ್ ಪತ್ನಿಯನ್ನು ಕೆಟ್ಟ ಶಬ್ದಗಳಿಂದ ಹೀಗಳೆದಿದ್ದರು. ‘ಪವನ್ ಕಲ್ಯಾಣ್ ಪತ್ನಿಗೆ ಕೆಲಸದವರ ಜೊತೆ ಅಕ್ರಮ ಸಂಬಂಧ ಇದೆ. ಆಕೆ ವೇಶ್ಯೆ ಎಂದೆಲ್ಲ’ ಮುರುಳಿ ಹೇಳಿದ್ದರು. ಈಗ ಪವನ್ ಕಲ್ಯಾಣ್ ಸರ್ಕಾರ ಅಧಿಕಾರದಲ್ಲಿ ಇದ್ದು, ಮುರಳಿ ಅವರನ್ನು ಬಂಧಿಸಲಾಗಿದೆ.
ಮುರಳಿ ಅವರ ಜಾಮೀನು ಅರ್ಜಿ ಗುಂಟೂರು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ. ಈ ವೇಳೆ ಅವರು ಜಡ್ಜ್ ಎದುರು ಕಣ್ಣೀರು ಹಾಕಿದ್ದಾರೆ. ‘ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಲಿ. ಆದರೆ ಈ ರೀತಿಯಲ್ಲಿ ಹಿಂಸೆ ಕೊಡಬಾರದು’ ಎಂದು ಮುರಳಿ ಅವರು ಹೇಳಿದ್ದಾರೆ.
‘ನಾನು ಎರಡು ಪ್ರಮುಖ ಸರ್ಜರಿಗೆ ಒಳಗಾಗಿದ್ದೇನೆ. ನನ್ನ ಹೃದಯದಲ್ಲಿ ಸ್ಟಂಟ್ ಇದೆ. ಮುಂದಿನ ಎರಡು ದಿನಗಳಲ್ಲಿ ಜಾಮೀನು ಸಿಗದೆ ಇದ್ದರೆ ಆತ್ಮಹತ್ಯೆ ಒಂದೇ ಉಳಿದುಕೊಂಡಿರುವ ಮಾರ್ಗ’ ಎಂದು ಹೇಳಿದ್ದಾಗಿ ವರದಿ ಆಗಿದೆ. ಸದ್ಯ ಕೋರ್ಟ್ ಈ ಪ್ರಕರಣದಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಆದೇಶವನ್ನು ಸದ್ಯ ಕಾಯ್ದಿರಿಸಿದೆ.
ಇದನ್ನೂ ಓದಿ: ನಟ ಪೋಸಾನಿ ಕೃಷ್ಣ ಮುರಳಿ ಬಂಧನ, ಪವನ್ ಕಲ್ಯಾಣ್ ಕೈವಾಡ?
ಇದು ಕೇವಲ ಸಿಂಪತಿ ಗಿಟ್ಟಿಸುವ ಸ್ಟಂಟ್ ಎಂದು ಅನೇಕರು ಹೇಳಿದ್ದಾರೆ. ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ನಾಯ್ಡು ಕುಟುಂಬದವರಿಗೆ ಪೋಸಾನಿ ಅವಾಚ್ಯ ಶಬ್ದ ಬಳಕೆ ಮಾಡಿದ್ದು, ಅವರಿಗೆ ಇದು ಆಗಬೇಕಾಗಿದ್ದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Thu, 13 March 25