ಬೆಂಗಳೂರಲ್ಲಿ ಕಂಡಕ್ಟರ್ ಆಗಿದ್ದಾಗ ರಜನಿಕಾಂತ್ಗೆ ಹುಡುಗಿ ಮೇಲೆ ಮೂಡಿತ್ತು ಪ್ರೀತಿ; ಆಮೇಲೆ ಏನಾಯ್ತು?
ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ 10ಜೆ ಬಸ್ ನಂಬರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗುದೆ. ಅವರು ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಹ ಹುಡಗಿ ಒಬ್ಬಳನ್ನು ನೋಡಿದ್ದರು. ಅವರ ಬಳಿ ಹೋಗಿ ರಜನಿಕಾಂತ್ ಅವರು ಮದುವೆ ಪ್ರಪೋಸ್ ಮಾಡಿದ್ದರು. ಮುಂದೇನಾಯ್ತು? ಈ ಸ್ಟೋರಿಯಲ್ಲಿದೆ ಉತ್ತರ.
ರಜನಿಕಾಂತ್ ಅವರು ಕರ್ನಾಟಕದವರು. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಚೆನ್ನೈ ತೆರಳಿದರು. ಈಗ ಅವರು ಕಾಲಿವುಡ್ನ ಬಹುಬೇಡಿಕೆಯ ಹೀರೋ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅವರು ಫ್ಯಾಮಿಲಿ ಮ್ಯಾನ್ ಕೂಡ ಹೌದು. ಲತಾ ರಂಗಾಚಾರಿ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಅವರಿಗೆ ಜೀವನದಲ್ಲಿ ಈ ಮೊದಲು ಲವ್ ಫೇಲ್ಯೂವರ್ ಆಗಿತ್ತು. ಅವರು ತಮ್ಮ ಬಯೋಗ್ರಾಫಿಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.
ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ 10ಜೆ ಬಸ್ ನಂಬರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗುದೆ. ಅವರು ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಹ ಹುಡಗಿ ಒಬ್ಬಳನ್ನು ನೋಡಿದ್ದರು. ಅವರ ಬಳಿ ಹೋಗಿ ರಜನಿಕಾಂತ್ ಅವರು ಮದುವೆ ಪ್ರಪೋಸ್ ಮಾಡಿದ್ದರು. ಆದರೆ, ಆ ಹುಡುಗಿ ಇದನ್ನು ರಿಜೆಕ್ಟ್ ಮಾಡಿದ್ದಳು.
ಇದನ್ನೂ ಓದಿ: ಈ ವಿಶೇಷ ದಿನಕ್ಕೆ ರಿಲೀಸ್ ಆಗಲಿದೆ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ
‘ನೀವು ನೋಡೋಕೆ ಕಪ್ಪಿದ್ದೀರಾ, ಕಳ್ಳನ ರೀತಿ ಕಾಣುತ್ತೀರಾ’ ಎಂದು ರಜನಿಕಾಂತ್ ಅವರಿಗೆ ಆ ಹುಡುಗಿ ಹೇಳಿದ್ದಳು. ಈ ಮೂಲಕ ಅವರ ಪ್ರೀತಿ ರಿಜೆಕ್ಟ್ ಆಯಿತು. ಇದು ರಜನಿಕಾಂತ್ ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈ ಕಾರಣದಿಂದಲೇ ರಜನಿಕಾಂತ್ ಅವರಿಗೆ ಸುಂದರ ಹುಡುಗಿಯನ್ನು ಮದುವೆ ಆಗಬೇಕು ಎನ್ನುವ ಆಸೆ ಇತ್ತು. ಕೊನೆಗೂ ಅದು ಈಡೇರಿದೆ. ರಜನಿಕಾಂತ್ ಅವರು ಲತಾ ಅವರನ್ನು ಮದುವೆ ಆದರು. ಅವರು ಬೆಳ್ಳಗೆ ಇದ್ದಾರೆ.
1980ರಲ್ಲಿ ಲತಾ ಅವರ ಭೇಟಿ ರಜನಿಕಾಂತ್ಗೆ ಆಯಿತು. ಕಾಲೇಜ್ ಒಂದರ ಮ್ಯಾಗಜಿನ್ಗೆ ಸಂದರ್ಶನ ಮಾಡಲು ಲತಾ ಆಗಮಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಸಂದರ್ಶನದ ಕೊನೆ ಆಗುವುದರೊಳಗೆ ರಜನಿಕಾಂತ್ ಲತಾಗೆ ಪ್ರಪೋಸ್ ಮಾಡಿದ್ದರು. ವಿಶೇಷ ಎಂದರೆ ಮುಂದಿನ ವರ್ಷ ಅಂದರೆ 1981ರಲ್ಲಿ ಇಬ್ಬರೂ ವಿವಾಹ ಆದರು. ಈ ದಂಪತಿಗೆ ಐಶ್ವರ್ಯಾ ಹಾಗೂ ಸೌಂದರ್ಯಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ರಜನಿ ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.