AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ’ ಎರಡನೇ ಭಾಗ ಬಿಡುಗಡೆ ಯಾವಾಗ? ನಿರ್ಮಾಪಕರು ಕೊಟ್ಟರು ಉತ್ತರ

Kalki 2898 AD: ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಪೌರಾಣಿಕ ಕತೆಗೆ ಆಧುನಿಕ ಕತೆಯನ್ನು ಬೆರೆಸಿದ ಕತೆ ಇದಾಗಿತ್ತು. ಸಿನಿಮಾದ ಮೊದಲ ಭಾಗವಷ್ಟೆ ಆಗ ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ನಿರ್ಮಾಪಕರು, ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಮತ್ತು ಬಿಡುಗಡೆ ಯಾವಾಗ ಎಂದು ಹೇಳಿದ್ದಾರೆ.

‘ಕಲ್ಕಿ’ ಎರಡನೇ ಭಾಗ ಬಿಡುಗಡೆ ಯಾವಾಗ? ನಿರ್ಮಾಪಕರು ಕೊಟ್ಟರು ಉತ್ತರ
Prabhas Movie
Follow us
ಮಂಜುನಾಥ ಸಿ.
|

Updated on:Jan 28, 2025 | 12:07 PM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ 2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಪೌರಾಣಿಕ ಕತೆಯನ್ನು ಭವಿಷ್ಯದ ಕತೆಯೊಂದಿಗೆ ಬೆಸೆದು ಹೆಣೆಯಲಾಗಿದ್ದ ಚಿತ್ರಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾದಲ್ಲಿ ತಾರಾ ಮೇಳವೇ ಇತ್ತು. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಹಲವು ಸ್ಟಾರ್ ನಟ, ನಟಿಯರು ಈ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. 2024ರಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಮೊದಲ ಭಾಗವಷ್ಟೆ ಬಿಡುಗಡೆ ಆಗಿದ್ದು, ಎರಡನೇ ಭಾಗ ಯಾವಾಗ ಎಂಬ ಬಗ್ಗೆ ಖಾತ್ರಿ ಇರಲಿಲ್ಲ. ಇದೀಗ ಸಿನಿಮಾದ ನಿರ್ಮಾಪಕರೇ ಈ ಬಗ್ಗೆ ಮಾತನಾಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಪ್ರಭಾಸ್​, ಕರ್ಣನ ಅವತಾರ ಎಂದು ತೋರಿಸುವ ಮೂಲಕ ಸಿನಿಮಾವನ್ನು ಕೊನೆ ಮಾಡಲಾಗಿತ್ತು. ದೀಪಿಕಾ ಪಡುಕೋಣೆಯನ್ನು ಕರ್ಣ ಕರೆದುಕೊಂಡು ಹೋಗುವ ದೃಶ್ಯಕ್ಕೆ ಸರಿಯಾಗಿ ಸಿನಿಮಾ ನಿಂತಿತ್ತು. ಅದರ ಜೊತೆಗೆ ವಿಲನ್ ಯಾಸ್ಕಿನ್​ ಸಂಜೀವಿನಿ ಅಂಶಗಳುಳ್ಳ ಪೇಯವೊಂದನ್ನು ಕುಡಿದು ಮತ್ತೆ ಯೌವ್ವನ ತರೆಸುಕೊಳ್ಳುತ್ತಾನೆ ಎಂಬುದನ್ನು ತೋರಿಸಲಾಗಿತ್ತು. ಅದರ ಮುಂದಿನ ಕತೆ ಸಿನಿಮಾದ ಎರಡನೇ ಭಾಗದಲ್ಲಿ ತೋರಿಸಬೇಕಿದೆ. ಎರಡನೇ ಭಾಗದಲ್ಲಿ ಯಾಸ್ಕಿನ್ vs ಪ್ರಭಾಸ್​ರ ಭೈರವ ಪಾತ್ರದ ನಡುವೆ ಕಿತ್ತಾಟ ನಡೆಯಲಿದೆ.

ಸಿನಿಮಾದ ನಿರ್ಮಾಪಕರಾದ ಅಶ್ವಿನಿ ದತ್, ಸಂದರ್ಶನವೊಂದರಲ್ಲಿ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದ ಬಗ್ಗೆ ಮಾತನಾಡಿದ್ದು, ‘ಕಲ್ಕಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪ್ರಾರಂಭ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ ಸಿನಿಮಾದ ಚಿತ್ರೀಕರಣವನ್ನು ಇದೇ ವರ್ಷದ ಡಿಸೆಂಬರ್ ವೇಳೆಗೆ ಪೂರ್ತಿಗೊಳಿಸುವುದಾಗಿಯೂ ಅಶ್ವಿನಿ ದತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್​ ಮೇಲೆ ಹೆವಿ ಲವ್ ಅಂತೆ ಈ ಸುಂದರ ನಟಿಗೆ

‘ಮೇ, ಏಪ್ರಿಲ್​ನಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುತ್ತೇವೆ. ಈಗಾಗಲೇ ಎರಡನೇ ಭಾಗಕ್ಕೆ ಬೇಕಾದ 25-30% ದೃಶ್ಯಗಳನ್ನು ಮೊದಲ ಭಾಗದ ಚಿತ್ರೀಕರಣದ ವೇಳೆಯೇ ಚಿತ್ರೀಕರಣ ಮಾಡಿಕೊಂಡು ಇಟ್ಟುಕೊಂಡಿದ್ದೇವೆ. ಹಾಗಾಗಿ ಎರಡನೇ ಭಾಗದ ಚಿತ್ರೀಕರಣವನ್ನು ಬೇಗನೆ ಮುಗಿಸಲಿದ್ದೀವಿ. 2025ರ ಕೊನೆಯ ತಿಂಗಳ 26ನೇ ತಾರೀಖು ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದೀವಿ’ ಎಂದು ಸಿ ಅಶ್ವಿನಿ ದತ್ ಹೇಳಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಸುಮಾರು ಎರಡು ವರ್ಷಕ್ಕೂ ಹೆಚ್ಚು ಸಮಯ ಹಿಡಿದಿತ್ತು. ಆದರೆ ಎರಡನೇ ಭಾಗದ ಚಿತ್ರೀಕರಣ ಬೇಗನೆ ಮುಗಿಯಲಿದೆ. ಪ್ರಭಾಸ್ ಪ್ರಸ್ತುತ ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‘ರಾಜಾ ಸಾಬ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯವನ್ನೂ ಜೊತೆಯಾಗಿ ಮಾಡುತ್ತಿದ್ದಾರೆ. ಅದಾದ ಬಳಿಕ ‘ಸಲಾರ್ 2’ ಹಾಗೂ ‘ಕಲ್ಕಿ 2’ ಸಿನಿಮಾಗಳನ್ನು ಒಟ್ಟಿಗೆ ಪ್ರಾರಂಭ ಮಾಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Tue, 28 January 25