AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಯಾಬ್​ಗೆ ಕೊಡಲು ರಜನಿ ಬಳಿ ಹಣ ಇರಲಿಲ್ಲ’; ಹಳೆಯ ಘಟನೆ ನೆನೆದ ನಿರ್ದೇಶಕ

ನಿರ್ದೇಶಕ ಕೆ.ಸಿ. ಬೊಕಾಡಿಯಾ ರಜನಿಕಾಂತ್ ಅವರ ಅಪಾರ ಸರಳತೆ ಮತ್ತು ನಮ್ರತೆಯನ್ನು ಶ್ಲಾಘಿಸಿದ್ದಾರೆ. ಸೆಟ್‌ಗೆ ಯಾರೂ ಕರೆತರಲು ಬರದಿದ್ದಾಗ, ರಜನಿಕಾಂತ್ ಸ್ವತಃ ಟ್ಯಾಕ್ಸಿಯಲ್ಲಿ ಬಂದು ಬಾಡಿಗೆ ನೀಡಲು ಕೇಳಿದ ಪ್ರಸಂಗವನ್ನು ಬೊಕಾಡಿಯಾ ಹಂಚಿಕೊಂಡಿದ್ದಾರೆ. ಇಷ್ಟು ದೊಡ್ಡ ಸೂಪರ್‌ಸ್ಟಾರ್‌ಗೂ ಅಹಂ ಇಲ್ಲದಿರುವುದು ಅವರನ್ನು ಎತ್ತರಕ್ಕೆ ಬೆಳೆಸಿದೆ. ಈ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಕ್ಯಾಬ್​ಗೆ ಕೊಡಲು ರಜನಿ ಬಳಿ ಹಣ ಇರಲಿಲ್ಲ’; ಹಳೆಯ ಘಟನೆ ನೆನೆದ ನಿರ್ದೇಶಕ
ರಜಿನಿಕಾಂತ್
ರಾಜೇಶ್ ದುಗ್ಗುಮನೆ
|

Updated on:Jun 24, 2026 | 9:33 AM

Share

ಖ್ಯಾತ ಹಿರಿಯ ಚಲನಚಿತ್ರ ನಿರ್ದೇಶಕ ಕೆ.ಸಿ. ಬೊಕಾಡಿಯಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಪಾರ ಸರಳತೆಯ ಕುರಿತು ನೆನಪಿನ ಬುತ್ತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ‘ಹಿಂದಿ ರಶ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಜನಿಕಾಂತ್ ಅವರ (Rajinikanth) ನಮ್ರತೆ ಮತ್ತು ಅಹಂಕಾರವಿಲ್ಲದ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗಮನ ಸೆಳೆದಿವೆ.

  • ರಜನಿಕಾಂತ್ ಸರಳತೆ ಬಿಚ್ಚಿಟ್ಟ ನಿರ್ದೇಶಕ ಕೆ.ಸಿ. ಬೊಕಾಡಿಯಾ
  • ವಾಹನ ಸಿಗದಿದ್ದರೂ ಶೂಟಿಂಗ್ ಸೆಟ್‌ಗೆ ಟ್ಯಾಕ್ಸಿಯಲ್ಲಿ ಬಂದ ರಜನಿ
  • ಕೋಪ ಮಾಡಿಕೊಳ್ಳದೆ ಟ್ಯಾಕ್ಸಿ ಬಾಡಿಗೆ ಕೇಳಿದ ಸೂಪರ್‌ಸ್ಟಾರ್

ಸಿನಿಮಾ ಶೂಟಿಂಗ್‌ ಸೆಟ್‌ನ ಘಟನೆಯೊಂದನ್ನು ನೆನಪಿಸಿಕೊಂಡ ಬೊಕಾಡಿಯಾ, ‘ಒಮ್ಮೆ ರಜನಿಕಾಂತ್ ಅವರನ್ನು ಕರೆತರಲು ಸೆಟ್‌ನಿಂದ ಯಾರೂ ಹೋಗಿರಲಿಲ್ಲ. ಆದರೆ, ಇದಕ್ಕಾಗಿ ಅವರು ಯಾವುದೇ ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ ತಾವೇ ಸ್ವತಃ ಒಂದು ಸಾಮಾನ್ಯ ಟ್ಯಾಕ್ಸಿ ಮಾಡಿಕೊಂಡು ಶೂಟಿಂಗ್ ಸೆಟ್‌ಗೆ ಬಂದು ತಲುಪಿದರು’ ಎಂದಿದ್ದಾರೆ.

ಅಷ್ಟಕ್ಕೇ ನಿಲ್ಲದ ರಜನಿಕಾಂತ್, ಸೆಟ್‌ಗೆ ಬಂದ ತಕ್ಷಣ ಅತ್ಯಂತ ವಿನಮ್ರವಾಗಿ ನಿರ್ದೇಶಕರ ಬಳಿ ಬಂದು, ‘ನನ್ನನ್ನು ಕರೆತರಲು ಯಾರೂ ಬರಲಿಲ್ಲ, ಹಾಗಾಗಿ ನಾನು ಟ್ಯಾಕ್ಸಿಯಲ್ಲಿ ಬಂದಿದ್ದೇನೆ. ದಯವಿಟ್ಟು ಆ ಟ್ಯಾಕ್ಸಿ ಚಾಲಕನಿಗೆ ಬಾಡಿಗೆ ಹಣ ಪಾವತಿಸಲು ಸ್ವಲ್ಪ ಹಣ ನೀಡುತ್ತೀರಾ?’ ಎಂದು ಅತ್ಯಂತ ಮರ್ಯಾದೆಯಿಂದ ಕೇಳಿದ್ದರು ಎಂದು ಬೊಕಾಡಿಯಾ ನೆನೆದಿದ್ದಾರೆ. ಕ್ಯಾಬ್​​ಗೆ ಹಣ ಕೊಡಲು ರಜನಿ ಬಳಿ ಹಣ ಇರಲಿಲ್ಲ.

ಇಷ್ಟು ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ರಜನಿಕಾಂತ್ ಅವರಿಗೆ ಯಾವುದೇ ರೀತಿಯ ಅಹಂ ಇರಲಿಲ್ಲ. ಅವರ ಈ ಅದ್ಭುತ ನಮ್ರತೆ ಮತ್ತು ಸರಳ ಗುಣವೇ ಅವರನ್ನು ಇಂದು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಕೆ.ಸಿ. ಬೊಕಾಡಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಅವರ ಈ ಹಳೆಯ ಅಪರೂಪದ ಕಥೆ ಈಗ ಸಿನಿ ಪ್ರೇಮಿಗಳ ಮನ ಗೆಲ್ಲುತ್ತಿದೆ.

ಇದನ್ನೂ ಓದಿ: ರಜನಿಕಾಂತ್‌ ಅವರ ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ

ಟ್ಯಾಕ್ಸಿ ಕಳಿಸಿಲ್ಲ ಎಂದು ರಜನಿಕಾಂತ್ ಅವರು ಬಂದು ತಮ್ಮ ಕೋಪ ಹೊರಹಾಕಬಹಹುದಿತ್ತು. ಆದರೆ, ಅವರು ಆರೀತಿ ಮಾಡಿಲ್ಲ. ಇದು ರಜನಿಕಾಂತ್ ಅವರ ಹೆಚ್ಚುಗಾರಿಕೆ. ಇದು ಅನೇಕರಿಗೆ ಮಾದರಿ ಆಗುವಂಥದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:07 am, Wed, 24 June 26

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ