ಬಾಂಗ್ಲಾಗೆ ರಿಮೇಕ್ ಆಗಿತ್ತು ‘ಅಪ್ಪು’; ನಿರ್ಮಾಪಕರಿಗೆ 30 ಪಟ್ಟು ಲಾಭ ನೀಡಿತ್ತು ಈ ಚಿತ್ರ
ಪುನೀತ್ ರಾಜ್ಕುಮಾರ್ ಅವರ ಚೊಚ್ಚಲ ಚಿತ್ರವಾದ "ಅಪ್ಪು" ಮಾರ್ಚ್ 14 ರಂದು ಮರು ಬಿಡುಗಡೆಯಾಗುತ್ತಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡು, ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ಚಿತ್ರದ ಯಶಸ್ಸಿನ ಹಿಂದಿನ ಕಾರಣಗಳು, ಪುನೀತ್ ರಾಜಕುಮಾರ್ ಅವರ ಅಭಿನಯ, ಗುರು ಕಿರಣ್ ಅವರ ಸಂಗೀತ ಮತ್ತು ಚಿತ್ರದ ಕಥಾವಸ್ತು ಎನ್ನಬಹುದು.

ಪುನೀತ್ ರಾಜ್ಕುಮಾರ್ ನಟನೆಯ ‘ಅಪ್ಪು’ (Appu Movie) ಚಿತ್ರವು ಮಾರ್ಚ್ 14ರಂದು ರೀ-ರಿಲೀಸ್ ಆಗುತ್ತಿದೆ. ಈ ಚಿತ್ರ ಆಗಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಪುನೀತ್ ರಾಜ್ಕುಮಾರ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ. ಈ ಕಾರಣದಿಂದಲೂ ಜನರು ಚಿತ್ರವನ್ನು ಮೆಚ್ಚಿಕೊಂಡರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಇದನ್ನು ರಿಮೇಕ್ ಮಾಡಿದವರೂ ಕೂಡ ಲಾಭ ಕಂಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಪುನೀತ್ ರಾಜ್ಕುಮಾರ್ ನಟನೆಯ ‘ಅಪ್ಪು’ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು. ಪುರಿ ಜಗನ್ನಾಥ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದರು. ಪುನೀತ್ ಜೊತೆ ರಕ್ಷಿತಾ, ಅವಿನಾಶ್ ಮೊದಲಾದವರು ನಟಿಸಿದ್ದರು. ಈ ಸಿನಿಮಾನ ಪಾರ್ವತಮ್ಮ ರಾಜ್ಕುಮಾರ್ ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಹಲವು ಭಾಷೆಗೆ ರಿಮೇಕ್ ಆಯಿತು.
‘ಅಪ್ಪು’ ಸಿನಿಮಾ ಮೊದಲು ತೆಲುಗಿಗೆ ರಿಮೇಕ್ ಆಯಿತು. ‘ಈಡಿಯಟ್’ ಹೆಸರಲ್ಲಿ ಚಿತ್ರವನ್ನು ರಿಮೇಕ್ ಮಾಡಲಾಯಿತು. 2003ರಲ್ಲಿ ತಮಿಳಿನಲ್ಲಿ ‘ದಮ್’ ಹೆಸರಲ್ಲಿ ಈ ಚಿತ್ರವನ್ನು ರಿಮೇಕ್ ಮಾಡಲಾಯಿತು. 2006ರಲ್ಲಿ ಬೆಂಗಾಲಿ ಭಾಷೆಗೆ ‘ಹೀರೋ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. 2008ರಲ್ಲಿ ಈ ಚಿತ್ರ ಬಾಂಗ್ಲಾಗೆ ಹೋಯಿತು.
ಹೌದು, ಬಾಂಗ್ಲಾ ಬೆಂಗಾಲಿಯಲ್ಲಿ ಚಿತ್ರವನ್ನು 2008ರಲ್ಲಿ ರಿಮೇಕ್ ಮಾಡಲಾಯಿತು. ಈ ಚಿತ್ರಕ್ಕೆ ‘ಪ್ರಿಯಾ ಅಮರ್ ಪ್ರಿಯಾ’ ಎಂದು ಟೈಟಲ್ ಕೊಡಲಾಯಿತು. ಕೇವಲ 1 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ, ಸುಮಾರು 30 ಕೋಟಿ ರೂಪಾಯಿ ಲಾಭವನ್ನು ಕಂಡಿತ್ತು.
ಇದನ್ನೂ ಓದಿ: ‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ
‘ಅಪ್ಪು’ ಸಿನಿಮಾ ಹಿಟ್ ಆಗಲು ಹಲವು ಕಾರಣಗಳು ಇದ್ದವು. ಈ ಸಿನಿಮಾ ಪುನೀತ್ ರಾಜ್ಕುಮಾರ್ ಮ್ಯಾನರಿಸಂಗೆ ಸರಿಯಾಗಿ ಹೊಂದಾಣಿಕೆ ಆಗುವ ರೀತಿಯಲ್ಲಿ ಇತ್ತು. ಅವರ ಮೊದಲ ಚಿತ್ರ ಇದಾಗಿತ್ತು. ಇನ್ನು ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು ಗುರು ಕಿರಣ್. ಅವರ ಹಾಡುಗಳು ಸೂಪರ್ ಹಿಟ್ ಆದವು. ಈ ಹಾಡಿನ ಮೂಲಕ ಚಿತ್ರವು ಮತ್ತಷ್ಟಯು ಗಮನ ಸೆಳೆಯಿತು ಎಂದೇ ಹೇಳಬಹುದು. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಚಿತ್ರದ 100 ದಿನಗಳ ಸಂಭ್ರಮಾಚರಣೆ ಹೇಗಿತ್ತು ಎಂಬುದರ ವಿಡಿಯೋ ಹಂಚಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.