ಆ ನಟನಿಗಿಂತ ನಾನು ದೊಡ್ಡ ಸ್ಟಾರ್: ರಜನೀಕಾಂತ್ ಹೇಳಿದ್ದು ಯಾರ ಬಗ್ಗೆ?
Rajinikanth and Mohan Babu: ಎಷ್ಟೇ ದೊಡ್ಡ ಸ್ಟಾರ್ ನಟ ಆಗಿದ್ದರೂ ಸಹ ಬಹಳ ವಿನಯಂತ, ಸಜ್ಜನ ರಜನೀಕಾಂತ್. ಅಧ್ಯಾತ್ಮದಲ್ಲಿ ಆಸಕ್ತಿ ಉಳ್ಳ ರಜನೀಕಾಂತ್ ತಮ್ಮನ್ನು ತಾವು ಹೊಗಳಿಕೊಂಡಿದ್ದು, ಅಹಂ ಭಾವ ಪ್ರದರ್ಶಿಸಿದ್ದೆಲ್ಲ ಇಲ್ಲ. ಆದರೆ ಇತ್ತೀಚೆಗಿನ ಕಾರ್ಯಕ್ರಮ ಒಂದರಲ್ಲಿ ಮತ್ತೊಬ್ಬ ಸ್ಟಾರ್ ನಟನ ಹೆಸರು ಹೇಳಿ, ಅವನಿಗಿಂತಲೂ ನಾನು ದೊಡ್ಡ ಸ್ಟಾರ್ ಎಂದಿದ್ದಾರೆ ರಜನೀಕಾಂತ್. ಅದೇಕೆ? ವಿವರ ಇಲ್ಲಿದೆ.

ರಜನೀಕಾಂತ್ (Rajinikanth) ಭಾರತದ ನಂಬರ್ 1 ಸ್ಟಾರ್. ಅವರಿಗೆ ಇರುವಷ್ಟು ಅಭಿಮಾನಿಗಳು ಬಹುಷಃ ಇನ್ಯಾವ ನಟರಿಗೂ ಇದ್ದಂತಿಲ್ಲ. ಭಾರತ ಮಾತ್ರವಲ್ಲ, ಅಮೆರಿಕ, ಸಿಂಗಪುರ, ಮಲೇಷ್ಯಾ, ಜಪಾನ್ ಇನ್ನೂ ಹಲವು ದೇಶಗಳಲ್ಲಿ ಈಗಲ್ಲ, ದಶಕಗಳ ಹಿಂದೆಯೇ ಸ್ಟಾರ್ ನಟ ಅವರು. ಎಷ್ಟೇ ದೊಡ್ಡ ಸ್ಟಾರ್ ನಟ ಆಗಿದ್ದರೂ ಸಹ ಬಹಳ ವಿನಯಂತ, ಸಜ್ಜನ ರಜನೀಕಾಂತ್. ಅಧ್ಯಾತ್ಮದಲ್ಲಿ ಆಸಕ್ತಿ ಉಳ್ಳ ರಜನೀಕಾಂತ್ ತಮ್ಮನ್ನು ತಾವು ಹೊಗಳಿಕೊಂಡಿದ್ದು, ಅಹಂ ಭಾವ ಪ್ರದರ್ಶಿಸಿದ್ದೆಲ್ಲ ಇಲ್ಲ. ಆದರೆ ಇತ್ತೀಚೆಗಿನ ಕಾರ್ಯಕ್ರಮ ಒಂದರಲ್ಲಿ ಮತ್ತೊಬ್ಬ ಸ್ಟಾರ್ ನಟನ ಹೆಸರು ಹೇಳಿ, ಅವನಿಗಿಂತಲೂ ನಾನು ದೊಡ್ಡ ಸ್ಟಾರ್ ಎಂದಿದ್ದಾರೆ ರಜನೀಕಾಂತ್. ಅದೇಕೆ? ವಿವರ ಇಲ್ಲಿದೆ.
ರಜನೀಕಾಂತ್ ಸ್ಟಾರ್ ನಟ ಆಗಿರುವ ಜೊತೆಗೆ ಅದ್ಭುತ ವ್ಯಕ್ತಿ. ಅದರಲ್ಲೂ ಗೆಳೆತನಕ್ಕೆ ಅವರು ವಿಶೇಷ ಮನ್ನಣೆ ನೀಡುತ್ತಾರೆ. ಇದಕ್ಕೆ ಉದಾಹರಣೆ ಬೆಂಗಳೂರಿನ ಅವರ ಡ್ರೈವರ್ ಫ್ರೆಂಡ್ ರಾಜ್ ಬಹದ್ಧೂರ್. ತಮ್ಮ ಹಳೆಯ ಗೆಳೆಯರೊಟ್ಟಿಗೆ ಈಗಲೂ ಬಾಂಧವ್ಯ ಇರಿಸಿಕೊಂಡಿರುವ ಜೊತೆಗೆ ಅವರೊಟ್ಟಿಗೆ ಅದೇ ತುಂಟತನ, ಸಲುಗೆಯನ್ನು ಇರಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರರಂಗದಲ್ಲಿಯೂ ರಜನೀಕಾಂತ್ ಅವರಿಗೆ ಹಲವು ಸಲುಗೆಯ ಗೆಳೆಯರಿದ್ದಾರೆ ಅವರಲ್ಲಿ ತೆಲುಗಿನ ಹಿರಿಯ ನಟ ಮೋಹನ್ಬಾಬು ಸಹ ಒಬ್ಬರು.
ಇದನ್ನೂ ಓದಿ:ಪೆನ್ನು ಹಿಡಿದ ಸ್ಟೈಲ್ ಕಿಂಗ್ ರಜನೀಕಾಂತ್: ಬರೆಯುತ್ತಿರುವುದು ಯಾವ ಪುಸ್ತಕ?
ಮೋಹನ್ ಬಾಬು ಅವರು ಚಿತ್ರರಂಗಕ್ಕೆ ಕಾಲಿರಿಸಿ 50 ವರ್ಷಗಳಾದ ಸಂಭ್ರಮಾಚರಣೆ ಇತ್ತೀಚೆಗಷ್ಟೆ ನಡೆದಿತ್ತು. ಕಾರ್ಯಕ್ರಮದಲ್ಲಿ ರಜನೀಕಾಂತ್ ಅತಿಥಿಯಾಗಿ ಭಾಗವಹಿಸಿದ್ದರು. ಮೋಹನ್ ಬಾಬು ಅವರು ಸ್ವಭಾವತಃ ತುಸು ಭಿನ್ನ ವ್ಯಕ್ತಿ. ತಮ್ಮ ಹಿರಿಮೆ-ಗರಿಮೆಯನ್ನು ಹೇಳಿ-ಹೇಳಿ ಪ್ರಚಾರ ಪಡೆಯುವ ವ್ಯಕ್ತಿ. ಆದರೆ ಅದೇ ಸಭೆಯಲ್ಲಿ ಮಾತನಾಡಿದ ರಜನೀಕಾಂತ್, ಮೋಹನ್ ಬಾಬು ಅವರಿಗೆ ತಮಾಷೆಯಾಗಿ ಕಾಲೆಳೆಯುತ್ತಾ, ಅವರಿಗೆ ಉರಿಸಲೆಂದೇ ತಮ್ಮ ಅಭಿಮಾನಿಗಳ ಬಗ್ಗೆ, ಸ್ಟಾರ್ ಗಿರಿಯ ಬಗ್ಗೆ ಮಾತನಾಡಿದ್ದಾರೆ.
ರಜನೀಕಾಂತ್ ಅವರ ಭಾಷಣದ ತುಣುಕು ಇದೀಗ ವೈರಲ್ ಆಗಿದ್ದು, ‘ನಾನು ಮೋಹನ್ಬಾಬು ಒಟ್ಟಿಗೆ ಚಿತ್ರರಂಗಕ್ಕೆ ಬಂದವರು. ಖಂಡಿತವಾಗಿ ನಾನು, ಅವರಿಗಿಂತ (ಮೋಹನ್ ಬಾಬು) ದೊಡ್ಡ ಕಲಾವಿದ. ಅವರಿಗಿಂತಲೂ ದೊಡ್ಡ ಸ್ಟಾರ್. ಅವರಿಗೆ ಕೇವಲ ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ನನಗೆ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಅಮೆರಿಕ, ಜಪಾನ್ ಇನ್ನೂ ಎಲ್ಲೆಲ್ಲೋ ಇದ್ದಾರೆ’ ಎಂದಿದ್ದಾರೆ ರಜನೀಕಾಂತ್.
‘ಆದರೆ ಇವರಂಥ (ಮೋಹನ್ಬಾಬು) ಗೆಳೆಯ ಇಲ್ಲ. ಈಗ ಮೋಹನ್ಬಾಬುಗೆ ಎಲ್ಲವೂ ಸಿಕ್ಕಿದೆ. ಇನ್ನು ಸಿಕ್ಕಬೇಕಿರುವುದು ನೆಮ್ಮದಿ ಮತ್ತು ಆರೋಗ್ಯ. ಮೋಹನ್ಬಾಬು ಅವರಿಗೆ ಒಳ್ಳೆಯ ಆರೋಗ್ಯ ಸಿಗಲಿ, ಮುಂದಿನ ಜೀವನವನ್ನು ಅವರು ನೆಮ್ಮದಿಯಿಂದ ಕಳೆಯಲಿ’ ಎಂದು ರಜನೀಕಾಂತ್ ಹಾರೈಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sun, 1 February 26




