ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಹೇಗಿದೆ? ವಿಮರ್ಶೆ ತಿಳಿಸಿದ ಫ್ಯಾನ್ಸ್
Coolie Movie Twitter Review: ರಜನಿಕಾಂತ್ ಅವರ 'ಕೂಲಿ' ಸಿನಿಮಾ ಇಂದು ಬಿಡುಗಡೆಯಾಗಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಬ್ಲಾಕ್ಬಸ್ಟರ್ ಎಂದು ಹೊಗಳುತ್ತಿದ್ದರೆ, ಇನ್ನು ಕೆಲವರಿಗೆ ಸಾಧಾರಣವೆನಿಸಿದೆ. ಆಮಿರ್ ಖಾನ್, ಉಪೇಂದ್ರ, ನಾಗಾರ್ಜುನ ಕೂಡ ನಟಿಸಿದ್ದಾರೆ.

ರಜನಿಕಾಂತ್ ಅವರ ನಟನೆಯ ‘ಕೂಲಿ’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಕಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರ ನಿರ್ದೇಶನ ಇದೆ. ಈ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಸಿನಿಮಾ ಅದ್ಭುತವಾಗಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರಿಗೆ ಸಿನಿಮಾ ಸಾಧಾರಣ ಎನಿಸಿದೆ.
ರಜನಿಕಾಂತ್ ಸಿನಿಮಾ ಎಂಬ ಕಾರಣಕ್ಕೆ ‘ಕೂಲಿ’ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಇನ್ನು ಚಿತ್ರದಲ್ಲಿ ಆಮಿರ್ ಖಾನ್, ಉಪೇಂದ್ರ, ನಾಗಾರ್ಜುನ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ನೋಡಲು ಸಾಕಷ್ಟು ಕಾರಣಗಳು ಅಭಿಮಾನಿಗಳಿಗೆ ಸಿಕ್ಕಿವೆ. ಸಿನಿಮಾ ನೋಡಿದ ಅನೇಕರು ಬ್ಲಾಕ್ಬಸ್ಟರ್ ಎಂದು ಹೊಗಳುತ್ತಿದ್ದಾರೆ.
ಕೂಲಿ ವಿಮರ್ಶೆ
#Coolie ivanga kadikkura alavukku mokka illa. Yes, konjam moments and Loki touch missing, but far far better than some kuppai trashes that came this year. 3.5/5 #CoolieFDFS #CoolieReview pic.twitter.com/WkWmkPQZd0
— edwin_91003 (@Edwin_91003) August 14, 2025
#coolieReview One word Blockbuster loading Super performance #Rajnikanth
And super direction #LokeshKanagaraj Best of luck coolie team#CoolieReview #CoolieThePowerHouse pic.twitter.com/2U92oIIAZn
— taran adarsh (@Yashasvi_Jai) August 14, 2025
Ignore the hate Coolie is pure fire! Not a typical Lokesh Kanagaraj vibe, but 100% worth your ticket. Nag’s swag steals the show 💥 And the climax is pure madness🔥#coolie #CoolieFDFS #CoolieThePowerHouse #CoolieFromToday #cooliereview pic.twitter.com/vt5tNGMLC5
— Ravi Reddy (@RaviRed80967157) August 14, 2025
#cooliereview : DISAPPOINTED 👎🏻
2/5 ⭐⭐
First Half – Slow pacing, weak comedy, and predictable scenes fail to grab attention.
Second Half – Turns even messier with forced drama, over-the-top action, and a dragged climax that tests patience.#Rajinikanth #Coolie pic.twitter.com/NUBtFeGrVO
— ج (@Cinepollss) August 13, 2025
‘ಜೈಲರ್’ ಸಿನಿಮಾ ರಜನಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದಾದ ಬಳಿಕ ರಜನಿ ಮತ್ತೊಂದು ಹಿಟ್ ಕೊಟ್ಟಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ‘ಒಂದು ಬಾರಿ ಸುಲಭದಲ್ಲಿ ನೋಡಬಹುದು. ಕೊಟ್ಟ ಕಾಸಿಗೆ ಮೋಸ ಇಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ.
ರಜನಿ ವಿರೋಧಿಗಳು ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಿನಿಮಾ ನೋಡದೆಯೇ ಕೆಲವರು ನೆಗೆಟಿವ್ ವಿಮರ್ಶೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದನ್ನು ನಂಬಂದಂತೆ ಅನೇಕರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








