‘ಪುಷ್ಪ 2’ ಕಲಾವಿದರ ಸಂಭಾವನೆ ಎಷ್ಟು? ಯಾರಿಗೆ ಎಷ್ಟು ಕೋಟಿ ರೂಪಾಯಿ?

Pushpa 2: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಇಂದು ಬಿಡುಗಡೆ ಆಗಿ, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಇದು ಭಾರಿ ಬಜೆಟ್ ಸಿನಿಮಾ ಆಗಿದ್ದು, ಸಿನಿಮಾದ ನಟ-ನಟಿಯರಿಗೆ ಭರ್ಜರಿ ಸಂಭಾವನೆ ನೀಡಲಾಗಿದೆ. ಇಲ್ಲಿದೆ ಪಟ್ಟಿ.

‘ಪುಷ್ಪ 2’ ಕಲಾವಿದರ ಸಂಭಾವನೆ ಎಷ್ಟು? ಯಾರಿಗೆ ಎಷ್ಟು ಕೋಟಿ ರೂಪಾಯಿ?
ಅಲ್ಲು ಅರ್ಜುನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 05, 2024 | 4:38 PM

ಸದ್ಯ ಎಲ್ಲ ಕಡೆಗಳಲ್ಲಿ ‘ಪುಷ್ಪ 2’ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚಿತ್ರವು ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂಬಿತ್ಯಾದಿ ವಿಚಾರಗಳು ಚರ್ಚೆಯಲ್ಲಿ ಇವೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೊದಲ 250 ಕೋಟಿ ರೂಪಾಯಿ ಗಳಿಸಬಹುದು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಕಲಾವಿದರ ಸಂಭಾವನೆ ವಿಚಾರದ ಬಗ್ಗೆ ನಾವು ಹೇಳುತ್ತಿದ್ದೇವೆ.

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಮುಖ್ಯ ಪಿಲ್ಲರ್. ಅವರು ಈ ಚಿತ್ರಕ್ಕಾಗಿ 300 ಕೋಟಿ ರೂಪಾಯಿ ಪಡೆದಿದ್ದಾರೆ. ಪುಷ್ಪರಾಜ್ ಆಗಿ ಅವರು ಗಮನ ಸೆಳೆಯುತ್ತಾರೆ. ಅವರ ಸಂಭಾವನೆ ವಿಚಾರದ ಬಗ್ಗೆ ಇತ್ತೀಚೆಗೆ ಫೋರ್ಬ್ಸ್ ಕೂಡ ವರದಿ ಬಿಡುಗಡೆ ಮಾಡಿತ್ತು. ಈ ಮೂಲಕ ಅವರು ರಜನಿಕಾಂತ್, ದಳಪತಿ ವಿಜಯ್ ಮೊದಲಾದವರನ್ನು ಹಿಂದಿಕ್ಕಿದ್ದಾರೆ.

ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಗೆಟಪ್ನಲ್ಲಿ ಅವರು ಗಮನ ಸೆಳೆಯುತ್ತಾರೆ. ಈ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರ ನೀಡಲಾಗಿದೆ ಎನ್ನಲಾಗಿದೆ. ಈ ಚಿತ್ರಕ್ಕಾಗಿ ಅವರು 10 ಕೋಟಿ ರೂಪಾಯಿ ಪಡೆದಿದ್ದಾರೆ. ಅಲ್ಲು ಅರ್ಜುನ್ ಜೊತೆಗಿನ ಕೆಮಿಸ್ಟ್ರಿ ಹೈಲೈಟ್ ಆಗಿದೆ.

ಇದನ್ನೂ ಓದಿ:ವಿಡಿಯೋ: ‘ಪುಷ್ಪ 2’ ನೋಡಿ ತಗ್ಗೋದೆ ಇಲ್ಲ ಎಂದ ಅಭಿಮಾನಿಗಳು

ಫಹಾದ್ ಫಾಸಿಲ್ ಅವರು ಈ ಚಿತ್ರದಲ್ಲಿ ಬನ್ವರ್ ಸಿಂಗ್ ಶೇಖಾವತ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು 8 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಶ್ರೀಲೀಲಾ ಅವರು ‘ಪುಷ್ಪ 2’ ಚಿತ್ರದಲ್ಲಿ ‘ಕಿಸಕ್’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಿನಿಮಾ ಉದ್ದಕ್ಕೂ ಇದೊಂದೇ ಹಾಡಿನಲ್ಲಿ ಕಾಣಿಸಿಕೊಳ್ಳೋದು. ಈ ಹಾಡಿಗಾಗಿ ಅವರು 2 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಈ ಹಾಡಿನ ಬೆನ್ನಲ್ಲೇ ಅವರು ಹೊಸ ಕಾರು ಖರೀದಿ ಮಾಡಿದರು.

ಸಮಂತಾ ಅವರು ಈ ಮೊದಲು ‘ಊ ಅಂಟಾವ’ ಹಾಡಿನಲ್ಲಿ ನಟಿಸಿದ್ದರು. ಈ ಹಾಡಿಗಾಗಿ ಅವರು 5 ಕೋಟಿ ರೂಪಾಯಿ ಪಡೆದಿದ್ದರು. ಆದರೆ, ಶ್ರೀಲೀಲಾ ಅಷ್ಟು ದೊಡ್ಡ ಮೊತ್ತದಲ್ಲಿ ಚಾರ್ಜ್ ಮಾಡಿಲ್ಲ. ಉಳಿದ ಪಾತ್ರಧಾರಿಗಳು ಸಾಕಷ್ಟು ಹಣ ಪಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ