ಜೂ. ಎನ್ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್; ಮೊದಲ ದಿನವೇ 2 ಸಾವಿರ ಜನರು ಭಾಗಿ
ಹೈದರಾಬಾದ್ನಲ್ಲಿ ಬರೋಬ್ಬರಿ 2 ಸಾವಿರ ಜೂನಿಯರ್ ಆರ್ಟಿಸ್ಟ್ಗಳ ಜೊತೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರೀಕರಣ ಶುರು ಮಾಡಿದ್ದಾರೆ. 2ನೇ ಹಂತದ ಶೂಟಿಂಗ್ನಲ್ಲಿ ನಟ ಜೂ. ಎನ್ಟಿಆರ್ ಅವರು ಭಾಗಿಯಾಗಲಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರ ವಿಷನ್ ಬಹಳ ದೊಡ್ಡದು. ‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’, ‘ಸಲಾರ್’ ಸಿನಿಮಾಗಳೇ ಈ ಮಾತಿಗೆ ಸಾಕ್ಷಿ. ಈಗ ಅವರು ಜೂನಿಯರ್ ಎನ್ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ಜೂನಿಯರ್ ಎನ್ಟಿಆರ್ ನಟನೆಯ 31ನೇ ಸಿನಿಮಾ. ಬಹಳ ಹಿಂದೆಯೇ ಅನೌನ್ಸ್ ಆಗಿದ್ದ ಈ ಚಿತ್ರಕ್ಕೆ ಈಗ ಶೂಟಿಂಗ್ ಆರಂಭ ಆಗಿದೆ. ಮೊದಲೇ ಹೇಳಿದಂತೆ ಪ್ರಶಾಂತ್ ನೀಲ್ ಅವರು ತುಂಬ ದೊಡ್ಡದಾಗಿಯೇ ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಮೊದಲ ದಿನವೇ ಈ ಸಿನಿಮಾದ ಚಿತ್ರೀಕರಣದಲ್ಲಿ 2 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ!
ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಸಿನಿಮಾಗೆ ಶೂಟಿಂಗ್ ಶುರುವಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಭಾರಿ ಹುಮ್ಮಸ್ಸಿನೊಂದಿಗೆ ಆ್ಯಕ್ಷನ್-ಕಟ್ ಹೇಳಲು ಆರಂಭಿದ್ದಾರೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಮೊದಲ ದಿನ ಎರಡು ಸಾವಿರ ಜೂನಿಯರ್ ಆರ್ಟಿಸ್ಟ್ಗಳು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
The SOIL finally welcomes its REIGN to leave a MARK in the HISTORY books of Indian Cinema! 🔥🔥#NTRNeel shoot has officially begun.
A whole new wave of ACTION & EUPHORIA is ready to grip the Masses 💥💥
MAN OF MASSES @tarak9999 #PrashanthNeel @MythriOfficial @NTRArtsOfficial… pic.twitter.com/yXZZy2AHrA
— Mythri Movie Makers (@MythriOfficial) February 20, 2025
ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಭಾರಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಛಾಪು ಮೂಡಿಸಲಿದೆ ಎಂದು ನಿರ್ಮಾಣ ಸಂಸ್ಥೆ ಭರವಸೆ ನೀಡಿದೆ. ಇದು ಹೊಸ ಅಲೆಯ ಆ್ಯಕ್ಷನ್ ಸಿನಿಮಾ ಎಂದು ಕೂಡ ಹೇಳಲಾಗಿದೆ. ಆ ಮೂಲಕ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಲಾಗಿದೆ. 2026ರ ಜನವರಿ 9ರಂದು ಈ ಚಿತ್ರ ರಿಲೀಸ್ ಆಗಲಿದೆ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ..
ಈ ಚಿತ್ರದ ಶೂಟಿಂಗ್ ಆರಂಭ ಆಗಿದ್ದರೂ ಕೂಡ ಜೂನಿಯರ್ ಎನ್ಟಿಆರ್ ಅವರು ಭಾಗಿಯಾಗಿಲ್ಲ. ಮೊದಲ ಹಂತದಲ್ಲಿ ಕೇವಲ 10 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಬಳಿಕ 2ನೇ ಹಂತದಲ್ಲಿ ದೀರ್ಘವಾಗಿ ಶೂಟಿಂಗ್ ನಡೆಯಲಿದ್ದು, ಆಗ ಜೂನಿಯರ್ ಎನ್ಟಿಆರ್ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಆದ್ದರಿಂದ ನಿರೀಕ್ಷೆ ಹೆಚ್ಚಾಗಿದೆ. ಪ್ರಶಾಂತ್ ನೀಲ್ ಅವರಿಗೆ ಟಾಲಿವುಡ್ನಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:51 pm, Thu, 20 February 25