‘ತಾಂಡೇಲ್ ಗೆಲ್ಲುತ್ತೆ ಎಂದು ಈ ವ್ಯಕ್ತಿಗೆ ಮೊದಲೇ ಗೊತ್ತಿತ್ತು’: ಸಾಯಿ ಪಲ್ಲವಿ
Thandel movie success: ಸಾಯಿ ಪಲ್ಲವಿ, ನಾಗ ಚೈತನ್ಯ ಒಟ್ಟಿಗೆ ನಟಿಸಿರುವ ‘ತಂಡೇಲ್’ ಸಿನಿಮಾ ಭಾರಿ ಹಿಟ್ ಆಗಿದೆ. ಸತತ ಸೋಲು ಕಂಡಿದ್ದ ನಾಗ ಚೈತನ್ಯ ಮುಖದಲ್ಲಿ ಕೊನೆಗೂ ನಗು ಉಕ್ಕುವಂತೆ ಮಾಡಿದೆ. ಇತ್ತೀಚೆಗೆ ಚಿತ್ರತಂಡ ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆ ಮಾಡಿತು. ಈ ವೇಳೆ ಮಾತನಾಡಿದ ಸಾಯಿ ಪಲ್ಲವಿ, ಈ ಸಿನಿಮಾ ಗೆಲ್ಲುತ್ತದೆಂಬುದು ಒಬ್ಬ ವ್ಯಕ್ತಿಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ.

‘ತಾಂಡೇಲ್’ ಸಿನಿಮಾ ತಂಡದವರು ಈಗ ಯಶಸ್ಸನ್ನು ಆನಂದಿಸುತ್ತಾ ಇದ್ದಾರೆ. ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ನಾಗ ಚೈತನ್ಯ, ಸಾಯಿ ಪಲ್ಲವಿ ಸೇರಿದಂತೆ ಎಲ್ಲರೂ ಸಿನಿಮಾ ಗೆಲುವಿನಿಂದ ಸಾಕಷ್ಟು ಖುಷಿ ಆಗಿದ್ದಾರೆ. ‘ತಾಂಡೇಲ್’ ಸಿನಿಮಾ ಇಷ್ಟು ದೊಡ್ಡ ಗೆಲುವು ಕಾಣುತ್ತದೆ ಅನ್ನೋದು ಮೊದಲೇ ಗೊತ್ತಿತ್ತಾ? ಹೌದು ಎನ್ನುತ್ತಾರೆ ಸಾಯಿ ಪಲ್ಲವಿ. ಈ ಬಗ್ಗೆ ಮೊದಲೇ ಸೂಚನೆ ಸಿಕ್ಕಿತ್ತು ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅದರಲ್ಲೂ ಒಬ್ಬರಿಗೆ ಈ ಬಗ್ಗೆ ಈ ವಿಚಾರದಲ್ಲಿ ಖಾತ್ರಿ ಇತ್ತು.
‘ತಾಂಡೇಲ್’ ಇದು ನೈಜ ಘಟನೆ ಆಧಾರಿತ ಸಿನಿಮಾ. ಈ ಚಿತ್ರದ ಸಕ್ಸಸ್ಮೀಟ್ನ ಇತ್ತೀಚೆಗೆ ಆಚರಿಸಲಾಯಿತು. ಈ ವೇಳೆ ನಿಜ ಜೀವನದ ತಾಂಡೇಲ್ ರಾಮ್ ರಾವ್ ಕೂಡ ಅಲ್ಲಿ ಇದ್ದರು. ಸಾಯಿ ಪಲ್ಲವಿ ಅವರು ಅವರಿಗೆ ಧನ್ಯವಾದ ಹೇಳಿದರು. ಸಾಯಿ ಪಲ್ಲವಿ ಅವರು ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.
‘ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುವಾಗ ನಾಗ ಚೈತನ್ಯ ಅವರಲ್ಲಿ ಒಂದು ಫೈಯರ್ ಇತ್ತು. ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆಯಲ್ಲಿ ಅವರು ಇದ್ದರು. ಅವರ ಲುಕ್ ಅಥವಾ ಪರಿಶ್ರಮದಿಂದ ಅವರು ಈ ಮಾತನ್ನು ಹೇಳಿರಲಿಲ್ಲ. ‘ತಾಂಡೇಲ್’ ಸಿನಿಮಾ ಆಡಿಯನ್ಸ್ಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಲಿದೆ ಎಂದು ಅವರಿಗೆ ಅನಿಸಿತ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ:ನಾಗ ಚೈತನ್ಯಗೆ ಮತ್ತೊಂದು ಗೆಲುವು ತಂದುಕೊಟ್ಟ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಅವರು ಸಕ್ಸಸ್ಮೀಟ್ ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು. ಅವರ ಜೊತೆ ನಾಗ ಚೈತನ್ಯ ಹಾಗೂ ಅಲ್ಲು ಅರವಿಂದ್ ಕೂಡ ಡ್ಯಾನ್ಸ್ ಮಾಡಿದರು. ಈ ಚಿತ್ರಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರೇ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ತಾಂಡೇಲ್ ಚಿತ್ರದಲ್ಲಿ ನಾಗ ಚೈತನ್ಯ ಮೀನುಗಾರನ ಪಾತ್ರ ಮಾಡಿದ್ದಾರೆ.
ನಾಗ ಚೈತನ್ಯ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಅವರು ಈ ಯಶಸ್ಸಿಗಾಗಿ ಬಹಳ ದಿನಗಳಿಂದ ಕಾಯುತ್ತಾ ಇದ್ದರು. ಕೊನೆಗೂ ಅವರಿಗೆ ಗೆಲುವು ಸಿಕ್ಕಿದೆ. ‘ತಾಂಡೇಲ್’ ಚಿತ್ರದಿಂದ ಅವರು ಗೆದ್ದು ಬಿಗಿದ್ದಾರೆ. ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ದೊಡ್ಡ ಮಟ್ಟದಲ್ಲಿ ತಿರುವು ಕೊಟ್ಟಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



