AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ray Stevenson: ‘ಆರ್​ಆರ್​ಆರ್​’ ಖಡಕ್ ವಿಲನ್ ರೇ ಸ್ಟೀವನ್​ಸನ್ ನಿಧನ; ಬರ್ತ್​ಡೇ ಆಚರಣೆಗೂ ಮೊದಲೇ ಕೊನೆಯುಸಿರು

Ray Stevenson Death: ರಾಜಮೌಳಿ ನಿರ್ದೇಶನದ ಈ ಸಿನಿಮಾ ಯಶಸ್ಸು ಕಾಣಲು ರೇ ಸ್ಟೀವನ್​ಸನ್ ಅವರ ಕೊಡುಗೆಯೂ ಇದೆ. ಖಡಕ್ ವಿಲನ್ ಆಗಿ ಅವರು ಎಲ್ಲರ ಗಮನ ಸೆಳೆದಿದ್ದರು.

Ray Stevenson: ‘ಆರ್​ಆರ್​ಆರ್​’ ಖಡಕ್ ವಿಲನ್ ರೇ ಸ್ಟೀವನ್​ಸನ್ ನಿಧನ; ಬರ್ತ್​ಡೇ ಆಚರಣೆಗೂ ಮೊದಲೇ ಕೊನೆಯುಸಿರು
ರೇ ಸ್ಟೀವ್​ಸನ್
ರಾಜೇಶ್ ದುಗ್ಗುಮನೆ
|

Updated on:May 23, 2023 | 9:03 AM

Share

‘ಆರ್​ಆರ್​ಆರ್​’ ಚಿತ್ರದಲ್ಲಿ ಬ್ರಿಟಿಷ್​ ಗವರ್ನರ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ಐರಿಷ್ ನಟ ರೇ ಸ್ಟೀವನ್​ಸನ್ (Ray Stevenson) ಭಾನುವಾರ (ಮೇ 21) ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಈ ವಿಚಾರವನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ಮೇ 25ರಂದು ಅವರು 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವವರಿದ್ದರು. ಅವರ ಸಾವಿಗೆ ಕಾರಣ ಏನು ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ. ರೇ ಸ್ಟೀವನ್​​ಸನ್ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ‘ಆರ್​ಆರ್​ಆರ್’ (RRR Movie) ಚಿತ್ರತಂಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಂಬನಿ ಮಿಡಿದಿದೆ.

ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತು. ಭಾರತೀಯರು ಹಾಗೂ ಬ್ರಿಟಿಷರ ನಡುವಿನ ಸಂಘರ್ಷವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಯಶಸ್ಸು ಕಾಣಲು ರೇ ಸ್ಟೀವನ್​ಸನ್ ಅವರ ಕೊಡುಗೆಯೂ ಇದೆ. ಖಡಕ್ ವಿಲನ್ ಆಗಿ ಅವರು ಎಲ್ಲರ ಗಮನ ಸೆಳೆದಿದ್ದರು. ಬದುಕಿ ಬಾಳಬೇಕಿದ್ದ  ಅವರು ನಿಧನ ಹೊಂದಿದ್ದು ಅನೇಕರಿಗೆ ಬೇಸರ ಮೂಡಿಸಿದೆ.

ರೇ ಸ್ಟೀವನ್​ಸನ್ ಹುಟ್ಟಿದ್ದು 1964 ಮೇ 25. 8ನೇ ವಯಸ್ಸಿಗೆ ಅವರು ಇಂಗ್ಲೆಂಡ್​ಗೆ ಶಿಫ್ಟ್ ಆದರು. ಸಣ್ಣ ವಯಸ್ಸಿನಲ್ಲೇ ರಂಗಭೂಮಿಯಲ್ಲಿ ತೊಡಗಿಕೊಂಡರು. 90ನೇ ದಶಕದಲ್ಲಿ ಅವರು ಟಿವಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. 1998ರಲ್ಲಿ ರಿಲೀಸ್ ಆದ ‘ದಿ ಥಿಯರಿ ಆಫ್​ ಫ್ಲೈಟ್​’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಿಂದ ರೇ ಸ್ಟೀವನ್​ಸನ್ ಅವರ ಯಶಸ್ಸು ಹೆಚ್ಚಿತು. ಅವರ ಪಾತ್ರ ಅನೇಕರಿಗೆ ಇಷ್ಟ ಆಯಿತು. ‘ಪನಿಶರ್​: ವಾರ್ ಜೋನ್​’ ಮೊದಲಾದ ಚಿತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಜಪಾನ್​ನಲ್ಲಿ 200 ದಿನ ಪ್ರದರ್ಶನ ಕಂಡ ‘ಆರ್​ಆರ್​ಆರ್​’ ಸಿನಿಮಾ; ಈವರೆಗೂ ಆದ ಕಲೆಕ್ಷನ್​ ಎಷ್ಟು?

ಇತ್ತೀಚೆಗೆ ರೇ ಸ್ಟೀವನ್​ಸನ್ ಅವರು ಹೊಸ ಸಿನಿಮಾಗೆ ಸಹಿ ಮಾಡಿದ್ದರು. ಆದರೆ, ಈ ಸಿನಿಮಾದ ಕೆಲಸಗಳು ಆರಂಭ ಆಗುವ ಮೊದಲೇ ಅವರು ನಿಧನ ಹೊಂದಿದರು. ‘ಆರ್​ಆರ್​ಆರ್​’ ಚಿತ್ರ ಯಶಸ್ಸು ಕಂಡ ಬಳಿಕ ಅವರ ಖ್ಯಾತಿ ಹೆಚ್ಚಿತ್ತು. ‘ಆರ್​ಆರ್​ಆರ್​’ ಸಿನಿಮಾದ ಅಧಿಕೃತ ಟ್ವಿಟರ್ ಖಾತೆ ಮೂಲಕ ನಟನ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:20 am, Tue, 23 May 23