ಎಚ್ಚರಿಕೆಯಿಂದ ಇದ್ದಿದ್ದೆಲ್ಲವೂ ವ್ಯರ್ಥವಾಯಿತು; ರಾಮ್ ಚರಣ್ ಚಿತ್ರದ ಸೆಟ್ನ ಫೋಟೋ ಲೀಕ್
‘ಗೇಮ್ ಚೇಂಜರ್’ ಚಿತ್ರದ ಕೆಲವು ಪೋಸ್ಟರ್ ರಿಲೀಸ್ ಆಗಿದ್ದು ಹೊರತಪಡಿಸಿದರೆ ಮತ್ತಾವುದೇ ಅಪ್ಡೇಟ್ ಸಿನಿಮಾ ಬಗ್ಗೆ ಸಿಕ್ಕಿಲ್ಲ. ವಿಶೇಷ ದಿನದಂದು ಈ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ, ಅದಕ್ಕೂ ಮೊದಲೇ ಸಿನಿಮಾ ಶೂಟಿಂಗ್ ಸ್ಥಳದ ಫೋಟೋ ಲೀಕ್ ಆಗಿದೆ.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ (Game Changer Movie) ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಮ್ ಚರಣ್ಗೆ ಜೊತೆಯಾಗಿ ಕಿಯಾರಾ ಅಡ್ವಾಣಿ (Kiara Advani) ನಟಿಸುತ್ತಿದ್ದಾರೆ. ಈ ಸಿನಿಮಾಗೆ ಈ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್ನ ಫೋಟೋ ಲೀಕ್ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಆಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
‘ಗೇಮ್ ಚೇಂಜರ್’ ಚಿತ್ರದ ಕೆಲವು ಪೋಸ್ಟರ್ ರಿಲೀಸ್ ಆಗಿದ್ದು ಹೊರತಪಡಿಸಿದರೆ ಮತ್ತಾವುದೇ ಅಪ್ಡೇಟ್ ಸಿನಿಮಾ ಬಗ್ಗೆ ಸಿಕ್ಕಿಲ್ಲ. ವಿಶೇಷ ದಿನದಂದು ಈ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಆದರೆ, ಅದಕ್ಕೂ ಮೊದಲೇ ಸಿನಿಮಾ ಶೂಟಿಂಗ್ ಸ್ಥಳದ ಫೋಟೋ ಲೀಕ್ ಆಗಿದೆ.
ಸಮುದ್ರ ತೀರದಲ್ಲಿ ರಾಮ್ ಚರಣ್ ಅವರು ಶೂಟ್ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರತಂಡದವರದ್ದೇ ಕೆಲಸ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮೊದಲು ಸಿನಿಮಾ ಸೆಟ್ನಲ್ಲಿ ಮೊಬೈಲ್ ತರದಂತೆ ತಂಡದವರು ಪ್ರಕಟಣೆ ಹೊರಡಿಸಿದ್ದರು.
Game changer leaked pic. pic.twitter.com/VvcFPUlvsX
— Morvick ⭐ (@letmeknow09) August 22, 2023
#RRRMovie Historical Run for a Indian Movie 🔥🌊
Total Collection: 144crs / ¥2.33B💥#NTR #Ramcharan pic.twitter.com/zbI2TZPp5h
— Milagro Movies (@MilagroMovies) August 23, 2023
ಇದನ್ನೂ ಓದಿ: ‘ಮಗು ರಾಮ್ ಚರಣ್ ರೀತಿಯೇ ಇದೆ’; ಕ್ಲಿನ್ಕಾರ ಫೋಟೋ ನೋಡಿ ಘೋಷಿಸಿದ ಫ್ಯಾನ್ಸ್
Rey shanku enti ra idhi 2023 annaru… 2024 sankranti… 2024 March… 2024 may.. ipdu August 🥲🥲 shooting ayipoyuthundi kani dates matrame doormaga velthunnayi 😭😭#GameChanger https://t.co/NCkGB8Ssuu
— UG until the Gamechanger update (@RAMESHMSD13) August 23, 2023
ರಾಮ್ ಚರಣ್ ಅವರು ‘ಆರ್ಆರ್ಆರ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಆ ಸಿನಿಮಾ ಹಿಟ್ ಆದ ಬಳಿಕ ರಿಲೀಸ್ ಆಗುತ್ತಿರುವ ಮುಂದಿನ ಸಿನಿಮಾ ಇದು. ಈ ಕಾರಣದಿಂದಲೂ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಇನ್ನು, ಕಿಯಾರಾ ಅಡ್ವಾಣಿ ಅವರು ಬ್ಯಾಕ್ ಟು ಬ್ಯಾಕ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ