Peddi Movie: ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್; ಮತ್ತೆ ಮಾಸ್ ಲುಕ್​ನಲ್ಲಿ ಗ್ಲೋಬಲ್ ಸ್ಟಾರ್

Ram Charan Birthday: ರಾಮ್‌ಚರಣ್ ಅಭಿನಯದ RC16 ಚಿತ್ರಕ್ಕೆ 'ಪೆದ್ದಿ' ಎಂದು ಶೀರ್ಷಿಕೆ ಇಡಲಾಗಿದೆ. ರಾಮ್‌ಚರಣ್ ಅವರ ಜನ್ಮದಿನದಂದು ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ. ಬುಚಿ ಬಾಬು ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ಚರಣ್ ಅವರ ಮಾಸ್ ಲುಕ್ ಅಭಿಮಾನಿಗಳನ್ನು ಆಕರ್ಷಿಸಿದೆ.

Peddi Movie: ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್; ಮತ್ತೆ ಮಾಸ್ ಲುಕ್​ನಲ್ಲಿ ಗ್ಲೋಬಲ್ ಸ್ಟಾರ್
ರಾಮ್ ಚರಣ್

Updated on: Mar 27, 2025 | 10:43 AM

ನಟ ರಾಮ್ ಚರಣ್ (Ram Charan) ಹಾಗೂ ನಿರ್ದೇಶಕ ಬುಚಿ ಬಾಬು ಸನಾ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಇಷ್ಟು ದಿನ ತಾತ್ಕಾಲಿಕವಾಗಿ ‘RC16’ ಎನ್ನುವ ಟೈಟಲ್ ಇಡಲಾಗಿತ್ತು. ಈ ಸಿನಿಮಾಗೆ ‘ಪೆದ್ದಿ’ ಟೈಟಲ್ ಫೈನಲ್ ಮಾಡಲಾಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಈಗ ರಾಮ್ ಚರಣ್ ಬರ್ತ್​ಡೇ ಪ್ರಯುಕ್ತ ಇಂದು (ಮಾರ್ಚ್​ 27) ಸಿನಿಮಾದ ಟೈಟಲ್ ಹಾಗೂ ರಾಮ್ ಚರಣ್ ಲುಕ್ ರಿವೀಲ್ ಆಗಿದೆ. ಇದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಚಿತ್ರಕ್ಕೆ ‘ಪೆದ್ದಿ’ ಎನ್ನುವ ಟೈಟಲ್ ಫೈನಲ್ ಆಗಿದೆ.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಬರ್ತ್​ಡೇ ದಿನ ಸಿನಿಮಾ ತಂಡದ ಕಡೆಯಿಂದ ಪೋಸ್ಟರ್, ಟೀಸರ್ ಅಥವಾ ಟ್ರೇಲರ್ ರಿಲೀಸ್ ಆಗೋದು ವಾಡಿಕೆ. ಅಂತೆಯೇ ರಾಮ್ ಚರಣ್ ಬರ್ತ್​ಡೇ ಪ್ರಯುಕ್ತ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಆಗಿದೆ. ಚಿತ್ರದಲ್ಲಿ ರಾಮ್ ಚರಣ್ ಲುಕ್ ಗನನ ಸೆಳೆದಿದೆ. ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಇಲ್ಲ.

ಇದನ್ನೂ ಓದಿ
ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂಪಾಯಿ
ಐಶ್ವರ್ಯಾ ಕಾರು ಅಪಘಾತಕ್ಕೆ ಒಳಗಾಗಿದ್ದು ಹೇಗೆ? ವಿಡಿಯೋ ವೈರಲ್
ಸಲ್ಲು ನಟಿಸಬೇಕಿದ್ದ 3 ಬಿಗ್ ಬಜೆಟ್ ಚಿತ್ರಗಳಿಗೆ ಬ್ರೇಕ್; ಕುಸಿದ ಮಾರ್ಕೆಟ್?
ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ

ಇದನ್ನೂ ಓದಿ: ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂ.; ಸಾಧ್ಯವಾಗಿದ್ದು ಹೇಗೆ?

ರಾಮ್ ಚರಣ್ ಅವರು ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಯಲ್ಲಿ ಬೀಡಿ ಇದೆ. ಅವರ ಲುಕ್ ಸಖತ್ ಮಾಸ್ ಆಗಿದೆ. ಈ ಪೋಸ್ಟರ್ ರಾಮ್ ಚರಣ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ಕನ್ನಡದ ಶಿವರಾಜ್​ಕುಮಾರ್, ಬಾಲಿವುಡ್​ನ ಜಾನ್ವಿ ಕಪೂರ್ ನಟಿಸುತ್ತಾ ಇದ್ದಾರೆ.

ಬುಚಿ ಬಾಬು ಸನಾ ಅವರು ಈ ಮೊದಲು ‘ಉಪ್ಪೇನಾ’ ಸಿನಿಮಾ ಮಾಡಿದರು. ಈ ಚಿತ್ರ 2021ರಲ್ಲಿ ರಿಲೀಸ್ ಆಯಿತು. ಕೊವಿಡ್ ಸಂದರ್ಭದಲ್ಲಿ ರಿಲೀಸ್ ಆದ ಈ ಚಿತ್ರ ಯಶಸ್ಸು ಕಂಡಿತು. ಕೃತಿ ಶೆಟ್ಟಿ, ವಿಜಯ್ ಸೇತುಪತಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದು. ಅವರು ಈ ಚಿತ್ರಕ್ಕಾಗಿ ಸಖತ್ ರಾ ಸಬ್ಜೆಕ್ಟ್​ನ ಆಯ್ಕೆ ಮಾಡಿರೋದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:28 am, Thu, 27 March 25