Shruti Haasan: ‘ಸಲಾರ್​​’ನಲ್ಲಿ ಶ್ರುತಿ ಲುಕ್ ಹೇಗಿದೆ? ಪಾತ್ರದ ಹೆಸರೇನು? ಅಭಿಮಾನಿಗಳ ಪ್ರಶ್ನೆಗೆ ಸಿಕ್ತು ಉತ್ತರ!

Happy Birthday Shruti Haasan: ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟನೆಯ ‘ಸಲಾರ್’ ಚಿತ್ರದಲ್ಲಿ ನಾಯಕಿಯ ಪಾತ್ರದ ಹೆಸರು ಹಾಗೂ ಲುಕ್ ರಿವೀಲ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಸೆನ್ಸೇಶನ್ ಸೃಷ್ಟಿಸಿದ್ದಾರೆ.

Shruti Haasan: ‘ಸಲಾರ್​​’ನಲ್ಲಿ ಶ್ರುತಿ ಲುಕ್ ಹೇಗಿದೆ? ಪಾತ್ರದ ಹೆಸರೇನು? ಅಭಿಮಾನಿಗಳ ಪ್ರಶ್ನೆಗೆ ಸಿಕ್ತು ಉತ್ತರ!
ಸಲಾರ್​ನಲ್ಲಿ ಶ್ರುತಿ ಹಾಸನ್ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on: Jan 28, 2022 | 12:11 PM

Salaar | ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ (Salaar) ಈಗಾಗಲೇ ದೇಶಾದ್ಯಂತ ಕುತೂಹಲ ಸೃಷ್ಟಿಸಿದೆ. ಪ್ರಭಾಸ್ (Prabhas) ನಟನೆಯ ಈ ಚಿತ್ರದಲ್ಲಿ ನಾಯಕನ ಪಾತ್ರದ ಲುಕ್​ಅನ್ನು ಚಿತ್ರತಂಡ ಈ ಹಿಂದೆ ರಿವೀಲ್ ಮಾಡಿತ್ತು. ಬಹುಭಾಷಾ ನಟಿ ಶ್ರುತಿ ಹಾಸನ್ ‘ಸಲಾರ್​’ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಪಾತ್ರದ ಕುರಿತು ಚಿತ್ರತಂಡ ಗುಟ್ಟು ಕಾಯ್ದುಕೊಂಡಿತ್ತು. ಅಲ್ಲದೇ ಚಿತ್ರದಲ್ಲಿ ಅವರು ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದರ ಹೆಸರೇನು ಮೊದಲಾದ ಮಾಹಿತಿ ಅಭಿಮಾನಿಗಳಿಗೆ ಲಭ್ಯವಾಗಿರಲಿಲ್ಲ. ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ. ಹೌದು. ಇಂದು ಶ್ರುತಿ ಹಾಸನ್ (Shruti Haasan) 36ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಸಲಾರ್’ ಚಿತ್ರತಂಡ ನಾಯಕಿಯ ಪಾತ್ರದ ಗುಟ್ಟುಬಿಟ್ಟುಕೊಟ್ಟಿದೆ.

ರಿಲೀಸ್ ಮಾಡಲಾದ ಪೋಸ್ಟರ್​​ನಲ್ಲೇನಿದೆ?

ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​ನಲ್ಲಿ ‘ಸಲಾರ್’ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ನಾಯಕಿ ಶ್ರುತಿ ಹಾಸನ್ ಪಾತ್ರದ ಪರಿಚಯವನ್ನು ಚಿತ್ರತಂಡ ಮಾಡಿಕೊಟ್ಟಿದೆ. ‘ಸಲಾರ್’ನಲ್ಲಿ ಆದ್ಯ ಎಂಬ ಪಾತ್ರದಲ್ಲಿ ಶ್ರುತಿ ಹಾಸನ್ ಬಣ್ಣಹಚ್ಚುತ್ತಿದ್ದಾರೆ. ‘ಸೌಂದರ್ಯ ಮತ್ತು ಸೊಬಗನ್ನು ಯಾವಾಗಲೂ ಉನ್ನತಮಟ್ಟದಲ್ಲಿ ತೋರ್ಪಡಿಸುವ ಪ್ರತಿಭಾವಂತ ನಟಿ ಆದ್ಯ’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಲಾಗಿದೆ. ಅಲ್ಲದೇ ಶ್ರುತಿ ಹಾಸನ್ ಅವರು ಸಲಾರ್​ನಲ್ಲಿ ಕಾಣಿಸಿಕೊಂಡಿರುವ ಗೆಟಪ್​ನ ಪೋಸ್ಟರ್​ ಒಂದನ್ನು ಟ್ವೀಟ್ ಮಾಡಲಾಗಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದು, ನಾಯಕಿಗೆ ಶುಭ ಕೋರಿದ್ದಾರೆ. ಅಲ್ಲದೇ ಸೆಟ್​ಗೆ ಮತ್ತಷ್ಟು ರಂಗನ್ನು ತಂದಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ. ಸಿಂಪಲ್ ಕುರ್ತಾ ಧರಿಸಿ ಮಿಂಚಿರುವ ಶ್ರುತಿ ಹಾಸನ್​ ‘ಸಲಾರ್’ ಲುಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸೆನ್ಸೇಶನ್ ಸೃಷ್ಟಿಸಿದೆ. ಜತೆಗೆ ಅಭಿಮಾನಿಗಳು ನಟಿಗೆ ಶುಭಾಶಯ ಹೇಳುತ್ತಿದ್ದಾರೆ.

ಪ್ರಶಾಂತ್ ನೀಲ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

‘ಸಲಾರ್’ ಚಿತ್ರದಲ್ಲಿ ಪ್ರಭಾಸ್​ಗೆ ಎದುರಾಗಿ ಜಗಪತಿ ಬಾಬು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದು, ಭುವನ್​ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಕನ್ನಡ ಹಾಗೂ ತೆಲುಗುನಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ‘ಸಲಾರ್’ ನಂತರ ಹಿಂದಿ, ತಮಿಳು ಹಾಗೂ ಮಲಯಾಳಂಗೆ ಡಬ್ ಆಗಿ ತೆರೆಕಾಣಲಿದೆ.

ಇದನ್ನೂ ಓದಿ:

ಬಹುಬೇಡಿಕೆಯ ನಟಿ ಕೈಯಲ್ಲಿ ಈಗ ಕೆಲಸವೇ ಇಲ್ಲ; ಪೂಜಾ ಹೆಗ್ಡೆ ಈ ಸ್ಥಿತಿಗೆ ಬರಲು ಕಾರಣ ಏನು?

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ