AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬಾಬ್ ಚಂದ್ರು ಸ್ಟೈಲ್​ನಲ್ಲಿ ‘ರಾಹುಲಾ’ಗೆ ರಶ್ಮಿಕಾ ಬರ್ತ್​ಡೇ ವಿಶ್

Rashmika Mandanna: ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಚಿತ್ರ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಅವರ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ಅವರು ರಾಹುಲ್ ಅವರನ್ನು ತಮ್ಮ ಅತ್ಯಮೂಲ್ಯ ಸ್ನೇಹಿತ ಎಂದು ಕರೆದಿದ್ದಾರೆ.ಚಿತ್ರದ ಮೇಲೆ ಅವರ ಅಪಾರ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಕಬಾಬ್ ಚಂದ್ರು ಸ್ಟೈಲ್​ನಲ್ಲಿ ‘ರಾಹುಲಾ’ಗೆ ರಶ್ಮಿಕಾ ಬರ್ತ್​ಡೇ ವಿಶ್
ರಾಹುಲ್-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Jun 24, 2025 | 11:54 AM

Share

ಕಬಾಬ್ ಚಂದ್ರು ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಮಾಡಿದ್ದ ಬೆಳ್ಳುಳ್ಳಿ ಕಬಾಬ್ ಸಖತ್ ಫೇಮಸ್ ಆಯಿತು. ಇದರ ಜೊತೆ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದ ರಾಹುಲ್ ಕೂಡ ಫೇಮಸ್ ಆದರು. ‘ರುಬ್ಬಿ ಕೊಡು ರಾಹುಲಾ..’ ‘ಪಾತ್ರೆ ತೊಳೆದು ಕೊಡು ರಾಹುಲಾ..’ ಎಂದು ಚಂದ್ರು ಹೇಳುತ್ತಿದ್ದರು. ಇದರಿಂದ ರಾಹುಲ್ ಕೂಡ ಫೇಮಸ್ ಆದರು. ಅನೇಕರು ತಮ್ಮ ಸರ್ಕಲ್​ನಲ್ಲಿ ರಾಹುಲ್ ಎಂದಿದ್ದರೆ ಅವರಿಗೆ ರಾಹುಲಾ ಎಂದು ಕರೆಯೋಕೆ ಆರಂಭಿಸಿದರು. ಅಚ್ಚರಿ ಏನೆಂದರೆ ರಶ್ಮಿಕಾ ಮಂದಣ್ಣಗೂ (Rashmika Mandanna) ರಾಹುಲ್ ಹೆಸರಿನ ಗೆಳೆಯರಿದ್ದು, ಅವರಿಗೆ ರಾಹುಲಾ ಎಂದು ಕರೆಯುತ್ತಾರೆ.

ರಶ್ಮಿಕಾ ಮಂದಣ್ಣ ಅವರು ‘ಗರ್ಲ್​ಫ್ರೆಂಡ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ವಿಶೇಷ ಎಂದರೆ ಇದು ಮಹಿಳಾ ಪ್ರಧಾನ ಸಿನಿಮಾ. ಈ ರೀತಿಯ ಸಿನಿಮಾ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ರಶ್ಮಿಕಾ ಸಖತ್ ಖುಷಿಯಾಗಿದ್ದಾರೆ. ಈ ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ತಮಿಳುನಾಡಿನವರಾದ ಇವರು, ನಟ ಹಾಗೂ ನಿರ್ದೇಶಕ. ‘ದಿ ಗರ್ಲ್​ಫ್ರೆಂಡ್’ ಹೆಸರಿನ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ರಾಹುಲ್ ಅವರಿಗೆ ಇಂದು ಜನ್ಮದಿನ. ರಶ್ಮಿಕಾ ಅವರು ರಾಹುಲ್​ಗೆ ವಿಶ್ ಮಾಡಿದ್ದಾರೆ.

‘ರಾಹುಲಾ.. ಇಂದು ನಿಮ್ಮ ಹುಟ್ಟು ಹಬ್ಬ. ಆದರೆ, ಇದನ್ನು ಬರೆಯುವಾಗ ನೀವು ನನ್ನ ಜೊತೆ ರಿಹರ್ಸಲ್ ಮಾಡುತ್ತಿದ್ದೀರಿ. ನೀವು ನನ್ನ ಅತ್ಯಮೂಲ್ಯ ಸ್ನೇಹಿತ. ನೀವು ಗರ್ಲ್‌ಫ್ರೆಂಡ್‌ನಂತಹ ಚಿತ್ರವನ್ನು ಮಾಡಿದ್ದೀರಿ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.. ನಿಮ್ಮಲ್ಲಿ ನಾನು ಒಬ್ಬ ನಿರ್ದೇಶಕ, ಸ್ನೇಹಿತ, ಮಾರ್ಗದರ್ಶಕನನ್ನು ಕಂಡುಕೊಂಡಿದ್ದೇನೆ. ನಾನು ಸಂಪೂರ್ಣವಾಗಿ ಮತ್ತು ಅಪಾರವಾಗಿ ಅವರನ್ನು ನಂಬುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ರಾಹುಲ್ ಸರ್ (ನನ್ನ ನಿರ್ದೇಶಕ), ರಾಹುಲಾ..(ನನ್ನ ಗೆಳೆಯ)’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫಸ್ಟ್​ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್​ಫ್ರೆಂಡ್’ ಚಿತ್ರದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರ ನಟನೆಯ ‘ಕುಬೇರ’ ಚಿತ್ರ ಗೆದ್ದು ಬೀಗಿದೆ. ‘ವಾರಿಸು’ ಬಳಿಕ ತಮಿಳಿನಲ್ಲಿ ಅವರು ಮತ್ತೊಂದು ಗೆಲುವು ಕಂಡಿದ್ದಾರೆ. ‘ದಿ ಗರ್ಲ್​ಫ್ರೆಂಡ್’ ತೆಲುಗು ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.