AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ’ ನಿರ್ದೇಶಕನ ಮುಂದಿನ ಸಿನಿಮಾಕ್ಕೆ ರಾಮ್ ಚರಣ್ ನಾಯಕ, ನಾಯಕಿ?

Ram Charan: ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಅದಾಗಲೇ ಅವರ ಮುಂದಿನ ಸಿನಿಮಾಕ್ಕೆ ನಾಯಕ-ನಾಯಕಿ ಯಾರೆಂದು ನಿಗದಿ ಆಗಿದೆ.

‘ಪುಷ್ಪ’ ನಿರ್ದೇಶಕನ ಮುಂದಿನ ಸಿನಿಮಾಕ್ಕೆ ರಾಮ್ ಚರಣ್ ನಾಯಕ, ನಾಯಕಿ?
Follow us
ಮಂಜುನಾಥ ಸಿ.
|

Updated on: Nov 24, 2024 | 10:20 AM

‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಭಾರಿ ಜೋರಿನಿಂದ ಚಾಲ್ತಿಯಲ್ಲಿದೆ. ಸಿನಿಮಾ ನಿರ್ದೇಶನ ಮಾಡಿರುವ ಸುಕುಮಾರ್, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದ ನಿರ್ದೇಶನದ ನಡುವೆ ತಮ್ಮ ಮುಂದಿನ ಸಿನಿಮಾದ ಚಿತ್ರಕತೆಯನ್ನೂ ಸಹ ಸುಕುಮಾರ್ ರೆಡಿ ಮಾಡಿಕೊಂಡಿದ್ದು, ಈ ಹಿಂದೆ ತಮ್ಮೊಂದಿಗೆ ನಟಿಸಿದ ನಟರನ್ನೇ ತಮ್ಮ ಮುಂದಿನ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಮೆಚ್ಚಿನ ನಟಿಯನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ರಾಮ್ ಚರಣ್, ವೃತ್ತಿ ಬದುಕಿನ ದೊಡ್ಡ ಯಶಸ್ವಿ ಚಿತ್ರವೆಂದರೆ ಅದು ‘ರಂಗಸ್ಥಳಂ’ ರಾಜಮೌಳಿ ನಿರ್ದೇಶನದ ‘ಮಗಧೀರ’ ಹಿಟ್ ಆಗಿತ್ತಾದರೂ ಆ ಸಿನಿಮಾದ ಯಶಸ್ಸಿನ ಶ್ರೇಯ ರಾಜಮೌಳಿಗೆ ಮಾತ್ರವೇ ಸಂದಿತ್ತು. ಆದರೆ ‘ರಂಗಸ್ಥಳಂ’ ಸಿನಿಮಾ ಹಿಟ್ ಆದಾಗ ರಾಮ್ ಚರಣ್​ಗೆ ಬಹಳ ಒಳ್ಳೆಯ ಹೆಸರು ಬಂತು. ‘ರಂಗಸ್ಥಳಂ’ ಸಿನಿಮಾನಲ್ಲಿನ ರಾಮ್ ಚರಣ್ ನಟನೆಯನ್ನು ಜನ ಕೊಂಡಾಡಿದರು. ‘ರಂಗಸ್ಥಳಂ’ ದಿಂದಲೇ ರಾಮ್ ಚರಣ್​ಗೆ ‘ಆರ್​ಆರ್​ಆರ್’ ಸಿನಿಮಾದ ಅವಕಾಶ ಸಿಕ್ಕಿತು. ಅಂದಹಾಗೆ ‘ರಂಗಸ್ಥಳಂ’ ಸಿನಿಮಾ ನಿರ್ದೇಶನ ಮಾಡಿರುವುದು ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್.

ಇದೀಗ ಸುಕುಮಾರ್ ಅವರ ಮುಂದಿನ ಸಿನಿಮಾಕ್ಕೆ ರಾಮ್ ಚರಣ್ ನಾಯಕರಾಗಿ ಆಯ್ಕೆ ಆಗಿದ್ದಾರೆ. ಕಳೆದ ಬಾರಿ ರಾಮ್ ಚರಣ್ ಜೊತೆಗೆ ಹಳ್ಳಿ ಕತೆಯನ್ನು ಸಿನಿಮಾ ಮಾಡಿದ್ದ ಸುಕುಮಾರ್ ಈ ಬಾರಿ ನಗರದ ವ್ಯಕ್ತಿಯ ಕತೆಯನ್ನು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ತಮ್ಮ ಮೆಚ್ಚಿನ ನಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ಎದುರು ಸಾಯಿ ಪಲ್ಲವಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸುಕುಮಾರ್, ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಂತೆ ಅವರಿಗೆ ಸಾಯಿ ಪಲ್ಲವಿ ಎಂದರೆ ಬಹಳ ಇಷ್ಟವಂತೆ. ಸಾಯಿ ಪಲ್ಲವಿ, ಸುಕುಮಾರ್ ಅವರ ನೆಚ್ಚಿನ ನಟಿಯಂತೆ. ಅಸಲಿಗೆ ಸಾಯಿ ಪಲ್ಲವಿಗೆ ಲೇಡಿ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿರುವುದು ಸಹ ಸುಕುಮಾರ್ ಅವರೇ.

ಇದನ್ನೂ ಓದಿ:‘ಬೇರೆಯದೇ ರೀತಿಯಲ್ಲಿ ಸಿನಿಮಾ ಬರ್ತಿದೆ’; ಸುಕುಮಾರ್ ಎದುರೇ ಘೋಷಿಸಿದ ಅಲ್ಲು ಅರ್ಜುನ್

ರಾಮ್ ಚರಣ್ ಇತ್ತೀಚೆಗಷ್ಟೆ ‘ಗೇಮ್ ಚೇಂಜರ್’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾದ ಪ್ರಚಾರ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಇದೀಗ ರಾಮ್ ಚರಣ್ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಸುಕುಮಾರ್ ಅವರ ಶಿಷ್ಯ ಬುಚ್ಚಿಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಆ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಇತ್ತೀಚೆಗೆ ನಡೆದಿದೆ. ಸಿನಿಮಾದ ಚಿತ್ರೀಕರಣವೂ ಮೈಸೂರಿನಲ್ಲಿ ನಡೆಯಲಿದ್ದು, ಈ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಸಹ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು