AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಕೋಟಿ ರೂಪಾಯಿ ಜಾಹೀರಾತು ರಿಜೆಕ್ಟ್ ಮಾಡಿದ್ದ ಸಾಯಿ ಪಲ್ಲವಿ; ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ

Sai Pallavi: ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಅವರು 2 ಕೋಟಿ ರೂಪಾಯಿ ಮೌಲ್ಯದ ಒಂದು ಫೇರ್‌ನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಅವರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಲ್ಲದೆ, ಅವರು ಬಾಲಿವುಡ್‌ನಲ್ಲಿ ತಮ್ಮ ಅಭಿನಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ವೈದ್ಯಕೀಯ ಪದವೀಧರೆಯೂ ಆಗಿರುವ ಸಾಯಿ ಪಲ್ಲವಿ ಅವರ ಸರಳತೆ ಮತ್ತು ತತ್ವಗಳಿಗೆ ಈ ಘಟನೆ ಸಾಕ್ಷಿಯಾಗಿದೆ. ಅವರ ಮುಂದಿನ ಚಿತ್ರ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

2 ಕೋಟಿ ರೂಪಾಯಿ ಜಾಹೀರಾತು ರಿಜೆಕ್ಟ್ ಮಾಡಿದ್ದ ಸಾಯಿ ಪಲ್ಲವಿ; ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ
Sai Pallavi
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 26, 2024 | 3:27 PM

Share

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರಿಗೆ ಹಲವು ಆಫರ್ಗಳು ಬಂದಿದ್ದವು. ಈ ಪೈಕಿ ಅವರು ಅಳೆದು ತೂಗಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಸುಂದರ ನಟಿ ವೈದ್ಯೆ ಕೂಡ ಹೌದು. ಅವರು ಎಂಬಿಬಿಎಸ್ ಕೂಡ ಓದಿದ್ದಾರೆ. ಸೌತ್ ನಂತರ ಬಾಲಿವುಡ್ನಲ್ಲಿ ಸದ್ದು ಮಾಡಲು ಸಾಯಿ ಪಲ್ಲವಿ ಸಜ್ಜಾಗಿದ್ದಾರೆ. ಈ ಮಧ್ಯೆ ಸಾಯಿ ಪಲ್ಲವಿ ಅವರ ಒಂದು ಅಪರೂಪದ ವಿಚಾರ ರಿವೀಲ್ ಆಗಿದೆ. ಅವರು ಬರೋಬ್ಬರಿ 2 ಕೋಟಿ ರೂಪಾಯಿ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು ಎಂಬುದು ವಿಶೇಷ.

ಸಾಯಿ ಪಲ್ಲವಿ 1992ರ ಮೇ 9 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಡಗ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಸೆಂತಾಮರೈ ಕಾನನ್ ಮತ್ತು ತಾಯಿಯ ಹೆಸರು ರಾಧಾ, ನಟಿಗೆ ಪೂಜಾ ಕಾನನ್ ಹೆಸರಿನ ತಂಗಿ ಇದ್ದಾರೆ. ಅವರು ನಟಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಉತ್ತಮ ನೃತ್ಯಗಾರ್ತಿಯೂ ಹೌದು. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಸಾಯಿ ಪಲ್ಲವಿ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ.

ಸಾಯಿ ಪಲ್ಲವಿ ಅವರು ‘ಪ್ರೇಮಂ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರ ರಿಲೀಸ್ ಆಗಿ ದಶಕ ಕಳೆಯುತ್ತಾ ಬಂದಿದೆ. ಅವರಿಗೆ ಈ ಮೊದಲು ಸ್ಕಿನ್ಕೇರ್ ಆಫರ್ ಬಂದಿತ್ತು. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ‘ಇದು ಭಾರತೀಯರ ಬಣ್ಣ. ನಾವು ವಿದೇಶರ ಬಳಿ ಹೋಗಿ ನೀವು ಏಕೆ ಬೆಳ್ಳಗೆ ಇದ್ದೀರಿ ಎಂದು ಕೇಳೋಕೆ ಆಗಲ್ಲ. ಇದರಿಂದ ಅವರಿಗೆ ಕ್ಯಾನ್ಸರ್ ಬರುತ್ತದೆ ಅನ್ನೋದು ಗೊತ್ತು. ನಮಗೆ ಆ ರೀತಿ ಆಗಬೇಕು ಎಂದು ಯೋಚಿಸೋಕೆ ಆಗಲ್ಲ. ಅದು ಅವರ ಬಣ್ಣ, ಇದು ಇವರ ಬಣ್ಣ. ಆಫ್ರಿಕಾದವರಿಗೆ ಅವರದ್ದೇ ಆದ ಬಣ್ಣ ಇದೆ’ ಎಂದಿದ್ದರು ಸಾಯಿ ಪಲ್ಲವಿ.

ಇದನ್ನೂ ಓದಿ:ಕಾಶಿ ಯಾತ್ರೆಯಲ್ಲಿ ನಟಿ ಸಾಯಿ ಪಲ್ಲವಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ

‘ಆ ಜಾಹೀರಾತುಗಳಿಂದ ಬಂದ ಹಣವನ್ನು ಏನು ಮಾಡೋದು. ನಾನು ಮನೆಗೆ ಹೋಗಿ ಮೂರು ಚಪಾತಿ ತಿನ್ನುತ್ತೇನೆ ಅಷ್ಟೆ. ನನಗೆ ದೊಡ್ಡ ಆಸೆಗಳಿಲ್ಲ’ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಮೂಲಕ ಅವರು ಎಲ್ಲ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದರು. ಸಾಯಿ ಪಲ್ಲವಿಗೆ ಫೇರ್‌ನೆಸ್ ಕ್ರೀಂ ಜಾಹೀರಾತಿಗೆ 2 ಕೋಟಿ ರೂ. ಸಿಕ್ಕಿತ್ತು. ಆದರೆ, ಇದನ್ನು ನಟಿ ತಿರಸ್ಕರಿಸಿದ್ದಾರೆ.

ಸದ್ಯ ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. 2026ರಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ