ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್​ ಸಿಂಗ್​! ಕೊರೊನಾ ಕಾರಣ

ಕೊರೊನಾ ವೈರಸ್​ ಎರಡನೇ ಅಲೆ ದೇಶಾದ್ಯಂತ ಜೋರಾಗಿ ಹರಡುತ್ತಿದೆ. ಮುಂಬೈ ಮಹಾನಗರದಲ್ಲೂ ಕೊವಿಡ್​-19 ಹಾವಳಿ ಮಿತಿ ಮೀರುತ್ತಿದೆ. ಅದನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ 15 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದೆ.

ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್​ ಸಿಂಗ್​! ಕೊರೊನಾ ಕಾರಣ
ರಣವೀರ್​ ಸಿಂಗ್​ - ದೀಪಿಕಾ ಪಡುಕೋಣೆ
Edited By:

Updated on: Apr 16, 2021 | 5:30 PM

ನಟಿ ದೀಪಿಕಾ ಪಡುಕೋಣೆ ಮೂಲತಃ ಬೆಂಗಳೂರಿನವರು. ಆದರೆ ಬಾಲಿವುಡ್​ನಲ್ಲಿ ಅವಕಾಶ ಸಿಕ್ಕ ಬಳಿಕ ಸಿನಿಮಾ ಚಟುವಟಿಕೆಗಳ ಸಲುವಾಗಿ ಅವರು ಮುಂಬೈನಲ್ಲಿ ಹೆಚ್ಚಾಗಿ ವಾಸಿಸಲು ಆರಂಭಿಸಿದರು. ನಟ ರಣವೀರ್​ ಸಿಂಗ್ ಜೊತೆ ಮದುವೆ ಆದ ಬಳಿಕ ಅಲ್ಲಿಯೇ ಸೆಟ್ಲ್​ ಆದರು. ಆದರೆ ಈಗ ಅವರು ರಾತ್ರೋ ರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನೇಕ ಬಗೆಯ ಗುಸುಗುಸು ಹರಿದಾಡುತ್ತಿದೆ. ಈ ಸ್ಟಾರ್​ ದಂಪತಿ ಯಾಕೆ ಧಿಡೀರ್​ ಅಂತ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ ಎಂಬ ಬಗ್ಗೆ ಕೆಲವೆಡೆ ವರದಿ ಆಗಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಇತ್ತೀಚೆಗೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೀಗೆ ಏಕಾಏಕಿ ವಾಣಿಜ್ಯ ನಗರಿ ಬಿಟ್ಟು ಉದ್ಯಾನ ನಗರಿಯತ್ತ ಪ್ರಯಾಣ ಬೆಳೆಸಿದ್ದಕ್ಕೆ ಕೊರೊನಾ ವೈರಸ್​ ಕಾರಣ ಎನ್ನಲಾಗುತ್ತಿದೆ! ಹಾಗಂತ ಈ ಸೆಲೆಬ್ರಿಟಿ ಜೋಡಿಗೆ ಕೊವಿಡ್​-19 ಪಾಸಿಟಿವ್​ ಆಗಿಲ್ಲ. ಬದಲಿಗೆ, ಕೊರೊನಾದಿಂದಾಗಿ ಮುಂಬೈನಲ್ಲಿ ಆಗಿರುವ ಜನತಾ ಕರ್ಫ್ಯೂನಿಂದ ತಪ್ಪಿಸಿಕೊಳ್ಳಲು ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

ಕೊರೊನಾ ವೈರಸ್​ ಎರಡನೇ ಅಲೆ ದೇಶಾದ್ಯಂತ ಜೋರಾಗಿ ಹರಡುತ್ತಿದೆ. ಮುಂಬೈ ಮಹಾನಗರದಲ್ಲೂ ಕೊವಿಡ್​-19 ಹಾವಳಿ ಮಿತಿ ಮೀರುತ್ತಿದೆ. ಅದನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ 15 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದೆ. ಅತಿ ಅವಶ್ಯಕ ಕೆಲಸಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿನಿಮಾ ಚಿತ್ರೀಕರಣದ ಮೇಲೂ ನಿರ್ಬಂಧ ಹೇರಲಾಗಿದೆ. ಹಾಗಾಗಿ ಈ ಸಮಯದಲ್ಲಿ ದೀಪಿಕಾ-ರಣವೀರ್​ ಸಿನಿಮಾ ಕೆಲಸಗಳಿಗೆ ಬ್ರೇಕ್​ ಹಾಕುವ ಅನಿವಾರ್ಯತೆ ಎದುರಾಗಿದೆ.

ಮುಂಬೈನಲ್ಲಿ ಕರ್ಫ್ಯೂ ಸಂದರ್ಭವನ್ನು ತಪ್ಪಿಸಿಕೊಳ್ಳಲು ದೀಪಿಕಾ ಮತ್ತು ರಣವೀರ್​ ಸಿಂಗ್​ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಈ ಸ್ಟಾರ್ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕರ್ನಾಟಕದಲ್ಲಿಯೂ ಮತ್ತೆ ಲಾಕ್​ಡೌನ್​ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ವೇಳೆ ಬೆಂಗಳೂರಿನಲ್ಲಿ ಇಬ್ಬರೂ ಜೊತೆಯಾಗಿ ಕಾಲ ಕಳೆಯಲಿದ್ದಾರೆ. ದೀಪಿಕಾ-ರಣವೀರ್ ನಟಿಸಿರುವ ‘83’ ಸಿನಿಮಾ ಜೂ.4ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us