‘ಸಲಾರ್’ ಸಿನಿಮಾದ ಅವಧಿ ಎಷ್ಟು? ಸೆನ್ಸಾರ್ ಕೊಟ್ಟ ಪ್ರಮಾಣ ಪತ್ರ ಯಾವುದು?
Salaar: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಅವಧಿ ಎಷ್ಟು? ಸಿನಿಮಾಕ್ಕೆ ಯಾವ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ?

ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ವರ್ಷದ ಅತ್ಯಂತ ನಿರೀಕ್ಷಿತ ಟಾಪ್ ಐದು ಸಿನಿಮಾಗಳಲ್ಲಿ ‘ಸಲಾರ್’ ಸಹ ಒಂದು. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಇನ್ನೆರಡು ವಾರಗಳ ಒಳಗಾಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಹಲವು ಭಾಷೆಗಳಲ್ಲಿ, ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿರುವ ಕಾರಣ ನಿರ್ಮಾಣ ಸಂಸ್ಥೆಯು ಸಿನಿಮಾದ ಸೆನ್ಸಾರ್ ಪ್ರಕ್ರಿಯೆಯನ್ನು ಬೇಗನೆ ಪ್ರಾರಂಭ ಮಾಡಿದೆ.
ಕೆಲವು ಮೂಲಗಳ ಪ್ರಕಾರ, ‘ಸಲಾರ್’ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ನೀಡಲಾಗಿದೆಯಂತೆ. ಸಾಕಷ್ಟು ಹಿಂಸೆ, ಅಬ್ಬರದ ಸಂಗೀತಾ, ಬಂದೂಕು, ರಕ್ತಪಾತ ಇರುವ ಕಾರಣ ‘ಸಲಾರ್’ ಸಿನಿಮಾಕ್ಕೆ ಎ ದೊರೆತಿದೆ. ಭಾರತದ ಹೊರಗೆ ಕೆಲವು ದೇಶಗಳಲ್ಲಿ ಇಲ್ಲಿನ ಯು/ಎ ಅನ್ನು ಹೋಲುವ ಪ್ರಮಾಣ ಪತ್ರ ದೊರೆತಿದೆ ಎನ್ನಲಾಗುತ್ತಿದೆ.
ಇನ್ನು ‘ಸಲಾರ್’ ಸಿನಿಮಾವು ಎರಡು ಗಂಟೆ 55 ನಿಮಿಷ ಉದ್ದವಿದೆ. ಸಿನಿಮಾದ ಒಂದು ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಿನಿಮಾದ ಇನ್ನೊಂದು ಟ್ರೈಲರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತದೆ. ಆ ಟ್ರೈಲರ್ ಲಾಂಚ್ಗಾಗಿ ಅದ್ಧೂರಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಅದ್ಧೂರಿ ಕಾರ್ಯಕ್ರಮವು ಇದೇ ತಿಂಗಳು 16 ಹಾಗೂ 18ರ ನಡುವೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ:‘ಸಲಾರ್’ ವರ್ಸಸ್ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್ ಖಾನ್ ಮೇಲುಗೈ
ಈಗಾಗಲೇ ಬಿಡುಗಡೆ ಆಗಿರುವ ‘ಸಲಾರ್’ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡಿದೆ. ‘ಸಲಾರ್’ ಸಿನಿಮಾವು ಕನ್ನಡದ ‘ಉಗ್ರಂ’ ಸಿನಿಮಾದ ರೀಮೇಕ್ ಎಂಬುದನ್ನು ಸಹ ಟ್ರೈಲರ್ ಸಾರಿ ಹೇಳಿದೆ. ಆದರೆ ‘ಉಗ್ರಂ’ಗಿಂತಲೂ ಅದ್ಧೂರಿಯಾಗಿ ‘ಸಲಾರ್’ ಅನ್ನು ಮಾಡಲಾಗಿದೆ. ‘ಕೆಜಿಎಫ್’ ಮಾದರಿಯಲ್ಲಿಯೇ ಮಹಾ ಕ್ರೂರಿಗಳೇ ಇರುವ ಲೋಕವೊಂದನ್ನು ಪ್ರಶಾಂತ್ ನೀಲ್ ಇಲ್ಲಿಯೂ ಸೃಷ್ಟಿ ಮಾಡಿದ್ದಾರೆ. ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ.
ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಇವರಷ್ಟೆ ಅಲ್ಲದೆ, ಜಗಪತಿ ಬಾಬು, ಕನ್ನಡದ ಗರುಡ ರಾಮಚಂದ್ರ, ಮಧು ಗುರುಸ್ವಾಮಿ, ರತ್ನನ್ ಪ್ರಪಂಚ ಖ್ಯಾತಿಯ ಪಂಜು ಸೇರಿದಂತೆ ಕೆಲವು ಹೆಸರಾಂತ ಬಾಲಿವುಡ್ ಹಾಗೂ ತೆಲುಗಿನ ನಟ-ನಟಿಯರು ಸಹ ಇದ್ದಾರೆ. ಬಾಲಿವುಡ್ನ ಸಿಮ್ರತ್ ಕೌರ್ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ