AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠ ಬಿಡದ ‘ದ್ರೌಪದಿ’ಗೆ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಪಟ್ಟ, ಯಾರು ಈ ರೂಪಾ ಗಂಗೂಲಿ?

Roopa Ganguly: ಕೌರವರ ಪತನಕ್ಕಾಗಿ ಪಣತೊಟ್ಟು ಮುಡಿ ಕಟ್ಟದೆ ಕಾದಿದ್ದಳು ಮಹಾಭಾರತದ ದ್ರೌಪದಿ. ಅದೇ ಹಠದಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ವರ್ಷಗಳಿಂದ ಕಾದಿದ್ದ ‘ದ್ರೌಪದಿ’ಗೆ ಈಗ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ನೀಡಿದೆ. ಅಂದಹಾಗೆ ಯಾರು ಈ ‘ದ್ರೌಪದಿ’. ಇವರಿಗೂ ಕನ್ನಡ ಚಿತ್ರರಂಗಕ್ಕೂ ಇರುವ ನಂಟು ಏನು? ಮಾಹಿತಿ ಇಲ್ಲಿದೆ...

ಹಠ ಬಿಡದ ‘ದ್ರೌಪದಿ’ಗೆ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಪಟ್ಟ, ಯಾರು ಈ ರೂಪಾ ಗಂಗೂಲಿ?
Roopa Ganguly
ಮಂಜುನಾಥ ಸಿ.
|

Updated on: May 08, 2026 | 7:29 PM

Share

ಕೌರವರ ಪತನಕ್ಕಾಗಿ ಪಣತೊಟ್ಟು ಮುಡಿ ಕಟ್ಟದೆ ಕಾದಿದ್ದಳು ಮಹಾಭಾರತದ ದ್ರೌಪದಿ. ಅದೇ ಹಠದಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ದಶಕದಿಂದ ಕಾದಿದ್ದ ‘ದ್ರೌಪದಿ’ಗೆ ಈಗ ಪಶ್ಚಿಮ ಬಂಗಾಳದ (west Bengal) ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ ಬಿಜೆಪಿ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಸತತ ಹೊರಾಟ, ಪ್ರಯತ್ನಗಳ ಬಳಿಕ ಕೊನೆಗೂ ಮಮತಾ ಬ್ಯಾನರ್ಜಿಯನ್ನು ಕುರ್ಚಿಯಿಂದ ಕೆಳಗಿಳಿಸಿರುವ ಬಿಜೆಪಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸುವೇಂದು ಅಧಿಕಾರಿ ಇದೀಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಬಿಜೆಪಿ ಸಿಎಂ ಆಗಲಿದ್ದಾರೆ. ಮಾತ್ರವಲ್ಲದೆ, ಇಬ್ಬರನ್ನು ಡಿಸಿಎಂ ಅನ್ನಾಗಿ ಸಹ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರು ನಟಿ ರೂಪಾ ಗಂಗೂಲಿ.

ರೂಪಾ ಗಂಗೂಲಿ ಎಂದರೆ ಹೆಚ್ಚು ಜನರಿಗೆ ತಿಳಿಯಲಿಕ್ಕಿಲ್ಲ, ಆದರೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರಾವಾಹಿಯ ದ್ರೌಪದಿ ಎಂದರೆ ಥಟ್ಟನೆ ನೆನಪಾಗುತ್ತದೆ. ಅದೇ ‘ದ್ರೌಪದಿ’ ಪಾತ್ರಧಾರಿ ರೂಪಾ ಗಂಗೂಲಿ ಈಗ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ. ರೂಪಾ ಗಂಗೂಲಿ ಅವರದ್ದು ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ರಾಜಕೀಯಕ್ಕೆ ಕಾಲಿಟ್ಟಮೇಲೂ ನಟನೆ ಮುಂದುವರೆಸಿದ್ದ ರೂಪಾ ಗಂಗೂಲಿ ಅವರಿಗೆ ಈಗಲೂ  ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇದೆ. ಆದರೆ ಈಗ ಉಪ ಮುಖ್ಯಮಂತ್ರಿ ಆದ ಬಳಿಕ ಅವರು ನಟನೆ ಮುಂದುವರೆಸುತ್ತಾರೋ ಇಲ್ಲವೋ ನೋಡಬೇಕು.

ರಾಜಕೀಯ ಜರ್ನಿ

ರೂಪಾ ಗಂಗೂಲಿ ಸಿನಿಮಾ ರಂಗದಲ್ಲಿ ಸೌಮ್ಯ, ಸುಂದರ ನಾಯಕಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು, ಆದರೆ ರಾಜಕೀಯದಲ್ಲಿ ಅವರದ್ದು ಹೋರಾಟದ ಹಾದಿ. 2015 ರಲ್ಲಿ ಬಿಜೆಪಿ ಸೇರುವ ಮೂಲಕ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಹವಾ ಬಲು ಜೋರಾಗಿದ್ದ ಕಾಲವದು. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಯಾವ ಕಾಲದಲ್ಲೂ ಸುಲಭವಾಗಿರಲಿಲ್ಲ. ರಾಜಕೀಯ ಹಿಂಸಾಚಾರವಂತೂ ‘ಸಾಮಾನ್ಯ’ ಎಂಬಂತಿತ್ತು, ಅಂಥಹಾ ಸಮಯದಲ್ಲೂ ಗಟ್ಟಿ ಮನಸ್ಸು ಮಾಡಿ, ದೊಡ್ಡ ಪಕ್ಷದ ವಿರುದ್ಧ ಪಕ್ಷ ಸಂಘಟನೆ ಶುರು ಮಾಡಿದರು ರೂಪಾ ಗಂಗೂಲಿ.

2015 ರಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಆದ ರೂಪಾ ಗಂಗೂಲಿ, 2016 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಆದರೆ ಛಲ ಬಿಡದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ರೂಪಾ. ಅದೇ ವರ್ಷ ಮೇ ತಿಂಗಳಲ್ಲಿ ಚುನಾವಣಾ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಿ ಮರಳಿ ಬರುವಾಗ ಟಿಎಂಸಿ ಕಾರ್ಯಕರ್ತರು ರೂಪಾ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದರು. ಹಲ್ಲೆಯಲ್ಲಿ ರೂಪಾ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರು ಆಸ್ಪತ್ರೆ ಸಹ ಸೇರಿದರು. ಅದೇ ವರ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿ ಕಳಿಸಿತು ಬಿಜೆಪಿ. 2022 ರಲ್ಲಿ ತಮ್ಮ ಅವಧಿ ಮುಗಿಸಿದ ರೂಪಾ, ಈಗ ಮತ್ತೆ ಚುನಾವಣೆ ಸ್ಪರ್ಧಿಸಿ ಗೆದ್ದಿಲ್ಲದೆ, ಉಪ ಮುಖ್ಯಮಂತ್ರಿ ಸಹ ಆಗಲಿದ್ದಾರೆ.

ವೈಯಕ್ತಿಕ ಜೀವನ

ಇನ್ನು ರೂಪಾ ಅವರ ವೈಯಕ್ತಿಕ ಜೀವನ ಗಮನಿಸುವುದಾದರೆ ರೂಪಾ ಅವರು ಎಂಜಿನಿಯರ್ ಒಬ್ಬರನ್ನು 1992 ರಲ್ಲಿ ವಿವಾಹವಾಗಿ ಅವರಿಂದ ಒಂದು ಗಂಡು ಮಗುವನ್ನೂ ಪಡೆದರು. ಆದರೆ 2007 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರಾದರು. ಬಳಿಕ ರೂಪಾ ಅವರು ಬೆಂಗಾಲಿ ಗಾಯಕ ದಿವ್ಯೇಂದು ಮುಖರ್ಜಿ ಜೊತೆಗೆ ಲಿವಿನ್ ರಿಲೇಷನ್​​ನಲ್ಲಿದ್ದರು. ರೂಪಾ ಮತ್ತು ದಿವ್ಯೇಂದು ಮುಂಬೈನಲ್ಲಿ ಒಟ್ಟಿಗೆ ಹಲವು ವರ್ಷ ಇದ್ದರು. ಬಳಿಕ ಇಬ್ಬರೂ ದೂರಾದರು. ಆದರೆ ಆ ಬಳಿಕವೂ ಅವರು ಗೆಳೆತನ ಕಾಪಾಡಿಕೊಂಡಿದ್ದಾರೆ. ಪ್ರಸ್ತುತ ರೂಪಾ ಅವರು ಒಂಟಿ. ಪುತ್ರ ಜೊತೆಗಿದ್ದಾನೆ.

ಸಿನಿಮಾ ಜರ್ನಿ

ರೂಪಾ ಗಂಗೂಲಿ ಅದ್ಭುತ ನಟಿಯಾಗಿದ್ದವರು. ಟಿವಿ ಧಾರಾವಾಹಿ ಮಾತ್ರವೇ ಅಲ್ಲದೆ ಹಿಂದಿ, ಕನ್ನಡ, ತೆಲುಗು, ಒಡಿಯಾ, ಮಲಯಾಳಂ, ಮರಾಠಿ, ಬೆಂಗಾಲಿ, ಅಸ್ಸಾಮಿ ಹೀಗೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಅವರು ವಿಷ್ಣುವರ್ಧನ್ ಜೊತೆಗೆ ‘ಪೊಲೀಸ್ ಮತ್ತು ದಾದ’, ‘ಕದನ’, ‘ಸಿಬಿಐ ವಿಜಿ’, ‘ಬಹದ್ಧೂರ್ ಹೆಣ್ಣು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಅವರ ಕೈಯಲ್ಲಿ ಮೂರು ಸಿನಿಮಾಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ